Advertisement

ಜನತೆಗೆ ಲಸಿಕೆ ಅರಿವು ಮೂಡಿಸಿ: ಡೀಸಿ

03:12 PM Apr 16, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು,ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ 45ವರ್ಷ ಮೇಲ್ಪಟ್ಟ ಎಲ್ಲರನ್ನೂ ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸುವ ಕೆಲಸವನ್ನು ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್‌.ಲತಾ ಹೇಳಿದರು.

Advertisement

ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕುನಿಯಂತ್ರಿಸುವ ಸಲುವಾಗಿ ಕೋವಿಡ್‌ ಲಸಿಕೆ,ಕೋವಿಡ್‌ -19 ಕಣ್ಗಾವಲು, ಗಂಟಲು ದ್ರವಸಂಗ್ರಹ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌,ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯಾಧಿಕಾರಿ ಗಳು, ನಗರಸಭೆ ಆಯುಕ್ತರು/ಮುಖ್ಯಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ, ಪಿಡಿಒಗಳು, ಸಿಡಿಪಿಒ, ಇತರೆ ತಾಲೂಕು ಮಟ್ಟದಅಧಿಕಾರಿಗಳೊಂದಿಗೆ ಗುರುವಾರ ನಡೆದ ಜಿಲ್ಲಾಕೋವಿಡ್‌-19 ಲಸಿಕಾ ಟಾಸ್ಕ್ ಫೋರ್ಸ್‌ ಸಮಿತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರಿಗಳೇ ಹೊಣೆ: ಜಿಲ್ಲೆಯಲ್ಲಿ ಕೊರೊನಾಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಸುಮಾರು 100 ಪ್ರಕರಣ ದಾಖಲಾಗುತ್ತಿದ್ದು, ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಗೌರಿಬಿದನೂರಿನಲ್ಲಿ ಹೆಚ್ಚು ಪ್ರಕರಣ ಕಂಡುಬರುತ್ತಿವೆ. ಕೊರೊನಾ ನಿಯಂತ್ರಣ ವಿಷಯದಲ್ಲಿ ನಿರ್ಲಕ್ಷ್ಯಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಮಾಡಲಾಗುವುದು ಎಂದು ಎಚ್ಚರಿಸಿದರು.

ಲಸಿಕೆ ಹೆಚ್ಚಿಸಿ: ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲಸಿಕೆಆಗುತ್ತಿಲ್ಲ. ಸರ್ಕಾರ ಪ್ರತಿ ನಿತ್ಯ 45 ವರ್ಷ ಮೇಲ್ಪಟ್ಟಕನಿಷ್ಠ 10,500 ಮಂದಿಗೆ ಲಸಿಕೆ ಹಾಕಬೇಕು ಎಂದುಗುರಿ ನಿಗದಿಪಡಿಸಿದೆ.

ಆದರೆ, ಪ್ರಸ್ತುತ 3 ಸಾವಿರಜನಕ್ಕೆ ಲಸಿಕೆ ವಿತರಣೆ ಆಗುತ್ತಿಲ್ಲ. ಜಿಲ್ಲೆಯಲ್ಲಿ ಪ್ರಸ್ತುತ30 ಸಾವಿರ ಮಂದಿಗೆ ಸಾಕಾಗುವಷ್ಟು ಲಸಿಕೆ ಲಭ್ಯವಿದೆ.ಇನ್ನೂ 20 ಸಾವಿರ ಮಂದಿಗೆ ಬೇಕಾಗುವಷ್ಟು ಲಸಿಕೆಸಂಜೆಯೊಳಗೆ ಬರಲಿದೆ ಎಂದರು.ಜಿಲ್ಲಾದ್ಯಂತ ಸುಮಾರು 3 ಲಕ್ಷ ಮಂದಿ 45 ವರ್ಷಮೇಲ್ಪಟ್ಟವರು ಇದ್ದಾರೆ. ಈ ಪೈಕಿ ಈವರೆಗೆ 1.30 ಲಕ್ಷಜನರಿಗೆ ಕೊರೊನಾ ಲಸಿಕೆ ಹಾಕಲಾಗಿದ್ದು, ಇನ್ನೂಶೇ.60 ಮಂದಿ ಲಸಿಕೆ ಹಾಕಿಸಿಕೊಳ್ಳಬೇಕಿದೆ.

Advertisement

ಇವರನ್ನುಮೊದಲು ಗುರ್ತಿಸಿ ಲಸಿಕೆ ಹಾಕಬೇಕು. ಉದಾಸೀನಮಾಡಬಾರದು ಎಂದು ಸೂಚಿಸಿದರು.ಸಹಕಾರ ಪಡೆಯಿರಿ: ಜಿಪಂ ಸಿಇಒ ಪಿ.ಶಿವಶಂಕರ್‌ಮಾತನಾಡಿ, ಆಯಾ ಪಂಚಾಯ್ತಿ ವ್ಯಾಪ್ತಿಗೆ ಬರುವಹಳ್ಳಿಗಳಲ್ಲಿ 45 ವರ್ಷ ಮೇಲ್ಪಟ್ಟವರನ್ನು ಗುರ್ತಿಸಿ,ಲಸಿಕೆ ಹಾಕಿಸಬೇಕು. ಇದಕ್ಕೆ ಆರೋಗ್ಯ ಇಲಾಖೆಅಧಿಕಾರಿಗಳು, ಶಾಲಾ ಶಿಕ್ಷಕರ ಸಹಕಾರಪಡೆದುಕೊಳ್ಳಬಹುದು ಎಂದರು.ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್‌ಮಾತನಾಡಿ, ಮಾಸ್ಕ್ ಧರಿಸದೇ ಇರುವವರಿಗೆಮುಲಾಜಿಲ್ಲದೆ ದಂಡ ವಿಧಿಸಬೇಕು, ಜಿಲ್ಲೆಯಲ್ಲಿಎಲ್ಲೂ ಜಾತ್ರೆ, ಉತ್ಸವಗಳಿಗೆ ಅವಕಾಶನೀಡಬಾರದು, ಮುಸ್ಲಿಂ ಸಮುದಾಯದವರುಮುಂಬರುವ ರಂಜಾನ್‌ ಆಚರಣೆಗೆ ಸರ್ಕಾರದಮಾರ್ಗಸೂಚಿ ಪಾಲಿಸಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಎಚ್‌.ಅಮರೇಶ್‌, ಜಿಲ್ಲಾಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಯಲ್ಲಾರಮೇಶ್‌ಬಾಬು, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿಡಾ.ಚನ್ನಕೇಶವರೆಡ್ಡಿ, ಆರೋಗ್ಯ ಇಲಾಖೆಅಧಿಕಾರಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next