Advertisement

ಮಾದಕ ಮಾತಲ್ಲೇ ಮರುಳು ಮಾಡುತ್ತಿದ್ದಾಕೆ ಕಂಬಿ ಹಿಂದೆ

11:21 AM Jul 14, 2017 | Team Udayavani |

ಬೆಂಗಳೂರು: ಶ್ರೀಮಂತ ವ್ಯಕ್ತಿಗಳ ಮೊಬೈಲ್‌ಗೆ ಯುವತಿಯಿಂದ ಕರೆ ಮಾಡಿಸಿ ಪೋನ್‌ನಲ್ಲಿಯೇ ವೈಯ್ನಾರದ ಮಾತುಗಳ್ಳನಾಡಿ “ಲೈಂಗಿಕ ಕ್ರಿಯೆಗೆ’ ಆಹ್ವಾನ ನೀಡಿ, ಆಹಾ°ನ ಮನ್ನಿಸಿ ಬರುತ್ತಿದ್ದ ವ್ಯಕ್ತಿಗಳ ಸುಲಿಗೆ ಮಾಡುತ್ತಿದ್ದ 8  ಮಂದಿ ವಂಚಕರ ತಂಡವೊಂದು ಬಾಗಲಕುಂಟೆ ಪೊಲೀಸರ ಬಲೆಗೆ ಬಿದ್ದಿದೆ.

Advertisement

ಕನ್ನಡದ “ಎಸ್ಕೇಪ್‌’ ಚಿತ್ರದಲ್ಲಿ ನಟಿಸಿರುವ ಭರತ್‌ ಎಂಬಾತನನ್ನು ಕಿಡ್ನಾಪ್‌ ಮಾಡಿ 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಪ್ರಕರಣದಲ್ಲಿ ಈ ತಂಡ ಸಿಕ್ಕಿಬಿದ್ದಿದೆ. ಕಾಮಾಕ್ಷಿ ಪಾಳ್ಯದ ತಿಲಕ್‌ (24), ಕಡಬಗೆರೆಯ ಲೋಕೇಶ್‌ (27), ಚಿಕ್ಕಸಂದ್ರದ ಮಂಜುನಾಥ್‌ (21), ಹೇರೋಹಳ್ಳಿಯ ಕಿರಣ್‌ಕುಮಾರ್‌ ( 24), ಪುನೀತ್‌ (22), ಮದನ್‌ (25), ಸಮಂತಕುಮಾರ್‌ (22) ಮತ್ತು ಮೈಸೂರು ಮೂಲದ  ದಿವ್ಯಾ ಬಂಧಿತ ಆರೋಪಿಗಳು.

ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ದಿವ್ಯಾ, ಕಾಲ್‌ಗ‌ರ್ಲ್ ಆಗಿದ್ದು, ಪ್ರಕರಣದ ಮೊದಲ ಆರೋಪಿ ತಿಲಕ್‌ ಜತೆ ಸ್ನೇಹ ಬೆಳೇಸಿದ್ದಳು. ಇದಾದ ಕೆಲವೇ ದಿನಗಳಲ್ಲಿ ಇಬ್ಬರೂ ಹಣವಂತ ವ್ಯಕ್ತಿಗಳನ್ನು ಬಲೆಗೆ ಬೀಳಿಸಿ ಹನಿಟ್ರ್ಯಾಪ್‌ ಮಾಡಿ ಹಣ ಗಳಿಸಲು ಯೋಜನೆ ಹಾಕಿಕೊಂಡಿದ್ದರು.

ಈ ದಂಧೆಗೆ ತಿಲಕ್‌ ತನ್ನ ಸ್ನೇಹಿತರನ್ನೂ ಒಪ್ಪಿಸಿದ್ದ. ಅದರಂತೆ ನಂದಿನಿ ಬಡವಾಣೆಯಲ್ಲಿ ವಾಸವಿರುವ ಚಿತ್ರನಟ ಭರತ್‌ರನ್ನು ಹಿಂಬಾಲಿಸಿದ್ದ ತಿಲಕ್‌, ಭರತ್‌ ಬಳಿ ಹಣವಿರುವುದನ್ನು ಖಚಿತಪಡಿಸಿಕೊಂಡು ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ. ಆ ನಂಬರ್‌ನ್ನು ಪ್ರೇಯಸಿ ದಿವ್ಯಾಳಿಗೆ ಕೊಟ್ಟು ಕರೆ ಮಾಡಿಸಿದ್ದ.

