ಮಂಗಳೂರು: ಮಳಲಿ ಮಸೀದಿ ನವೀಕರಣ ಸಂದರ್ಭ ದೇವಾಲಯ ಮಾದರಿಯ ರಚನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಾಲಯವು ಜೂ. 9ಕ್ಕೆ ಮುಂದೂಡಿದೆ.
ಜ್ಞಾನವಾಪಿ ಮಾದರಿಯಲ್ಲಿ ಕೋರ್ಟ್ ಕಮಿಷನರ್ ಮೂಲಕ ಪುರಾತತ್ವ ಇಲಾಖೆಯ ನೆರವಿನಲ್ಲಿ ಸರ್ವೆ ನಡೆಸಬೇಕು ಎಂದು ವಿಎಚ್‌ಪಿ ಪರ ವಕೀಲರು ಮನವಿ ಮಾಡಿದ್ದಾರೆ. ಇದಕ್ಕೆ ಮಸೀದಿ ಆಡಳಿತ ಮಂಡಳಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮಸೀದಿ ಆಡಳಿತ ಮಂಡಳಿ ಪರ ವಾದ ಮಂಡಿಸಿದ ವಕೀಲ ಎಂ.ಪಿ. ಶೆಣೈ ಅವರು, ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿಯಾಗಿ ನಮೂದಾಗಿರುವುದರಿಂದ ಇದರ ವಿಚಾರಣೆ ನಡೆಸಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರ
ವಿಲ್ಲ. ವಕ್ಫ್ ಟ್ರಿಬ್ಯೂನಲ್‌ಗೆ ಮಾತ್ರ ಅಧಿಕಾರವಿದೆ ಎಂದು ವಾದಿಸಿದರು.
ವಿ.ಹಿಂ.ಪ.ಪರ ವಕೀಲ ಚಿದಾನಂದ ಕೆದಿಲಾಯ ಅವರು ವಾದ ಮಂಡನೆಗೆ ಕಾಲಾವಕಾಶ ಕೇಳಿದ್ದು ನ್ಯಾಯಾಲಯವು ಜೂ. 9ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.