Advertisement

ಕಾಯಂ ಜನತಾ ನ್ಯಾಯಾಲಯ ಸದ್ಭಳಕೆ ಮಾಡಿಕೊಳ್ಳಿ

09:38 PM Apr 03, 2019 | Team Udayavani |

ಕೋಲಾರ: ಕಾಯಂ ಜನತಾ ನ್ಯಾಯಾಲಯ ಅನುಷ್ಠಾನದಿಂದ ಸಾರ್ವಜನಿಕ ಸೇವೆಗಳಿಗೆ ಸಂಬಂ ಧಿಸಿದ ತೀವ್ರ ತರವಲ್ಲದ ಸಾಮಾನ್ಯ ಪ್ರಕರಣಗಳನ್ನು ನ್ಯಾಯಾಲಯದ ಮೆಟ್ಟಿಲೇರುವ ಮೊದಲೇ ಇತ್ಯರ್ಥ ಪಡಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್‌ ಕುಮಾರ್‌ ಹೆಂಚಾಟೆ ತಿಳಿಸಿದರು.

Advertisement

ರಾಜ್ಯದ ವಿವಿಧ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿಗಳ ಜೊತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾಹಿತಿ ನೀಡಿದ ಅವರು, ಕೇಂದ್ರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾ ಧಿಕಾರದ ಅಧಿ ಸೂಚನೆಯಂತೆ ಸಾರ್ವಜನಿಕರ ಉಪಯುಕ್ತ ಸೇವೆಗಳಿಗೆ ದೂರುಗಳನ್ನು ಶೀಘ್ರವಾಗಿ ಪರಿಹಾರಪಡಿಸಿ ಕೊಳ್ಳಬಹುದಾಗಿದೆ ಎಂದು ಹೇಳಿದರು.

ತ್ವರಿತಗತಿಯಲ್ಲಿ ನ್ಯಾಯ: ಕಕ್ಷಿದಾರರ ಸಮಕ್ಷಮದಲ್ಲಿ ಕುಳಿತು ಸಾಮಾನ್ಯ ರೀತಿಯಲ್ಲಿ ಸೌಹಾರ್ಧಯುತವಾಗಿ ಸಮಸ್ಯೆಗಳು ಮುಕ್ತಾಯಗೊಳ್ಳಲಿವೆ. ಅಲ್ಲದೆ, ಕಕ್ಷಿದಾರನಿಗೆ ಯಾವುದೇ ರೀತಿಯ ಹಣಕಾಸಿನ ಹೊರೆಯಾಗುವುದಿಲ್ಲ. ಎಲ್ಲರಿಗೂ ತ್ವರಿತಗತಿಯಲ್ಲಿ ನ್ಯಾಯ ದೊರಕಬೇಕು ಹಾಗೂ ನ್ಯಾಯದಾನದ ಬಗ್ಗೆ ಅರಿವು ಮತ್ತು ವಿಶ್ವಾಸ ಮೂಡಿಸುವ ನಿಟ್ಟನಲ್ಲಿ ಜನತಾ ನ್ಯಾಯಾಲಯ ಮಹತ್ವ ಪಡೆಯುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಪ್ರಯಾಣಿಕರನ್ನು ಅಥವಾ ಸರಕುಗಳನ್ನು ವಾಯು ಮಾರ್ಗ, ರಸ್ತೆ, ಜಲ ಮಾರ್ಗಗಳ ಸಾಗಣಿಕೆಗೆ ಸಂಬಂ ಧಿಸಿದಂತೆ, ಅಂಚೆ, ದೂರವಾಣಿ ಸೇವೆ, ವಿದ್ಯುತ್‌ ಸಮಸ್ಯೆ, ಸಾರ್ವಜನಿಕ ಸಂರಕ್ಷಣೆ, ನೈರ್ಮಲ್ಯ, ಆಸ್ಪತ್ರೆ ವಿತರಣಾ ಸೇವೆ, ವಿಮೆ, ಬ್ಯಾಂಕಿಂಗ್‌, ವಸತಿ, ಭೂಮಿ, ಶಿಕ್ಷಣ, ಸೇವೆ ಇತ್ಯಾದಿಗಳ 9 ಸೇವೆಗಳು ಇದರಿಂದ ಪರಿಹಾರ ಪಡೆಯಬಹುದಾಗಿದೆ ಎಂದು ಹೇಳಿದರು.

ಕಾಯಂ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕ ಕ್ಷೇತ್ರದ ಪ್ರತಿನಿ ಧಿಗಳು, ವಕೀಲರು ಹಾಗೂ ನ್ಯಾಯಾ ಧೀಶರನ್ನು ಒಳಗೊಂಡ ಸಮಿತಿಯಲ್ಲಿ ಪ್ರಕರಣ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು, ನಂತರ ಯಾವುದೇ ಕಾರಣಕ್ಕೂ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಹೇಳಿದರು.

Advertisement

ಯಾವುದೇ ಶುಲ್ಕ ವಿಧಿಸುವುದಿಲ್ಲ: ರಾಜ್ಯದ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ ಹಾಗೂ ಕಲ್ಬುರ್ಗಿಯ ಆರು ಸ್ಥಳಗಳಲ್ಲಿ ಕಾಯಂ ಜನತಾ ನ್ಯಾಯಾಲಯವನ್ನು ಸ್ಥಾಪಿಸಿದ್ದು, ಕೋಲಾರ ಜಿಲ್ಲೆಯವರು ಬೆಂಗಳೂರಿನ ವ್ಯಾಪ್ತಿಯಲ್ಲಿ ದೂರುಗಳನ್ನು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಲು ಅಪೀಲುದಾರನಿಂದ ಯಾವುದೇ ಶುಲ್ಕವನ್ನು ವಿ ಧಿಸುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಗುರುರಾಜ್‌ ಜಿ ಶಿರೋಳ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next