ಜೈಲ್‌ಬ್ರೇಕ್ ಸಿನಿಮಾಗಳನ್ನು ಸಿನಿಮಾಗಳನ್ನು ನೋಡಿ ರುತ್ತೀರಿ. ನಿಜಜೀವನದಲ್ಲೂ ಆಂಥ ದ್ದೊಂದು ಸಾಹ ಸ ದಲ್ಲಿ ಭಾಗಿ ಯಾಗಬೇಕೆನ್ನುವ ಇಚ್ಚೆಯಿದೆಯೇ. ಅದಕ್ಕೆ ಸೂಕ್ತವಾದ ವೇದಿಕೆ ಇಲ್ಲಿದೆ. ಜೈಲ್ ಬ್ರೇಕ್ ಮಾಡುವ ಸಾಹಸ ವೇನೋ ಸರಿ. ಆದರೆ ಅದ ಕ್ಕಾಗಿ ನಿಜಕ್ಕೂ ಅಪ ರಾಧಮಾಡಿ ಜೈಲ್‌ಗೆ ಹೋಗ ಬೇಕಾಗಿಲ್ಲ ಎನ್ನುವುದನ್ನು ಈಗಲೇ ಸ್ಪಷ್ಟ ಪ ಡಿಸಿಬಿಡುತ್ತೇವೆ. ಇದುವೇ “ಮಿಸ್ಟರಿ ರೂಂ’.ಇದೊಂದು ಗೇಂ ರೂಂ.
ಇಲ್ಲಿ ಆಟಗಾರರ ಟಾಸ್ಕ್ ಎಂದರೆ ಲಾಕಪ್‌ನಿಂದ ಎಸ್ಕೇಪ್ ಆಗುವುದು. ಈ ಆಟವನ್ನು ಒಬ್ಬರೇ ಆಡುವಂತಿಲ್ಲ. ಕನಿಷ್ಠ ಇಬ್ಬರು ಆಟಗಾರರು ಪಾಲ್ಗೊಳ್ಳಲೇ ಬೇಕು. ಇಬ್ಬರಿಗಿಂತ ಹೆಚ್ಚಿನ ಆಟಗಾರರು, ತಂಡ ಗಳೂ ಭಾಗವಹಿಸ ಬಹುದು. ಆಟಗಾರರನ್ನು ಜೈಲ್‌ನಲ್ಲಿ ಕೂಡಿ ಹಾಕಲಾಗುತ್ತದೆ. ಜೈಲ್‌ನ ಗೋಡೆ ಮೇಲೆ ಟೈಮರ್ ನೇತು ಹಾಕಿ ರು ತ್ತಾರೆ. ಕೋಣೆಯಲ್ಲಿ ಸಿಗುವ ಕ್ಲೂ ಮತ್ತಿ ತರ ಸಲಕರಣೆ ಮತ್ತು ಮುಖ್ಯವಾಗಿ ಬುದ್ಧಿವಂತಿಕೆಯನ್ನು ಉಪ ಯೋಗಿಸಿ ಕೊಂಡು ನಿರ್ದಿಷ್ಟ ಸಮಯದಲ್ಲಿ ಜೈಲ್‌ನಿಂದ ಪರಾರಿಯಾಗ ಬೇಕು. ಗೆದ್ದವರಿಗೆ ಮೆಡಲ್ ಸಿಗುತ್ತದೆ.
ಈ ಮಿಸ್ಟರಿ ಗೇಮ್ ರೂಂನಲ್ಲಿ ಬರಿ ಜೈಲ್ ಬ್ರೇಕ್ ಆಟ ಮಾತ್ರವೇ ಅಲ್ಲ, ಪತ್ತೇ ದಾರಿಕೆ, ಬಾಂಬ್ ನಿ,óಯಗೊಳಿಸುವುದು ಮತ್ತಿ ತರ ಆಟಗಳೂ ಇವೆ. ಅವುಗಳಲ್ಲೆಲ್ಲಾ “ಕ್ಯಾಬಿನ್ ಇನ್ ದಿ ವುಡ್ಸ್’ ತುಂಬಾ ಕಷ್ಟದ ಆಟವೆನ್ನುವುದು ಅಲ್ಲಿನ ತರ ಬೇತುದಾರರ ಅಭಿಪ್ರಾಯ. ಈವ ರೆಗೆ ಆ ಆಟ ವನ್ನು ಆಡಿ ದ ವ ರಲ್ಲಿ ಕೇವಲ 14 ಶೇ. ಮಂದಿ ಮಾತ್ರ ಗೆದ್ದಿ ದ್ದಾರೆ. ಅಚ್ಚ ರಿ ಯೆಂದರೆ ಇಲ್ಲಿಗೆ ಭೇಟಿ ನೀಡು ವ ವ ರು ತುಂಬಾ ಹೆಚ್ಚಾಗಿ ಆಡುವ ಆಟವೂ ಅದೇ. ಆಡುವ ಮೊದಲು ಆಟಗಾರರಿಗೆ ಆಡುವ ಕ್ರಮ ಮತ್ತು ಸೂಚ ನೆ ಗ ಳನ್ನು ನೀಡ ಲಾ ಗು ತ್ತ ದೆ. ಅಂದ ಹಾಗೆ ಇಲ್ಲಿನ ಗೇಮ್ ಗಳನ್ನು ಆಡಲು ಶುಲ್ಕ ವಿ ದೆ. 500 ರೂ. ಇಂದ 1000 ರೂ.ಗಳ ತನಕ ಶುಲ್ಕ ವಿದೆ. ಅಲ್ಲದೆ ಆಟಗಾರರ ಸಂಖ್ಯೆಯ ಮೇಲೂ ಇದು ನಿರ್ಧರಿತ ವಾಗುತ್ತದೆ. ಆಟಗಾರರ ಸಂಖ್ಯೆ ಹೆಚ್ಚಿ ದಂತೆ ತಂಡದ ಸದ ಸ್ಯರ ಶುಲ್ಕದ ಮೊತ್ತ ಇಳಿ ಕೆ ಯಾ ಗು ತ್ತ ದೆ.
ಎಲ್ಲಿ?: ಮಿಸ್ಟರಿ ರೂಮ್ಸ್, 100 ಅಡಿ ರಸ್ತೆ, ಎಚ್.ಎ.ಎಲ್ 2ನೇ ಹಂತ, ಇಂದಿ ರಾ ನ ಗ ರ
ಹೆಚ್ಚಿನ ಮಾಹಿತಿ ಗೆ: 9164982389