Advertisement

ಮೇಕ್‌ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ

11:39 AM Jan 25, 2022 | Team Udayavani |

ವಿಜಯಪುರ: ಮುಂಜಾಗ್ರತಾ ಕ್ರಮವಾಗಿ ಹೊಸಕೋಟೆ ನಗರದಲ್ಲಿ ಸಿಎಸ್‌ಆರ್‌ ನಿಧಿಯಡಿ 50 ಹಾಸಿಗೆಗಳ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಿಸಿರುವುದು ಕೋವಿಡ್‌ ಮೂರನೇ ಅಲೆಯ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಸಹಕಾರಿ ಎಂದು ಪೌರಾಡಳಿತ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಎನ್‌.  ನಾಗರಾಜ್‌ ತಿಳಿಸಿದರು.

Advertisement

ಸಾರಾಪ್ಲಾನ್ಸ್‌ ಸಂಸ್ಥೆಯು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಹೊಸಕೋಟೆ ನಗರದಲ್ಲಿ ನಿರ್ಮಾಣ ಮಾಡಲಾದ 50 ಹಾಸಿಗೆಗಳ ಮೇಕ್‌ ಶಿಫ್ಟ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.

ಹೊಸಕೋಟೆ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಈ ಆಸ್ಪತ್ರೆ ಸಹಕಾರಿ ಯಾಗಲಿದೆ. ಕೋವಿಡ್‌ ನಂತರವೂ ಸಾರ್ವಜನಿಕರ ಸೇವೆಗೆ ಲಭ್ಯವಿರಲಿದೆ. ಆಸ್ಪತ್ರೆ ನಿರ್ವಹಿಸಲು ಸಹಕಾರ ನೀಡಿದ ಕಂಪನಿಗಳಿಗೆ ಸರ್ಕಾರದ ಪರವಾಗಿ ಧನ್ಯವಾದ ತಿಳಿಸಿದರು.

ಡೀಸಿ ಶ್ರಮ: ಕೇಂದ್ರ-ರಾಜ್ಯ ಸರ್ಕಾರಗಳು ಕೈಗೊಂಡಿರುವ ಹಲವಾರು ಕ್ರಮಗಳಿಂದಾಗಿ ಕೋವಿಡ್‌ ಸೋಂಕು ನಿಯಂತ್ರಣವಾಗುತ್ತಿದೆ. ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ಪಡೆಯುವ ಮೂಲಕ ಕೋವಿಡ್‌ ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಹಾಗೂ ಮೇಕ್‌ ಶಿಫ್ಟ್ ಆಸ್ಪತ್ರೆ ನಿರ್ಮಾಣದ ಯಶಸ್ಸಿಗೆ ಜಿಲ್ಲಾಧಿಕಾರಿ ಜೆ.ಶ್ರೀನಿವಾಸ್‌ ಶ್ರಮವಹಿಸಿದ್ದಾರೆಂದರು.

ವಿವಿಧ ಕಾಮಗಾರಿಗೆ ಶಂಕು: ನಗರೋತ್ಥಾನ ಯೋಜನೆಯಡಿ ಹೊಸಕೋಟೆ ನಗರದಲ್ಲಿ ಕುಡಿ  ಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸ ಲಾಗಿದ್ದು, ಈ ಕಾಮಗಾರಿಯಿಂದ ಹೊಸಕೋಟೆ ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ದೂರಾಗಲಿದೆ. ಕುಡಿಯುವ ನೀರಿನ ಯೋಜನೆ , ಸಚಿವ ಎಂಟಿಬಿ ನಾಗರಾಜು ಹೊಸಕೋಟೆ ನಗರದಲ್ಲಿ ನಗರೋತ್ಥಾನ ಮುನ್ಸಿಪಾಲಿಟಿ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಅಂದಾಜು 4 . 84 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಹಾಗೂ ಅನುಗೊಂಡನಹಳ್ಳಿ ಠಾಣೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

Advertisement

50 ಹಾಸಿಗೆಯ ವಿಸ್ತರಿತ ಆಸ್ಪತ್ರೆ ಮುಂಭಾಗದಲ್ಲಿಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಏರ್ಪಡಿಸಲಾದ ಆರೋಗ್ಯ ಶಿಕ್ಷಣ ಕುರಿತ ವಸ್ತು ಪ್ರದರ್ಶನದಲ್ಲಿ ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡಿದರು .

