Advertisement

Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?

04:43 PM Sep 12, 2024 | Team Udayavani |

ಮುಂಬಯಿ: ಬಾಲಿವುಡ್‌ (Bollywood) ನಟಿ ಮಲೈಕಾ ಆರೋರಾ(Malaika Arora) ಅವರ ತಂದೆ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ.

Advertisement

ಬುಧವಾರ(ಸೆ.11ರಂದು) ಬಾಂದ್ರಾದಲ್ಲಿರುವ ತನ್ನ ನಿವಾಸದಿಂದ ಹಾರಿ ಅನಿಲ್ ಮೆಹ್ತಾ(Anil Mehta) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾದ ಬಾಬಾ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿ ಹೊರಬಿದ್ದಿದೆ.

ಇದನ್ನೂ ಓದಿ: Dosa King: ಜೊತೆಯಾಗಲಿದ್ದಾರೆ ಹೇಮಂತ್‌ – ಜ್ಞಾನವೇಲ್; ತೆರೆಗೆ ಬರಲಿದೆ ʼಸರವಣ ಭವನ್ ಕೇಸ್‌ʼ

ಕಟ್ಟಡದಿಂದ ಹಾರಿದ ಪರಿಣಾಮ ಅನಿಲ್ ಮೆಹ್ತಾ ಅವರಿಗೆ ಬಹು ಗಾಯಗಳಾಗಿವೆ ಇದರಿಂದಲೇ ಅವರು ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿರುವುದಾಗಿ ʼನ್ಯೂಸ್‌ 18ʼ ವರದಿ ಮಾಡಿದೆ.

Advertisement

ಪ್ರತಿ ದಿನದಂತೆ ಅನಿಲ್‌ ಬುಧವಾರ ಬೆಳಗ್ಗೆ ಬಾಲ್ಕನಿಯಲ್ಲಿ ಪ್ರತಿಕೆ ಓದುತ್ತಾ ಕೂತಿದ್ದರು. ಅವರನ್ನು ಕರೆಯಲು ಮಲೈಕಾ ತಾಯಿ ಜೋಯಿಸ್ ಹೋಗಿದ್ದಾರೆ. ಈ ವೇಳೆ ಅವರ ಕೂಗಿಗೆ ಅನಿಲ್‌ ಪ್ರತಿಕ್ರಿಯೆ ನೀಡದೆ ಇದ್ದಾಗ, ಬಾಲ್ಕನಿಗೆ ಬಂದು ನೋಡಿದ್ದಾರೆ. ಈ ವೇಳೆ ಅವರು ಕಟ್ಟಡದಿಂದ ಹಾರಿ ಕೆಳಗೆ ಬಿದ್ದಿದ್ದಾರೆ. ಅವರು ಯಾವುದೇ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಅವರಿಗೆ ಮೊಣಕಾಲು ನೋವು ಮಾತ್ರ ಇತ್ತು ಎಂದು ಜೋಯಿಸ್ ಹೇಳಿದ್ದಾರೆ.

ಸಾಯುವ ಮೊದಲು ಅನಿಲ್‌ ಮಕ್ಕಳಾದ ಮಲೈಕಾ ಮತ್ತು ಅಮೃತಾಗೆ ಕರೆ ಮಾಡಿ “ನನಗೆ ಹುಷಾರಿಲ್ಲ ಸುಸ್ತಾಗಿದೆ” ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.