Advertisement

ಮಳಲಿ ಮಸೀದಿ ವಿವಾದ ವಿಚಾರದಲ್ಲಿ ನ್ಯಾಯಾಲಯ ತೀರ್ಪು ಸ್ವಾಗತಾರ್ಹ ಡಾ.ಭರತ್ ಶೆಟ್ಟಿ ವೈ

02:42 PM Nov 09, 2022 | Team Udayavani |

ಮಂಗಳೂರು: ಮಳಲಿ ಮಸೀದಿ ಒಳಭಾಗದಲ್ಲಿ ಹಿಂದೂ ಧರ್ಮದ ಕುರುಹುಗಳಿರುವ ಕಟ್ಟಡದ ಕುರಿತ ವಿಚಾರಣೆ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೆ ಇದೆ ಎಂದು ಕೋರ್ಟ್ ಹೇಳಿರುವುದು ಸ್ವಾಗತಾರ್ಹವಾಗಿದೆ .ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯ ವಿಚಾರ ಜನತೆಗೆ ತಿಳಿಯುವಂತಾಗಬೇಕು ಎಂದು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.

Advertisement

ನ್ಯಾಯಲಯದ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಅವರು ಈ ವಿವಾದದ ಕುರಿತ ಇತರ ಅರ್ಜಿಗಳ ವಿಚಾರಣೆಗೆ ಜನವರಿ 8ಕ್ಕೆ ದಿನಾಂಕ ನಿಗದಿ ನ್ಯಾಯಾಲಯ ನಿಗದಿ ಮಾಡಿದೆ.

ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿ ಆಗಿರುವುದರಿಂದ ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆ ಅಧಿಕಾರವಿಲ್ಲ ಎಂದು ಅರ್ಜಿ ಸಲ್ಲಿಸಿದ್ದ ಮಸೀದಿ ಪರ ವಕೀಲರ ವಾದಕ್ಕೆ ಮನ್ನಣೆ ದೊರೆತಿಲ್ಲ.

ವಕ್ಫ್ ಕೂಡ ನಮ್ಮ ಸರಕಾರದ ಅಂಗವಾಗಿರುವುದರಿಂದ ಅದಕ್ಕೆ ಬೇರೆ ನ್ಯಾಯಲಯ,ಕಾನೂನು ಎಂಬ ಭಾವನೆ ಬೇಡ.ನ್ಯಾಯಾಲಯವು ವಿಚಾರಣೆ ನಡೆಸಿ ಸೂಕ್ತ ತೀರ್ಪು ಹೊರಬರುವ ವಿಶ್ವಾಸವನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಬಿಜೆಪಿ ಆಕ್ರೋಶ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next