ಮುಂಬಯಿ: ಬಾಲಿವುಡ್ ಲವ್ ಬರ್ಡ್ಸ್ ಅರ್ಜುನ್ ಕಪೂರ್ ಹಾಗೂ ಮಲೈಕಾ ಆರೋರಾ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ನಲ್ಲಿರುವುದು ಗೊತ್ತೇ ಇದೆ. ಇಬ್ಬರ ನಡುವಿನ ರಿಲೇಷನ್ ಶಿಪ್ ಮದುವೆ ಹಂತಕ್ಕೆ ಬಂದು ತಲುಪಿದೆ ಎನ್ನುವ ಗಾಸಿಪ್ ಗಳು ಬಿಟೌನ್ ನಲ್ಲಿ ಹರಿದಾಡುತ್ತಿದೆ.
ಮಲೈಕಾ ಅರ್ಜುನ್ ಅವರಿಗಿಂತ ದೊಡ್ಡವರು. ಇಬ್ಬರ ರಿಲೇಷನ್ ಶಿಪ್ ಬಗ್ಗೆ ಹಲವು ಬಾರಿ ಟ್ರೋಲ್ ಗಳು ಕೂಡ ಆಗಿವೆ. ಆದರೆ ಇಬ್ಬರೂ ಅವುಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪರಸ್ಪರ ಜೊತೆಯಾಗಿ ತಿರುಗಾಟ, ವ್ಯಾಕೇಷನ್ ನ್ನು ಕಳೆದಿದ್ದಾರೆ. ಮಲೈಕಾ – ಅರ್ಜುನ್ ಪರಸ್ಪರ ಇಬ್ಬರನ್ನು ಗೌರವದಿಂದ ಕಾಣುತ್ತಾರೆ.
ಬಾಲಿವುಡ್ ಜೋಡಿಯ ಬಗ್ಗೆ ಅನೇಕ ಬಾರಿ ಗಾಸಿಪ್ ಗಳು ಹಬ್ಬಿದೆ. ಸದ್ಯ ಮಲೈಕಾ – ಅರ್ಜುನ್ ಏರ್ ಪೋರ್ಟ್ ವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ. ಅದಕ್ಕೆ ಕಾರಣ ಇತ್ತೀಚೆಗೆ ಮಲೈಕಾ ಅವರು ಮದುವೆಯ ಬಗ್ಗೆ ಸುಳಿವು ನೀಡಿದ ಹೇಳಿಕೆ.
ಸಂದರ್ಶನವೊಂದರಲ್ಲಿ ಬಾಲಿವುಡ್ ಮುನ್ನಿ, ನಟಿ ಮಲೈಕಾ “ನಾನೀಗ ಜೀವನದ ಮಹತ್ವದ ಘಟ್ಟದಲ್ಲಿದ್ದೇನೆ ಎಂದು ನನಗೆ ಅನ್ನಿಸುತ್ತದೆ. ಮುಂದಿನ 30 ವರ್ಷಗಳ ಕಾಲ ನಾನು ಈ ರೀತಿ ಕೆಲಸ ಮಾಡಲು ಬಯಸುತ್ತೇನೆ. ನಾನು ಹೊಸತನ್ನು ಅನ್ವೇಷಿಸಲು ಬಯಸುತ್ತೇನೆ. ಜೀವನದಲ್ಲಿ ಮುಂದೆ ಪ್ರಯಾಣಿಸಲು ಬಯಸುತ್ತೇನೆ. ನನ್ನ ಹಾಗೂ ಅರ್ಜುನ್ ನಡುವಿನ ಸಂಬಂಧವನ್ನು ನಾನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾನು ಇಷ್ಟಪಡುತ್ತೇನೆ. ನಾವಿಬ್ಬರೂ ಇದಕ್ಕೆ ಸಿದ್ಧರಿದ್ದೇವೆ” ಎಂದು ಹೇಳಿದ್ದರು.
ಇದಾದ ಬಳಿಕ ಮಲೈಕಾ ಹಾಗೂ ಅರ್ಜುನ್ ಒಂದೇ ಏರ್ ಪೋರ್ಟ್ ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವುದು ಇಬ್ಬರು ಮದುವೆಯಾಗಲು ಸಿದ್ದತೆಯನ್ನು ನಡೆಸುತ್ತಿದ್ದಾರೆ ಎನ್ನುವ ಹಾಟ್ ಗಾಸಿಪ್ ನ್ನು ಹಬ್ಬಿಸಿದೆ.
ನೆಟ್ಟಿಗರು ಇಬ್ಬರನ್ನು ನೋಡಿ, ಇವರಿಬ್ಬರೂ ಈಗ ಮದುವೆಯಾಗುವುದು ಸೂಕ್ತವೆಂದು ಕಮೆಂಟ್ ಮಾಡಿದ್ದಾರೆ.