Advertisement

ಮಳಲಿ ಮಸೀದಿ ಪ್ರಕರಣ ಸೆ.27ರಂದು ತೀರ್ಪು

07:21 PM Sep 22, 2022 | Team Udayavani |

ಮಂಗಳೂರು:  ದ.ಕ ಜಿಲ್ಲೆಯ ಮಳಲಿ ಮಸೀದಿ ನವೀಕರಣಕ್ಕೆ ಸಂಬಂಧಿಸಿ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮಂಗಳೂರಿನ  ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯವು ಸೆ.27ರಂದು ತೀರ್ಪು ಹೊರಡಿಸಲಿದೆ.

Advertisement

ಈ ಪ್ರಕರಣದಲ್ಲಿ ಮೂಲದಾವೆಯನ್ನು ಆಲಿಸಲು ವಿಚಾರಣಾಧೀನ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಕುರಿತಂತೆ ನ್ಯಾಯಾಲಯ ಆದೇಶ ಹೊರಡಿಸಲಿದೆ.

ಈ ಆದೇಶ ಹೊರಡಿಸಿದ ಬಳಿಕವಷ್ಟೇ ಉಳಿದೆಲ್ಲಾ ಬಾಕಿ ಇರುವ ಅರ್ಜಿಗಳ ವಿಚಾರಣೆ ನಡೆಸುವಂತೆ ಈ ಹಿಂದೆಯೇ ಹೈಕೋರ್ಟ್‌ ಆದೇಶಿಸಿತ್ತು.

 

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next