Advertisement

ಗಿಡ ಬೆಳೆಸುವ ಪ್ರತಿಜ್ಞೆ ಮಾಡಿ

01:59 PM Jun 06, 2019 | Team Udayavani |

ಮುಳಗುಂದ: ಶುದ್ಧ ಪರಿಸರ ಹಾಗೂ ಗಿಡಮರಗಳು ಮಾತ್ರ ಗಾಳಿ ಮಳೆ ಹಾಗೂ ಮನಶಾಂತಿ ಕೊಡಲು ಸಾಧ್ಯ. ಕುಟುಂಬಸ್ಥರೆಲ್ಲರೂ ಗಿಡ ಬೆಳೆಸುವ ಪ್ರತಿಜ್ಞೆ ಮಾಡಬೇಕು. ಅಂದಾಗ ಮಾತ್ರ ಮರ ಗಿಡಗಳು ಬೆಳೆಯಲು ಸಾಧ್ಯ ಎಂದು ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ ಹೇಳಿದರು.

Advertisement

ಪಟ್ಟಣದ ಕೆಎಸ್‌ಎಸ್‌ ಮಹಾವಿದ್ಯಾಲಯದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಸಹ್ಯಾದ್ರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಬದಲಾದ ಕಾಲಮಾನದಲ್ಲಿ ಜನರಿಗರ ಪರಿಸರ ಕಾಳಜಿಯಿಲ್ಲ. ಗಿಡ ನೆಡುವ ಬದಲು ಗಿಡಗಳನ್ನು ಕಡಿದು ಮನೆ ಕಟ್ಟು ಚಿಂತನೆ ಎಲ್ಲರಲ್ಲೂ ಇದೆ. ಪರಿಸರ ಮಾಲಿನ್ಯದಿಂದ ಮಳೆ ಬಾರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದ್ದು ನಾವೆಲ್ಲರೂ ಜಾಗೃತರಾಗಬೇಕು. ಇದಕ್ಕೆ ಪರಿಹಾರ ಹೆಚ್ಚು ಗಿಡಮರಗಳನ್ನು ಬೆಳೆಸಬೇಕು ಎಂದರು.

ಲಕ್ಷೆ ್ಮೕಶ್ವರ ಪರಿಸರ ಜಾಗೃತಿ ವೇದಿಕೆಯ ವಿರೇಶ ಸಾಸಲವಾಡ ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯ ಶಿವಾನಂದ ಆಚಾರ್ಯ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಭಾರಿ ಮಾಲಾ ಗೂಗಿ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next