Advertisement

ಸೋಲಾರ್‌ ಸಿಟಿ ನಿರ್ಮಾಣ ಆದ್ಯತೆಯಾಗಲಿ

10:26 PM Feb 01, 2020 | Sriram |

ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಬಳಸಿಕೊಂಡಾಗ ಹೆಚ್ಚುತ್ತಿರುವ ತಾಪಮಾನ ಮತ್ತು ಸರಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಆಡಳಿತ ವ್ಯವಸ್ಥೆ ಮುಂದಾಗಬೇಕು. ಈಗಾಗಲೇ ಜಾರಿಯಲ್ಲಿರುವ ಯೋಜನಗಳ ಪರಿಣಾಮಕಾರಿ ಅನುಷ್ಠಾನಕ್ಕೂ ಮುಂದಾಗಬೇಕು.

Advertisement

ಇಂದು ಮಾನವ ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ನೀರು, ವಾಯು, ಸೂರ್ಯ, ಕಲ್ಲಿದ್ದಲು ಹೀಗೆ ಹಲವಾರು ನೈಸರ್ಗಿಕ ಸಂಪನ್ಮೂಲಗಳ ಮೂಲಶಕ್ತಿಗಳನ್ನು ಉತ್ಪಾದಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ. ಆದರೆ ಬೇಸರದ ಸಂಗತಿ ಎಂದರೆ ಅವುಗಳ ಸಮರ್ಪಕವಾದ ಬಳಕೆ ಮಾಡಿಕೊಳ್ಳುವಲ್ಲಿ ಎಡವಿರುವುದು ದಟ್ಟವಾಗುತ್ತದೆ.

ಶಕ್ತಿಯ ಹೆಚ್ಚಿನ ಬಳಕೆ ಮತ್ತು ವ್ಯಯವಾಗುತ್ತಿರುವುದು ನಗರ ಪ್ರದೇಶಗಳಲ್ಲಿ ಹೆಚ್ಚು. ಇಲ್ಲಿ ಅಧಿಕ ಪ್ರಮಾಣದ ಶಕ್ತಿ ವ್ಯಯವಾಗುವುದನ್ನು ತಡೆಯಲು ಆಡಳಿತ ವ್ಯವಸ್ಥೆ ಮುಂದಾಗಬೇಕು. ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಬಳಸಿಕೊಂಡರೆ ಹೆಚ್ಚಾಗುತ್ತಿರುವ ತಾಪಮಾನ ಮತ್ತು ಸರಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸಬಹುದು. ಅಲ್ಲದೇ ನಗರಗಳನ್ನು ಇನ್ನಷ್ಟು ಸುಂದರವಾಗಿಸಲು ಸಹಕಾರಿಯಾಗಿದೆ.

ಇದಕ್ಕೆ ಪೂರಕವಾದ ಹಲವಾರು ಯೋಜನೆಗಳು ಈಗ ಬಳಕೆಯಲ್ಲಿದ್ದರೂ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಬೇಕಿದೆ. ಈ ವಿಚಾರಕ್ಕಾಗಿ ಸೋಲಾರ್‌ ಬಳಕೆ ನಗರಗಳ ಆದ್ಯತೆಯಾಗಬೇಕಿದೆ.

ಸೌರಶಕ್ತಿ ಬಳಕೆ
ನಗರಗಳಲ್ಲಿ ಹೆಚ್ಚು ಬಳಕೆಯಾಗುವ ಶಕ್ತಿಗಳಲ್ಲಿ ವಿದ್ಯುತ್‌ ಶಕ್ತಿಯು ಒಂದಾಗಿದೆ. ಅದಕ್ಕೆ ನಾವಿಂದು ವಿದ್ಯುತ್‌ನ್ನು ವ್ಯಯ ಮಾಡುತ್ತಿದ್ದೇವೆ. ಅದಕ್ಕೆ ಪರ್ಯಾಯವಾಗಿ ಉಚಿತವಾಗಿ ದೊರಕುವಂಥ ಸೌರ ಶಕ್ತಿಯನ್ನು ಬಳಕೆ ಮಾಡಿಕೊಂಡು ಸೌರ ಶಕ್ತಿ ಆಧಾರಿತ ಕಾರ್ಯನಿರ್ವಹಿಸುವ ಬೀದಿ ದೀಪಗಳನ್ನು ನಗರದ ರಸ್ತೆಯುದ್ದಕ್ಕೂ ಸ್ಥಾಪಿಸುವ ಮೂಲಕ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ವಿದ್ಯುತ್‌ ಹೊರೆಯನ್ನು ತಪ್ಪಿಸಬಹುದಾಗಿದೆ.

