ಮುಂಬಯಿ: ಅಸಮಾನತೆ, ಜಾತಿಯತೆ, ಮೇಲುಕೀಳು, ಶೋಷಣೆ ಮತ್ತು ಮೂಢನಂಬಿಕೆ ಇಂತವುಗಳಿಂದ ದೂರ ಉಳಿಯುವ ಅಗತ್ಯ ಇಂದಿನ ಜನತೆಗಿದೆ. ಇದನ್ನೆಲ್ಲಾ ಮೆಟ್ಟಿನಿಂತು ಮಾನವೀಯ ತತ್ವಾದರ್ಶ ಮತ್ತು ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿ ಬಾಳಿದಾಗ ಸಾಮರಸ್ಯದ ಬದುಕು ಸಾಧ್ಯವಾಗುವುದು. ಅದಕ್ಕಾಗಿ ಇಂತಹ ಸ್ನೇಹ ಸಮ್ಮಿಲನಗಳು ಪೂರಕವಾಗಿವೆ. ಇದನ್ನು ಮನವರಿಸಿ ನಮ್ಮ ಸಂಸ್ಥೆಯು ವಾರ್ಷಿಕವಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಸ್ಥೆಯ ಕರ್ಮಚಾರಿ, ಗ್ರಾಹಕರ ಸೇವೆಯನ್ನು ಗುರುತಿಸಿ ಗೌರವಿಸುತ್ತಾ ಅನ್ಯೋನ್ಯತೆಗೆ ಶ್ರಮಿಸುತ್ತಿದೆ. ಕನಿಷ್ಠ ಉದ್ಯೋಗಸ್ಥ ಪರಿವಾರದಲ್ಲಿ ಇಂತಹ ಆದರ್ಶಗಳನ್ನು ಪರಿಪಾಲಿಸುವಲ್ಲಿ ಸಹಕಾರಿಯಾಗಲಿದೆ. ಎಲ್ಲರೂ ನುಡಿದಂತೆ ನಡೆದರೆ ಸಮಾಜದಲ್ಲಿ ಬದಲಾವಣೆ ಸುಲಭ ಸಾಧ್ಯ ಎಂದು ಮಲೈಕಾ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಿಲ್ಬರ್ಟ್ ಬ್ಯಾಪಿuಸ್ಟ್ ನುಡಿದರು.
ಡಿ. 27 ರಂದು ಸಂಜೆ ಮೀರಾರೋಡ್ ಪೂರ್ವದ ಹಾರ್ದಿಕ್ ಪ್ಯಾಲೇಸ್ ಹೊಟೇಲ್‌ನ ಲಾನ್‌ನಲ್ಲಿ ಗೃಹಪಯೋಗಿ ವಸ್ತುಗಳ ಮಾರಾಟ ಹಾಗೂ ವಿತರಣೆಗೆ ಮನೆ ಮಾತಾಗಿರುವ ತುಳು ಕನ್ನಡಿಗರ ಹೆಸರಾಂತ ಮಲೈಕಾ ಸಮೂಹವು ಆಯೋಜಿಸಿದ್ದ 2017ನೇ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತ ನಾಡಿದ ಅವರು, ಸಾಮರಸ್ಯದ ಬದುಕು ಮುಂದಿನ ಪೀಳಿಗೆಗೆ ಒಳ್ಳೆಯ ವಾತಾವರಣದ ಕೊಡುಗೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ವರ್ಣ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಪ್ರಕಾಶ್ ಭಟ್ ಮುಡಿಪು, ವರ್ಣ ಸಂಸ್ಥೆಯ ಉಪಾಧ್ಯಕ್ಷ ಪೂರ್ಣಾನಂದ ಶೇರೆಗಾರ್, ಮಲೈಕಾ ಸಂಸ್ಥೆಯ ನಿರ್ದೇಶಕಿ ಮಾರ್ಸೆಲಿನಾ ಜಿ. ಬ್ಯಾಪಿuಸ್ಟ್, ಮಲೈಕಾ ಬ್ಯಾಪಿuಸ್ಟ್, ಅನಿಲ್ ಜಿಗರ್ ಪೊಪ್ತಾನಿ, ಯಶಿಕಾ ಜಿ. ಬ್ಯಾಪಿuಸ್ಟ್, ಜೆಸ್ಸಿ ಡಿ’ಸೋಜಾ, ಜಿತೇಂದ್ರ ಪರ್ದೇಶಿ ಮತ್ತಿತರರು ಶುಭ ಹಾರೈಸಿದರು.
