Advertisement

ಮತ್ತಷ್ಟು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಿ: ಮೇಯರ್‌

10:39 AM Jan 26, 2018 | Team Udayavani |

ಮಂಗಳೂರು: ಮಕ್ಕಳು ಮತ್ತು ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ “ಉದಯವಾಣಿ’ ಪತ್ರಿಕೆಯು ಓದುಗರ ಪ್ರೀತಿಗೆ ಪಾತ್ರವಾಗಿದೆ. ಮುಂದಿನ ದಿನ ಗಳಲ್ಲಿ ಸಮಾಜದ ಎಲ್ಲ ವರ್ಗಗಳ ಜನ ರಿಗೆ ಅನು ಕೂಲ ವಾಗುವ ಮತ್ತಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಮೇಯರ್‌ ಕವಿತಾ ಸನಿಲ್‌ ಆಶಿಸಿದ್ದಾರೆ.

Advertisement

2017ರ ದೀಪಾವಳಿ ಪ್ರಯುಕ್ತ ಉದಯವಾಣಿ ಪತ್ರಿಕೆಯು ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್‌ ಸಾರೀಸ್‌ ಸಂಸ್ಥೆ ಸಹಯೋಗದಲ್ಲಿ ಮಹಿಳೆ ಯರಿಗಾಗಿ ಆಯೋಜಿಸಿದ್ದ “ರೇಷ್ಮೆ ಜತೆ ದೀಪಾವಳಿ’ ಫೋಟೋ ಸ್ಪರ್ಧೆಯ ವಿಜೇತ ರಿಗೆ ಗುರುವಾರ ನಗರದ ಓಶಿಯನ್‌ ಪರ್ಲ್ ಹೊಟೇಲ್‌ ಸಭಾಂಗಣ ದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. ಮಕ್ಕಳ ಫೋಟೊ ಸ್ಪರ್ಧೆ ಮೂಲಕ ಜನ
ಮಾನಸವನ್ನು ಗೆದ್ದ ಪತ್ರಿಕೆಯು ಇದೀಗ “ರೇಷ್ಮೆ ಜತೆ ದೀಪಾವಳಿ’ ಮೂಲಕ ಮಹಿಳೆ ಯರ ಮನ ಗೆದ್ದಿದೆ ಎಂದು ಶ್ಲಾಘಿಸಿದರು. 

ಅತಿಥಿಯಾಗಿದ್ದ ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್‌ ಸಾರೀಸ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮುರಳೀಧರ ಶೆಟ್ಟಿ ಮಾತನಾಡಿ, ರೇಷ್ಮೆ ಸೀರೆಗಳು ಆರೋಗ್ಯ ದೃಷ್ಟಿಯಿಂದಲೂ ಉತ್ತಮ. ಉದಯವಾಣಿಯು  ಸಾಂಪ್ರದಾಯಿಕ ರೇಷ್ಮೆ ಬಟ್ಟೆಗಳ ಉಳಿವು, ಪುನಶ್ಚೇತನಕ್ಕೆ ಅಮೂಲ್ಯ ಕೊಡುಗೆ ನೀಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂಎಂಎನ್‌ಎಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್‌ ಕುಮಾರ್‌ ಅವರು ಮಾತನಾಡಿ, ನಮ್ಮ ಯುವಜನತೆ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಂದ ದೂರವಾಗು ತ್ತಿರುವು ದನ್ನು ಮನಗಂಡು ರೇಷ್ಮೆ ಮೂಲಕ ಸಂಸ್ಕೃತಿ ಯೊಂದಿಗೆ ಬೆಸೆಯುವ ಆಶಯ ದೊಂದಿಗೆ ಈ ಸ್ಪರ್ಧೆಯನ್ನು ಆರಂಭಿಸಲಾಯಿತು. ನಿರೀಕ್ಷೆಗಿಂತಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿರುವುದು ಖುಷಿ ತಂದಿದೆ ಎಂದು ಹೇಳಿದರು. ಸ್ಪರ್ಧೆಗೆ ಪ್ರಾಯೋಜ ಕತ್ವ ಒದಗಿಸಿದ ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್‌ ಸಾರೀಸ್‌ ಸಂಸ್ಥೆಯನ್ನೂ ಇದೇ ವೇಳೆ ಅಭಿನಂದಿಸಿದರು.

