ಮುಂಬಯಿ: ಮಲಾಡ್ ಪೂರ್ವದ ಇರಾನಿ ಕಾಲನಿಯ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ 63 ನೇ ವಾರ್ಷಿಕ ಮಹಾಪೂಜೆಯ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ, ಸಾಂಸ್ಕೃತಿಕ, ಸಮ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮಾ. 17 ರಂದು ಮಂದಿರದ ಆವರಣದಲ್ಲಿ ಸಂಜೆ ನಡೆಯಿತು.
ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಇರಾನಿ ಕಾಲನಿಯ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಸ್ಥಾಪಕ ಸದಸ್ಯ ಸೇಸಪ್ಪ ದೇವಾಡಿಗ ಇವರನ್ನು ಸಮ್ಮಾನಿಸಲಾಯಿತು.
ಸಮಾರಂಭದಲ್ಲಿ ಅವರ ಪರಿವಾರ ಸದಸ್ಯರು, ಮುಖ್ಯ ಅತಿಥಿ ಉದ್ಯಮಿ ದಯಾನಂದ ಬಂಗೇರ, ಸಮಿತಿಯ ಅಧ್ಯಕ್ಷ ಬಿ. ದಿವಾಕರ ಡಿ. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಎಚ್. ಎಸ್. ಕರ್ಕೇರ ಮತ್ತು ಎಂ. ಎನ್. ಸುವರ್ಣ, ಜತೆ ಕೋಶಾಧಿಕಾರಿಗಳಾದ ಮೋಹನ್ ಜಿ. ಬಂಗೇರ, ಕರುಣಾಕರ ಎನ್. ಸಾಲ್ಯಾನ್, ಸದಸ್ಯರುಗಳಾದ ಎಸ್. ಪಿ. ದೇವಾಡಿಗ, ಸತೀಶ್ ಎ. ಸಾಲ್ಯಾನ್, ಅತುಲ್ ಓಜಾ, ಎಸ್. ಯು. ಬಂಗೇರ, ಎಂ. ಎನ್. ಕೋಟ್ಯಾನ್, ಬಿ. ಎಚ್. ಹೆಜಮಾಡಿ, ಕೆ. ಎನ್. ಸಿ. ಸಾಲ್ಯಾನ್, ಪಿ. ಆರ್. ಅಮೀನ್, ಜಯಾ ಎಂ. ಬಂಗೇರ, ಪೂಜಾ ಅರ್ಚಕ ಸುಧಾಕರ ಎಂ. ಶೆಟ್ಟಿ, ಭುವಾಜಿ ಎಸ್. ಯು. ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 62 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಪೂಜಾ ಸಮಿತಿಯ ಸಿದ್ಧಿಸ-ಸಾಧನೆಗಳ ಸ್ಮರಣ ಸಂಚಿಕೆಯನ್ನು ಮುಖ್ಯ ಅತಿಥಿ ದಯಾನಂದ ಬಂಗೇರ, ಅಧ್ಯಕ್ಷ ಬಿ. ದಿವಾಕರ ಡಿ. ಶೆಟ್ಟಿ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಕ್ರೀಡೆ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯಂತ ಅಂಕಗೊಳಿಸಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜಯಾ ಎಂ. ಬಂಗೇರ, ಸವಿತಾ ದಾಸ್ ಕಾರ್ಯಕ್ರಮ ನಿರ್ವಹಿಸಿದರು. ಸ್ನೇಹಾ ಬಂಗೇರ ಬಹುಮಾನ ವಿಜೇತರ ಯಾದಿಯನ್ನು ವಾಚಿಸಿದರು.
ಬೆಳಗ್ಗೆ ವೇದಮೂರ್ತಿ ಕೆ. ಗೋವಿಂದ ಭಟ್ ಇವರ ಮಾರ್ಗದರ್ಶನದಲ್ಲಿ ಗಣಹೋಮ, ಅಶ್ವಥಪೂಜೆ, ಮಹಾಪ್ರಸಾದ ವಿತರಣೆ, ಪಲ್ಲಪೂಜೆ, ಮಹಾಆರತಿ, ಅನ್ನಸಂತರ್ಪಣೆ, ಸಮಿತಿಯ ಸದಸ್ಯರಿಂದ ಶ್ರೀ ಶನಿಗ್ರಂಥ ಪಾರಾಯಣ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ಮಾಯದ ಮಾಯಿಲೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ನೇತಾರರು, ಕನ್ನಡೇತರರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
ಚಿತ್ರ-ವರದಿ:ರಮೇಶ್ ಅಮೀನ್