ಸಂಸ್ಥೆಯ ಹಿರಿಯ ಸಿಬ್ಬಂದಿಗಳಾದ ಚಂದ್ರ ಶೇಖರ್ ನಾಯ್ಕ, ಸುರೇಶ್ ಸಾವಂತ್, ನಂದಲಾಲ್ ತಿವಾರಿ, ರಿತೇಶ್ ಶಾØ, ಮಲೈಕಾ ಮಲ್ಟಿ-ಸ್ಟೇಟ್ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ರಂಜಿ ಜೋಸ್ ಮತ್ತು ಸಹೋದ್ಯೋಗಿ ತಂಡಕ್ಕೆ ಸಾಧಕ ಫಲಕಗಳನ್ನಿತ್ತು, ಪ್ರಸನ್ನ ಬಿಡೆ, ರಾಕೇಶ್ ಅಟಾನಿ, ಸುನೀಲ್ ಚವ್ಹಾಣ್, ಅಪlಲ್ ಶೇಖ್, ಅಜೇಯ್ ಯಾದವ್ ಅವರಿಗೆ ಸಾಧಕ ಸರ್ಟಿಫಿಕೇಟ್‌ಗಳನ್ನು ಪ್ರದಾನಿಸಿ ಗೌರವಿಸಿದರು.
ಕು| ಸುಪ್ರಿತಾ ಪಿ. ಬಿಡೆ, ಮಾ| ಶರತ್ ಸಿ. ಸುದರ್ಶನ್, ಕು| ಶಿವಾನಿ ಎಸ್. ಮಿಶ್ರಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಲಾಯಿತು. ಮಹಾನಗರದಾದ್ಯಂತ ಸೇವಾ ನಿರತ ಮಲೈಕಾ ಅಪ್ಲೆ„ಯನ್ಸಸ್‌ನ ಎಲ್ಲಾ ಮಳಿಗೆಗಳಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿದ ದಹಿಸರ್ ಶಾಖೆಗೆ ಅತ್ಯುತ್ತಮ ಶಾಖೆ ಗೌರವ ಮತ್ತು ಮಹೇಂದ್ರ ಸಾವಡೇಕರ್ ಅವರಿಗೆ ವರ್ಷದ ಸರ್ವೋತ್ತಮ ಅಧಿಕಾರಿ ಗೌರವ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಲೈಕಾ ಸಂಸ್ಥೆಯ ಉನ್ನತಾಧಿಕಾರಿಗಳಾದ ಎಲ್ಸಿ ಜೆ. ರೋಡ್ರಿಗಸ್, ಮನೋಹರ್ ಆರ್. ಶೆಟ್ಟಿ, ತೇಜಾ ರವೀಂದ್ರ ಶೆಟ್ಟಿ, ಸುಶಾಂತ್ ಎಸ್. ಸಬತ್, ಲೋವೆಲ್ ಬ್ಯಾಪಿuಸ್ಟ್, ಪ್ರಕಾಶ್ ಕೋಟ್ಯಾನ್, ರಮನ್ ಐಯ್ಯರ್, ಸದಾನಂದ್ ಕುಂದರ್, ಕೃಷ್ಣ ಪೂಜಾರಿ ಶಂಭೂರು, ಅಲ್ಬನ್ ನೊರೋನ್ಹಾ, ಸುಂದರ್ ಪೂಜಾರಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಮಲೈಕಾ ಬ್ಯಾಪಿuಸ್ಟ್ ಸ್ವಾಗತಿಸಿದರು. ರೋನಾಲ್ಡ್ ಮಿನೇಜಸ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಕೋಟ್ಯಾನ್ ಅವರಿಂದ ಸಂಗೀತ ಕಾರ್ಯಕ್ರಮ, ಕೆ. ಸುರೇಶ್ ಅವರಿಂದ ಮ್ಯಾಜಿಕ್ ಶೋ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಸಂತೋಷ್ ತಿಂಗಳಾಯ ವಂದಿಸಿದರು.
ಚಿತ್ರ -ವರದಿ : ರೋನ್ಸ್ ಬಂಟ್ವಾಳ್