Advertisement

ಮಳಲಿ ದರ್ಗಾದಲ್ಲಿ ದೇಗುಲ ಕುರುಹು : ಅಷ್ಟಮಂಗಲ ಪ್ರಶ್ನೆಗೆ ವಿಎಚ್‌ಪಿ ನಿರ್ಧಾರ

11:49 PM May 16, 2022 | Team Udayavani |

ಮಂಗಳೂರು : ನಗರ ಹೊರವಲಯದ ಮಳಲಿಯ ದರ್ಗಾವೊಂದರ ಒಳಭಾಗದಲ್ಲಿ ದೇವಸ್ಥಾನದ ಕುರುಹುಗಳು ಕಂಡು ಬಂದಿವೆ ಎನ್ನಲಾದ ಹಿನ್ನೆಲೆಯಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಲು ವಿಶ್ವ ಹಿಂದೂ ಪರಿಷತ್‌ ತೀರ್ಮಾನಿಸಿದೆ.

Advertisement

ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಅಸಯ್ಯಿದ್‌ ಅಬ್ದುಲ್ಲಾಹಿಲ್‌ ಮದನಿ ದರ್ಗಾದ ನವೀಕರಣದ ಸಲುವಾಗಿ ಮುಂಭಾಗವನ್ನು ಕೆಡವಲಾಗಿತ್ತು. ಆಗ ಒಳಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿದೆ ಎಂದು ಹಿಂದುಪರ ಸಂಘಟನೆಗಳು ಹೇಳಿದ್ದವು. ಹಾಗಾಗಿ ಜಾಗದ ಧಾರ್ಮಿಕ ಮಹತ್ವ ತಿಳಿಯಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ.

ಕೇರಳದಿಂದ ಪೊದುವಾಳ್‌ರನ್ನು ಕರೆಸಿ ಪ್ರಶ್ನಾ ಚಿಂತನೆಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಇದರ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

ಸದ್ಯ ಈ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಗೊಂಡಿದ್ದು, ಜಿಲ್ಲಾಡ ಳಿತ ವತಿಯಿಂದ ಹಳೆಯ ಭೂ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಊರಿನವರೆಲ್ಲರೂ ತಾಂಬೂಲ ಪ್ರಶ್ನೆ ಅಥವಾ ಅಷ್ಟಮಂಗಲ ಪ್ರಶ್ನೆ ಇರಿಸುವುದಕ್ಕೆ ಇಚ್ಛೆ ವ್ಯಕ್ತಪಡಿಸಿದ್ದಾರೆ. ದೇವಸ್ಥಾನವಿತ್ತೇ, ಎಷ್ಟು ಸಮಯ ಹಿಂದಿನದ್ದು, ಯಾವ ದೇವರಿದ್ದರು ಇತ್ಯಾದಿ ಕುತೂಹಲಗಳಿರುವುದರಿಂದ ಇದನ್ನು ನಡೆಸುವ ಬಗ್ಗೆ ಯೋಚಿ ಸು ತ್ತಿರುವುದಾಗಿ ವಿಶ್ವ ಹಿಂದು ಪರಿಷತ್‌ ವಿಭಾಗ ಸಂಚಾಲಕ ಶರಣ್‌ ಪಂಪ್‌ವೆಲ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next