Advertisement

ಅಮೆಜಾನ್‌ ವೇರ್‌ಹೌಸ್‌: ಸುಮಾರು 40 ದೇಶಗಳಲ್ಲಿ ಪ್ರತಿಭಟನೆ

08:53 PM Nov 25, 2022 | Team Udayavani |

ವಾಷಿಂಗ್ಟನ್‌: ವೇತನ ಹೆಚ್ಚಳ ಸೇರಿದಂತೆ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸುಮಾರು 40 ದೇಶಗಳ ಅಮೆಜಾನ್‌ ವೇರ್‌ಹೌಸ್‌ಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ನ.25, 26ರಂದು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

Advertisement

ಮುಖ್ಯವಾಗಿ “ಫ್ರೈಡೆ ಸೇಲ್ಸ್‌’ ಅತ್ಯಂತ ಹೆಚ್ಚು ಆನ್‌ಲೈನ್‌ ಶಾಪಿಂಗ್‌ ನಡೆಯುವ ದಿನಗಳಲ್ಲಿ ಒಂದಾಗಿದೆ. ಇದೇ ದಿನದಂದು “ಬ್ಲ್ಯಾಕ್‌ ಫ್ರೈಡೆ’ ಹೆಸರಿನಲ್ಲಿ ಪ್ರತಿಭಟನೆ ನಡೆಸಲು ಅಮೆಜಾನ್‌ ಕಾರ್ಮಿಕರು ನಿರ್ಧರಿಸಿದ್ದಾರೆ.

ಇದರಲ್ಲಿ ಭಾರತ, ಅಮೆರಿಕ, ಯುಕೆ, ಜಪಾನ್‌, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ರಾಷ್ಟ್ರಗಳ ಕಾರ್ಮಿಕರು ಭಾಗವಹಿಸುತ್ತಿದ್ದಾರೆ.

ಕಚೇರಿಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮತ್ತು ವೇತನ ಹೆಚ್ಚಳಕ್ಕೆ ಆಗ್ರಹಿಸಿ, “ಮೇಕ್‌ ಅಮೆಜಾನ್‌ ಪೇ’ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಅಭಿಯಾನ ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next