Advertisement
ಕೂಟುಹೊಳೆ ನಿವಾಸಿ ಶರತ್ (24) ಮೃತಪಟ್ಟವರು. ಕರ್ನಾಟಕ ಹಾಗೂ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಡಗಿನ ಗಡಿಭಾಗ ಮಾಕುಟ್ಟ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಸಂದರ್ಭ ಲಾರಿಯೊಂದು ದಾರಿ ಮಧ್ಯೆ ಸಿಲುಕಿದ್ದು, ಅದರ ಮೇಲೆ ಮರದ ರೆಂಬೆಯೊಂದು ಬಿದ್ದಿತು. ಲಾರಿ ಕ್ಲೀನರ್ ಶರತ್ ಲಾರಿಯಿಂದ ಕೆಳಗಿಳಿದು ರೆಂಬೆಯನ್ನು ತೆರವುಗೊಳಿಸುತ್ತಿದ್ದಾಗ ನಿಂತಿದ್ದ ಜಾಗದ ಮಣ್ಣು ಕುಸಿದು ನೀರಿನಲ್ಲಿ ಕೊಚ್ಚಿಹೋದರು. ರಾತ್ರಿಯೇ ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಿಂದ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಧಾವಿಸಿದರಾದರೂ ಶರತ್ ಪತ್ತೆಯಾಗಲಿಲ್ಲ. ಬುಧವಾರ ಮತ್ತೆ ಶೋಧ ನಡೆಸಿದಾಗಿ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಶವ ಪತ್ತೆಯಾಯಿತು.
Advertisement
ಮಾಕುಟ್ಟ: ಗುಡ್ಡ ಕುಸಿದು ಲಾರಿ ಕ್ಲೀನರ್ ಸಾವು
06:00 AM Jun 14, 2018 | |
Advertisement
Udayavani is now on Telegram. Click here to join our channel and stay updated with the latest news.