Advertisement

ಎಲ್ಲೆಲ್ಲಿ ಬಳಕೆ
ಇದುವರೆಗೆ ದೇಶದಲ್ಲಿ 55ಕ್ಕೂ ಹೆಚ್ಚು ಸೋಲಾರ್‌ ನಗರಗಳನ್ನು ಸ್ಥಾಪಿಸಲು ಸರಕಾರ ಯೋಜನೆ ರೂಪಿಸಿದೆ. ಇದರಲ್ಲಿ ರಾಜ್ಯದ ಹುಬ್ಬಳ್ಳಿ- ಧಾರವಾಡ ಮತ್ತು ಮೈಸೂರು ನಗರಗಳು ಸ್ಥಾನ ಪಡೆದುಕೊಂಡಿವೆ. ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜಮಹಲ್‌ ನಗರಿ ಆಗ್ರಾ ದೇಶದ ಪ್ರಥಮ ಸೋಲಾರ ನಗರಿ ಎಂಬ ಖ್ಯಾತಿ ಹೊಂದಿದ್ದು ಇಲ್ಲಿ ಅತಿಹೆಚ್ಚು ಸೌರಶಕ್ತಿ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಆಂಧ್ರಪ್ರದೇಶದ ಅನಂತಪುರದಲ್ಲಿ ಹೆಚ್ಚು ಸೌರ ಶಕ್ತಿ ಬಳಸಲಾಗುತ್ತಿದೆ.

ಸೋಲಾರ್‌ ಬಳಕೆಯಿಂದ ಸೌರಶಕ್ತಿಯು ವ್ಯಯವಾಗದಂತೆ ಬಳಕೆ ಮಾಡುವ ಕ್ರಮವಾಗಿದೆ. ಈ ವಿಚಾರಕ್ಕೆ ನಗರದ ಆಡಳಿತ ವ್ಯವಸ್ಥೆಯೂ ಕೂಡ ಮುಂದಾಗಬೇಕಿದೆ. ಸ್ಮಾರ್ಟ್‌ ಸಿಟಿ ಪಟ್ಟಿಯಲ್ಲಿರುವ ಮಂಗಳೂರು ನಗರಕ್ಕೆ ಈಗಾಗಲೇ ಹಲವಾರು ಮಹತ್ವದ ಯೋಹಜನೆಗಳನ್ನು ಘೋಷಿಸಲಾಗುತ್ತಿದೆ. ಆ ಪಟ್ಟಿಯಲ್ಲಿ ಸೌರಶಕ್ತಿ ಬಳಕೆಗೆ ಆದ್ಯತೆ ನೀಡಿ, ನಗರವನ್ನು ಸೋಲಾರ್‌ ನಗರವಾಗಿಸುವತ್ತ ಪಣತೊಡಬೇಕಿದೆ.

ಬಳಕೆ ಹೇಗೆ ?
ನಗರಗಳಲ್ಲಿ ಸರಕಾರದ ವತಿಯಿಂದ ಬೀದಿದೀಪಗಳು, ಸಾರ್ವಜನಿಕ ಪಾರ್ಕ್‌, ಸಾರ್ವಜನಿಕ ಕಟ್ಟಡಗಳು, ಹೀಗೆ ಸಾಧ್ಯವಿರುವ ಕಡೆಗಳಲ್ಲಿ ಸೌರ ದೀಪ ಮತ್ತು ಸೌರ ಶಕ್ತಿಯ ಬಳಕೆಗೆ ಒತ್ತು ನೀಡುವುದು. ಅಲ್ಲದೇ ಜನಸಾಮಾನ್ಯರಿಗೆ ನೀರು ಕಾಯಿಸಲು, ಸೌರ ಕುಕ್ಕರ್‌, ಮನೆ ದೀಪ, ಹೀಗೆ ವಿವಿಧ ಚಟುವಟಿಕೆಗಳಿಗೆ ಸೌರ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡುವಂತೆ ಮನವೊಲಿಸುವುದು ಮತ್ತು ಸೋಲಾರ್‌ ಪ್ಲೇಟ್‌ ಮತ್ತಿತರ ಸಾಧನಗಳ ಮೇಲೆ ಸರಕಾರದ ವತಿಯಿಂದ ಸಬ್ಸಿಡಿ ನೀಡುವ ಮೂಲಕ ಸೌರ ಸಾಧನಗಳ ಖರೀದಿಗೆ ಪ್ರೋತ್ಸಾಹ ನೀಡಬೇಕು.

- ಶಿವಾನಂದ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next