ಕಾರೊಳಗೇ ನುಗ್ಗಿದರು: ಎರಡು- ಮೂರು ದಿನಗಳ ಮಾತುಕತೆಯ ನಂತರ ಭರತ್‌ರನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ ದಿವ್ಯಾ, ಜುಲೈ 6ರಂದು ಮಧ್ಯಾಹ್ನ ಬಾಗಲಕುಂಟೆ ಸಿಗ್ನಲ್‌ಗೆ ಬರುವಂತೆ ತಿಳಿಸಿದ್ದಳು. ದಿವ್ಯಾಳ ಮಾತು ನಂಬಿದ್ದ ಭರತ್‌ ತನ್ನ ಕಾರು ತೆಗೆದುಕೊಂಡು ಹೋಗಿ ಸಿಗ್ನಲ್‌ನಲ್ಲಿ ನಿಲ್ಲಿಸಿಕೊಂಡು ಆಕೆಗಾಗಿ ಕಾಯುತ್ತಿದ್ದ.

Advertisement

ಈ ವೇಳೆ ಏಕಾಏಕಿ ಐದು ಮಂದಿ ಅಪರಿಚಿತರು ಕಾರಿನೊಳಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ಭರತ್‌ಗೆ ಪ್ರಾಣಬೆದರಿಕೆಯೊಡ್ಡಿ, ತಾವು ಹೇಳಿದ ಕಡೆ ಹೋಗುವಂತೆ ಬೆದರಿಸಿದ್ದರು. ಬಳಿಕ 8ನೇ ಮೈಲಿಯ ಸಿದ್ಧಾರ್ಥ ಸ್ಕೂಲ್‌ ಸಮೀಪದ ಹಳೇ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ.

ಬಳಿಕ ಭರತ್‌ಗೆ ಹಿಗ್ಗಾಮುಗ್ಗ ಥಳಿಸಿ, 10 ಲಕ್ಷ ರೂ. ಹಣ ನೀಡಿದರೇ ಬಿಟ್ಟು ಕಳುಹಿಸುವುದಾಗಿ ಡಿಮ್ಯಾಂಡ್‌ ಇಟ್ಟಿದ್ದಾರೆ. ರಾತ್ರಿ ಪೂರ್ತಿ  ಮನೆಯಲ್ಲಿಯೇ ಇರಿಸಿಕೊಂಡಿದ್ದಾರೆ. ಮಾರನೇ ದಿನವೂ ಆತನಿಗೆ ಹಣ ತರಿಸಲು ಒತ್ತಡ ಹೇರಿದ್ದಾರೆ. ಈ ವೇಳೆ ತನ್ನನ್ನು ಬಿಟ್ಟರೆ 1ಲಕ್ಷ ರೂ. ಕೊಡುತ್ತೇನೆ ಎಂದು ಒಪ್ಪಂದ ಮಾಡಿಕೊಂಡ ಭರತ್‌, ಆತನ ಹಿಂದೆ ಯಾರಾದರೂ ಬರುವಂತೆ ತಿಳಿಸಿದ್ದಾರೆ.

ಇದಕ್ಕೊಪ್ಪಿದ ಆರೋಪಿಗಳು, ಭರತ್‌ ಬಳಿಯಿದ್ದ ಎರಡು ಆ್ಯಪಲ್‌ ಐಫೋನ್‌, 4 ಎಟಿಎಂ ಕಾರ್ಡ್‌ಗಳು ಹಾಗೂ 15 ಸಾವಿರ ಹಣ ಕಿತ್ತುಕೊಂಡು ಕಳುಹಿಸಿದ್ದಾರೆ. ಲ್ಲಿಂಧ ಹೊರಟ ಭರತ್‌, ಆರೋಪಿಗಳ ಕಣ್ತಪ್ಪಿಸಿ ಮನೆ ಸೇರಿಕೊಂಡಿದ್ದಾರೆ. ಬಳಿಕ ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಹನಿಟ್ರ್ಯಾಪ್‌ ಬಗ್ಗೆ ದೂರಿಲ್ಲ!
ಭರತ್‌ ನೀಡಿದ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು. ಆರೋಪಿಗಳು ಈ ದಂಧೆಗೆ ಬಳಸುತ್ತಿದ್ದ ಮನೆಯ ಬಳಿ ವಿಚಾರಣೆ ನಡೆಸಿದಾಗ ಪ್ರಭಾ ಎಂಬುವವರ ಬಳಿ ಮನೆ ಬಾಡಿಗೆ ಪಡೆದುಕೊಂಡಿದ್ದು, ಆಗಾಗ್ಗೆ ಬಂದು ಹೋಗುತ್ತಿದ್ದರು ಎಂಬ ಮಾಹಿತಿ ಗೊತ್ತಾಯಿತು. ದಿವ್ಯಾ ಕರೆ ಮಾಡಿದ್ದ ಮೊಬೈಲ್‌ ಕರೆಗಳ ಜಾಡು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿ ದಿವ್ಯಾ ಈ ಹಿಂದೆ ಇಬ್ಬರು ವ್ಯಕ್ತಿಗಳನ್ನು ಹನಿಟ್ರ್ಯಾಪ್‌ ಮಾಡಿರುವ ಬಗ್ಗೆ ಸುಳಿವು ಸಿಕ್ಕಿದೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next