Advertisement

ಮಲಬಾರ್‌ ಗೋಲ್ಡ್‌ ಮಳಿಗೆ ಉದ್ಘಾಟನೆ

06:23 AM Feb 05, 2019 | |

ಬೆಂಗಳೂರು: ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌(ಎಂಜಿಡಿ) ಸಂಸ್ಥೆ ನಗರದ ವೈಟ್‌ಫೀಲ್ಡ್‌ನಲ್ಲಿರುವ ಫೋರಂ ಶಾಂತಿನಿಕೇತನ ಮಾಲ್‌ನಲ್ಲಿ 3ನೇ ಎಂಜಿಡಿ ಲೈಫ್ಸ್ಟೈಲ್‌ ಜ್ಯುವೆಲ್ಲರಿ ಮಳಿಗೆ ಆರಂಭಿಸಿದೆ.

Advertisement

ಮಲಬಾರ್‌ ಗ್ರೂಪ್‌ನ ಮುಖ್ಯಸ್ಥ ಎಂ.ಪಿ.ಅಹಮ್ಮದ್‌ ಅವರು ಮಳಿಗೆಗೆ ಚಾಲನೆ ನೀಡಿದರು. ಮಲಬಾರ್‌ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ (ಭಾರತ)ಓ. ಅಶೆರ್‌ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಗ್ರಾಹಕರು ಮತ್ತು ಸಂಸ್ಥೆಯ ಹಿತೈಷಿಗಳು ಕಾರ್ಯಕ್ರಮದಲ್ಲಿದ್ದರು.

ಎಂಜಿಡಿ ಲೈಫ್ಸ್ಟೈಲ್‌ ಜ್ಯುವೆಲ್ಲರಿ ಮಳಿಗೆಯು ಇತ್ತೀಚಿನ ಹೊಸ ಟ್ರೆಂಡ್‌ ಹಾಗೂ ಹಗುರವಾದ ಜ್ಯುವೆಲ್ಲರಿಗಳ ವಿವಿಧ ಆಕರ್ಷಕ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದೆ. ಆಧುನಿಕ ಮಹಿಳೆಯರು, ಉದ್ಯೋಗಸ್ಥರು, ಯುವ ಮಹಿಳೆಯರು ಇಷ್ಟಪಡುವ ವಿನ್ಯಾಸ ಮತ್ತು ಸಂಗ್ರಹದ ಚಿನ್ನಾಭರಣದಲ್ಲಿದೆ.

ಉತ್ತಮ ವಿನ್ಯಾಸ ರೂಪಿಸುವಲ್ಲಿ ಜ್ಯುವೆಲ್ಲರಿಗಳ ಸಂಗ್ರಹಕ್ಕೆ ಮಳಿಗೆ ಖ್ಯಾತಿ ಪಡೆದಿದೆ. ಹೀಗಾಗಿ ಯುವ ಪೀಳಿಗೆ ಮತ್ತು ಮಹಿಳೆಯರು ಇಷ್ಟಪಡುವ ಹೊಸ ವಿನ್ಯಾಸ ಮತ್ತು ಹಗುರವಾಗಿರುವ ಎಲ್ಲ ವಿಧದ 18 ಕ್ಯಾರಟ್‌ ಚಿನ್ನ ಮತ್ತು ವಜ್ರ ಸಹಿತವಾದ ಚಿನ್ನಾಭರಣದ ಸಂಗ್ರಹ ಇಲ್ಲಿದೆ.

ನಿತ್ಯ ಬಳಕೆಗೆ ಹಾಗೂ ವಿವಿಧ ಸಭೆ ಸಮಾರಂಭಕ್ಕೂ ಜ್ಯುವೆಲ್ಲರಿಗಳನ್ನು ಬಳಸಬಹುದಾಗಿದೆ. ಯುರೋಪ್‌ ಹಾಗೂ ಏಷ್ಯಾ ಖಂಡಗಳ ವಿವಿಧ ದೇಶದ ಸುಪ್ರಸಿದ್ಧ ಚಿನ್ನಾಭರಣ ಇಲ್ಲಿ ಇರುವುದರಿಂದ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ನ‌ ಇತರೆ ಮಳಿಗೆಗಳಿಗಿಂತ ಇದು ಭಿನ್ನವಾಗಿದೆ.

Advertisement

1993ರಲ್ಲಿ ಕೇರಳದಲ್ಲಿ ಆರಂಭಗೊಂಡ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ ಸಂಸ್ಥೆ ಇಂದು ಗ್ರಾಹಕರ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಅತಿವೇಗವಾಗಿ ಬೆಳೆಯುತ್ತಿದೆ. ಭಾರತದ ವಿವಿಧ ರಾಜ್ಯಗಳು, ಒಮನ್‌, ಕತಾರ್‌, ಯುಎಸ್‌ಎ, ಯುಎಇ, ಸೌದಿ ಅರೇಬಿಯಾ ಹೀಗೆ ವಿದೇಶದಲ್ಲೂ ತನ್ನ ಮಳಿಗೆಯನ್ನು ಹೊಂದಿದೆ.

ಮಲಬಾರ್‌ ಗ್ರೂಪ್‌ 25ನೇ ವರ್ಷದ ಸಂಭ್ರಮದಲ್ಲಿದ್ದು, ಈ ಖುಷಿಗಾಗಿ ಭಾರತ ಸಹಿತವಾಗಿ 10 ರಾಷ್ಟ್ರಗಳಲ್ಲಿ 250 ಮಳಿಗೆ ಹೊಸದಾಗಿ ತೆರೆಯುವ ಗುರಿ ಹೊಂದಿದೆ. ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ ಸಂಸ್ಥೆಯು 30 ಸಾವಿರ ಕೋಟಿ ರೂ.ಗೂ ಅಧಿಕ ವಹಿವಾಟು ಹೊಂದಿದ್ದು, ಮಲಬಾರ್‌ ಗ್ರೂಪ್‌ ರಿಯಲ್‌ ಎಸ್ಟೇಟ್‌ನಲ್ಲೂ ಆಸಕ್ತಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next