ವೇದಿಕೆಯಲ್ಲಿ  ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್‌ ಸಾರೀಸ್‌ ಸಂಸ್ಥೆಯ ಪಾಲುದಾರರಾದ ಅಶ್ವಿ‌ತಾ ಶೆಟ್ಟಿ ಉಪಸ್ಥಿತರಿದ್ದರು. ಉದಯ ವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ಸ್ವಾಗತಿಸಿದರು. ಪತ್ರಿಕೆಯ ಸುದ್ದಿ ವಿಭಾಗ ಮುಖ್ಯಸ್ಥ ಮನೋಹರ ಪ್ರಸಾದ್‌ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು. ಮ್ಯಾಗಝಿನ್‌ ಮತ್ತು ಸ್ಪೆಷಲ್‌ ಇನಿಶಿಯೇಟಿವ್ಸ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥರಾದ ಆನಂದ್‌ ಕೆ. ವಂದಿಸಿದರು. ಪ್ರಖ್ಯಾತ ಉಡುಪು ವಿನ್ಯಾಸಕಿ ಅಮಿತಾ ಆಚಾರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ನಾಲ್ವರು ಪರಿಣತರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.

Advertisement

ಬಹುಮಾನ ವಿಜೇತರ ವಿವರ 
ಪ್ರಥಮ    :    ಮಿಥಾಲಿ ರೈ ಮತು ಪ್ರಸನ್ನ ರೈ, ಪುತ್ತೂರು
ದ್ವಿತೀಯ    :    ವಿಜಯಾ ಪೈ, ಸುಲತಾ ನಾಯಕ್‌ ಮತ್ತು ಗೆಳತಿಯರು, ಪುತ್ತೂರು
ತೃತೀಯ    :    ವಾಣಿಶ್ರೀ ಭಟ್‌ ಮತ್ತು ಕುಟುಂಬ, ಬುಕ್ಕಿಗುಡ್ಡೆ, ಪೆರ್ಡೂರು
ಪ್ರೋತ್ಸಾಹಕರ ಬಹುಮಾನ
1. ಪ್ರಿಯಾ ಆಳ್ವ  ಮತ್ತು ವಿಜೇತ ಆಳ್ವ, ಮಂಗಳೂರು
2. ಶೀತಲ್‌ ಎಸ್‌. ರಾವ್‌ ಮತ್ತು ಹರ್ಷ, ಕೆಮ್ಮಣ್ಣು
3. ಸೌರಭಾ ಶೆಟ್ಟಿ ಮತ್ತು ಕುಟುಂಬ, ನಲ್ಲೂರು, ಕಾರ್ಕಳ
4. ಅನುಷಾ ಭಂಡಿ ಮತ್ತು ಅಂಕಿತಾ ಭಂಡಿ, ಪೆರ್ಡೂರು
5. ದೀಕ್ಷಾ ಸುವರ್ಣ ಮತ್ತು ಕುಟುಂಬ, ಮೂಲ್ಕಿ

ಈ ಸ್ಪರ್ಧಾ ಕಾರ್ಯಕ್ರಮವು ನನ್ನ ದೀಪಾವಳಿಯನ್ನು ಪ್ರಕಾಶಮಾನವಾಗಿಸಿದೆ.    
– ಮಿಥಾಲಿ ರೈ 

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ರೀತಿಯಲ್ಲಿ ಸಿದ್ಧತೆ ಮಾಡಿದ್ದೆವು. ಧರಿಸುವ ರೇಷ್ಮೆ ಸೀರೆ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಚರ್ಚಿಸಿದೆವು. ಫೋಟೊಗ್ರಾಫರನ್ನು ಕರೆಸಿ ಫೋಟೊ ತೆಗೆಸಿದ್ದೆವು. ಈ ವರ್ಷದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದೆವು.
ರಜನಿ ಪ್ರಭು, ಪುತ್ತೂರು, (ವಿಜಯಾ ಪೈ ಮತ್ತು ಗೆಳತಿಯರ ತಂಡದ ಸದಸ್ಯೆ).

ತುಂಬಾ ಖುಷಿಯಾಗಿದೆ. ಪತ್ರಿಕೆಯು ಇಂತಹ ಕಾರ್ಯಕ್ರಮ ಮುಂದುವರಿಸಲಿ. ಸ್ಪರ್ಧೆಯ ಫಲಿತಾಂಶ ಯಾವಾಗ ಬರುತ್ತದೆ ಎಂದು ಕಾಯುತ್ತಾ ಇದ್ದೆ; ರಿಸಲ್ಟ್  ಬರುವ ತನಕ ನಿದ್ದೆ  ಬಂದಿರಲಿಲ್ಲ.
– ವಂದನಾ ರೈ (ಸೌರಭಾ ಶೆಟ್ಟಿ  ಮತ್ತು ಕುಟುಂಬ)

Advertisement

Udayavani is now on Telegram. Click here to join our channel and stay updated with the latest news.

Next