Advertisement

ಎನ್‌ಆರ್‌ಇಜಿ ಯೋಜನೆಯ ಸಮರ್ಪಕ ಬಳಕೆಯಿಂದ ಸುಂದರ ಗ್ರಾಮ; ಕಾಗೋಡು ಅನಿಸಿಕೆ

02:53 PM Jan 16, 2022 | Suhan S |

ಸಾಗರ: ಇಡೀ ವಿಶ್ವದಲ್ಲಿ ದುಡಿಯುವ ಹಕ್ಕು ನೀಡುವುದು ನೀಡಿರುವುದು ನಮ್ಮ ದೇಶದ ಉದ್ಯೋಗ ಖಾತ್ರಿ ಯೋಜನೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸದುಪಯೋಗ ಪಡಿಸಿಕೊಂಡರೆ ಗ್ರಾಮವನ್ನು ಸುಂದರವಾಗಿ ಮಾಡಬಹುದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ನಾಡಕಲಸಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಬಡವ ಶ್ರೀಮಂತ ಜಾತಿ ವರ್ಗಭೇದವಿಲ್ಲದೆ ಪ್ರತಿಯೊಬ್ಬರಿಗೂ 100 ದಿನ ಕೆಲಸ ಮಾಡುವ ಹಕ್ಕು ಕೊಡಲಾಗಿದೆ. ಕೆಲಸ ಕೇಳಿದ 15 ದಿನದಲ್ಲಿ ಕೆಲಸ ನೀಡದಿದ್ದರೆ ಪುಕ್ಕಟೆಯಾಗಿ ಸಂಬಳ ನೀಡಬೇಕಾಗುತ್ತದೆ. ಮನೆಯಲ್ಲಿ ಉಳಿದ ವಿದ್ಯಾವಂತರು ಕೂಡ ಈ ಕೆಲಸ ಪಾಲ್ಗೊಂಡು ವ್ಯವಸ್ಥೆಯ ನೆಲೆಗಟ್ಟಿನಲ್ಲಿ ಸೈನಿಕರಂತೆ ದುಡಿದರೆ ಯೋಜನೆಯ ಸದ್ಬಳಕೆ ಆದಂತಾಗುತ್ತದೆ ಎಂದರು.

ಸಹಕಾರ ಸಂಘಗಳು ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಬದಲಾವಣೆಯ ಕಾಲದಲ್ಲಿ ಯಾಂತ್ರಿಕ ವ್ಯವಸ್ಥೆಗೆ ಹೊಂದಿಕೊಳ್ಳಲು ಅವಶ್ಯಕ ಉಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆ ರೂಪದಲ್ಲಿ ಒದಗಿಸಬೇಕು. ಕೃಷಿ ಮಾಡುವ ಪದ್ಧತಿಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಆಗಿದೆ. ಅದಕ್ಕೆ ಸಮನಾದ ಯೋಜನೆ ರೂಪಿಸಬೇಕು ಎಂದರು.

ಇಲ್ಲಿನ ಕಟ್ಟಡ ಸುಂದರವಾಗಿ ನಿರ್ಮಾಣ ಮಾಡಲು ಶ್ರಮಿಸಿದ ಆಡಳಿತ ಮಂಡಳಿಗೆ ಕಾಗೋಡು ಅಭಿನಂದನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಕೆ.ಆರ್. ಶ್ರೀಧರ್ ಭಟ್ ಮಾತನಾಡಿದರು. ಉಪಾಧ್ಯಕ್ಷ ಎಲೆ ಮಂಜಪ್ಪ, ನಿರ್ದೇಶಕರಾದ ಕಲ್ಸೆ ಚಂದ್ರಪ್ಪ, ವೆಂಕಟರಾವ್, ಕಾರ್ಯದರ್ಶಿ ವೆಂಕಟರಮಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next