50 ಹಾಸಿಗೆ ಸೌಲಭ್ಯ: ಹೊಸಕೋಟೆ ನಗರದ ಗ್ಲೋಬಲ್‌ ಐ ಫೌಂಡೇಶನ್‌ ಹತ್ತಿರ 44,000 ಚದರ ಅಡಿ ಪ್ರದೇಶದಲ್ಲಿ 6 ವಾರಗಳಲ್ಲಿ ಪೂರ್ಣಗೊಳಿಸಲಾದ ಮೇಕ್‌ ಶಿಫ್ಟ್ ಆಸ್ಪತ್ರೆಯು 50 ಹಾಸಿಗೆ ಹೊಂದಿದ್ದು ಮೆಡಿಕ್ಯಾಬ್‌ ನಲ್ಲಿ ಏಳು ಕ್ಯಾಬಿನ್‌ ಗಳಿದ್ದು ಒಂದು ಕ್ಯಾಬಿನ್‌ನಲ್ಲಿ ವೆಂಟಿಲೇಟರ್‌ ಹಾಸಿಗೆಗಳ ಸೌಲಭ್ಯದೊಂದಿಗೆ 1 ಐಸಿಯು ವಾರ್ಡ್‌ 3 ಕ್ಯಾಬಿನ್‌ ನಲ್ಲಿ 13 ಹಾಸಿಗೆಗಳುಳ್ಳ ಜನರಲ್‌ ವಾರ್ಡ್‌ ಎರಡು ಕ್ಯಾಬಿನ್‌ನಲ್ಲಿ ಪುರುಷ ಹಾಗೂ ಮಹಿಳಾ ಕರ್ತವ್ಯ ನಿರತ ವೈದ್ಯರ ಕೊಠಡಿ ಒಂದು ಕ್ಯಾಬಿನ್‌ನಲ್ಲಿ ನರ್ಸಿಂಗ್‌ ಸ್ಟೇಷನ್‌ ಒಳಗೊಂಡಿದೆ.

ಶಾಸಕ ಶರತ್‌ ಬಚ್ಚೇಗೌಡ, ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್, ಬಿಎಂಆರ್‌ಡಿ ಅಧ್ಯಕ್ಷ ಚನ್ನಸಂದ್ರ ನಾಗರಾಜ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಎಸಿ ಅರುಳ್‌ ಕುಮಾರ್‌, ತಹಶೀಲ್ದಾರ್‌ ವಿ.ಗೀತಾ,ಕೆ.ಸತೀಶ್‌, ನಗರಸಭಾ ಸದಸ್ಯರು, ಪೊಲೀಸ್‌ ಅಧಿಕಾರಿಗಳು, ಬಿಜೆಪಿ, ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ಸೋಂಕು ತಡೆಗೆ ಸಹಕರಿಸಿ : ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಜಾರಿಗೆ ತಂದಿರುವ ವೈದ್ಯರ ನಡೆ ಹಳ್ಳಿ ಕಡೆ , ಕಾರ್ಯಕ್ರಮದಡಿ ವೈದ್ಯರೇ ಜನರ ಬಳಿಗೆ ತೆರಳಿ ಆರೋಗ್ಯ ಪರೀಕ್ಷೆ ನಡೆಸುತ್ತಿರುವುದು ಶ್ಲಾಘನೀಯ. ಕೋವಿಡ್‌ ಸೋಂಕು ಹರಡುವಿಕೆ ತಡೆಗಟ್ಟಲು ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು ಜನ ಎಚ್ಚರಿಕೆಯಿಂದ ಮಾಸ್ಕ್ ಧರಿಸಿ ಸ್ಯಾನಿಟೈಸರ್‌ ಬಳಸಿ ಹಾಗೂ ಸಾಮಾಜಿಕ ಅಂತರ ಪಾಲಿಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ಸಚಿವ ಎಂಟಿಬಿ ನಾಗರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next