ಬೆಂಗಳೂರು: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ದೀಪಾವಳಿ ಸಂಭ್ರಮಾಚರಣೆ ಪ್ರಯುಕ್ತ ತನ್ನ ಮಳಿಗೆಗಳಲ್ಲಿ ಹಮ್ಮಿಕೊಂಡಿದ್ದ “ದೀಪಾವಳಿ ಪ್ರೊಮೊಷನಲ್ ಡ್ರೈವ್’ ಕಾರ್ಯಕ್ರಮದಲ್ಲಿ ಮೆಗಾ ಬಂಪರ್ ಬಹುಮಾನ ಪಡೆದ ಮಂಗಳೂರಿನ ಜಾಕುಲಿನ್ ಕರೋಲಿನ್ ಅವರಿಗೆ ನಟಿ ತಮನ್ನಾ ಹಾಗೂ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಮುಖ್ಯಸ್ಥ ಎಂ.ಪಿ.ಅಹಮ್ಮೆದ್ ಅವರು 5 ಕೆ.ಜಿ. ಚಿನ್ನ ವಿತರಿಸಿದರು.
ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಹಾಗೂ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ರಾಯಬಾರಿ ತಮನ್ನಾ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಚಿನ್ನಾಭರಣವನ್ನು ಗ್ರಾಹಕರ ಮನೆಗೆ ಮುಟ್ಟಿಸುತ್ತಿದೆ.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌ನ ಕ್ಲಾಸಿಕಲ್ ಮಾದರಿಯ ಆಭರಣ ಸೇರಿದಂತೆ ಎಲ್ಲಾ ಮಾದರಿಯ ವಿನ್ಯಾಸವನ್ನು ತುಂಬಾ ಇಷ್ಟಪಡುತ್ತೇನೆ. ಗ್ರಾಹಕರು ತಮ್ಮ ಇಷ್ಟದ ಚಿನ್ನಾಭರಣವನ್ನು ಇಷ್ಟವಾದ ವಿನ್ಯಾಸದಲ್ಲಿಯೇ ಪಡೆಯಬಹುದಾದ ವ್ಯವಸ್ಥೆ ಇಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುಣಮಟ್ಟದ ಚಿನ್ನಕ್ಕೆ ಆದ್ಯತೆ: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಮುಖ್ಯಸ್ಥ ಎಂ.ಪಿ.ಅಹಮ್ಮೆದ್ ಮಾತನಾಡಿ, 9 ದೇಶದಲ್ಲಿ 195 ಮಳಿಗೆಗಳನ್ನು ಹೊಂದಿದ್ದೇವೆ. ಗ್ರಾಹಕರಿಗೆ ಗುಣಮಟ್ಟದ ಚಿನ್ನಾಭರಣ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ದೇಶಿ ಸಂಸ್ಕೃತಿಯೊಂದಿಗೆ ಚಿನ್ನವನ್ನು ಬ್ರ್ಯಾಂಡ್ ಆಗಿಸಿ ದೇಶ ವಿದೇಶದಲ್ಲಿ ಮಾರಾಟ ಮಾಡುತ್ತಿದ್ದೇವೆ.
ಗ್ರಾಹಕರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು, ಅವರು ಬಯಸುವ ವಿನ್ಯಾಸದ ಚಿನ್ನಾಭರಣವನ್ನು ಒದಗಿಸುತ್ತಿದ್ದೇವೆ. ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬಡವರಿಗೆ ಶಿಕ್ಷಣ ಮತ್ತು ವಸತಿ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಗುಣಮಟ್ಟ ಮತ್ತು ಮೌಲ್ಯಾಧಾರಿತ ಉತ್ಪನ್ನ ನೀಡುವುದೇ ನಮ್ಮ ಮೂಲ ಉದ್ದೇಶವಾಗಿದೆ ಎಂದು ಸಂಸ್ಥೆಯ ಬಗ್ಗೆ ವಿವರಿಸಿದರು.
3 ತಿಂಗಳಲ್ಲಿ 500 ಮಳಿಗೆ: ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌ನ ವ್ಯವಸ್ಥಾಪಕ ನಿರ್ದೇಶಕ ಒ.ಅಶೇರ್ ಮಾತನಾಡಿ, ಮುಂದಿನ ಮೂರು ವರ್ಷದಲ್ಲಿ 300 ಮಳಿಗೆಯನ್ನು ತೆರೆಯುವ ಮೂಲಕ ವಿಶ್ವದಾದ್ಯಂತ 500 ಮಳಿಗೆಯನ್ನು ಹೊಂದಲಿದ್ದೇವೆ.
ದೀಪಾವಳಿ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌ನ ಮಳಿಗೆಯಲ್ಲಿ ಚಿನ್ನಾಭರಣ ಖರೀದಿಸಿದ ಗ್ರಾಹಕರಿಗೆ ಲಕ್ಕಿ ಕೂಪನ್ ನೀಡಿದ್ದು, ವಿಜೇತರಿಗೆ ಈಗಾಲೇ 111 ಕೇಜಿ ಚಿನ್ನ ವಿತರಣೆ ಮಾಡಿದ್ದೇವೆ ಎಂದು ಹೇಳಿದರು. ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್, ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌ನ ವಿಭಾಗೀಯ ಮುಖ್ಯಸ್ಥ ಐಪು ರೆಹಮನ್ ಮೊದಲಾದವರು ಉಪಸ್ಥಿತರಿದ್ದರು.
ಬಹುಮಾನ ಬರುತ್ತದೇ ಎಂಬುದನ್ನೇ ನಿರೀಕ್ಷೆ ಮಾಡಿರಲಿಲ್ಲ. ನಾವು ಯಾವಾಗಲೂ ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌ನಲ್ಲೇ ಚಿನ್ನಾಭರಣ ಖರೀದಿಸುತ್ತೇವೆ. ಗುಣಮಟ್ಟವೂ ಚೆನ್ನಾಗಿರುತ್ತದೆ. ಬಹುಮಾನ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ.
-ಜಾಕುಲಿನ್ ಕರೋಲಿನ್, 5 ಕೆ.ಜಿ. ಚಿನ್ನ ವಿಜೇತೆ