Advertisement

ಹೋರಾಡುತ್ತಲೇ ಜೀವನ ರೂಪಿಸಿಕೊಳ್ಳಿ: ಸ್ವಾಮೀಜಿ

05:49 PM Jan 10, 2022 | Team Udayavani |

ಧಾರವಾಡ: ಜೀವನ ಹೂವಿನ ಹಾಸಿಗೆಯಲ್ಲ. ಪ್ರತಿಕ್ಷಣ ಸವಾಲುಗಳು ಎದುರಾಗುತ್ತವೆ. ನಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಲೇ ಜೀವನ ರೂಪಿಸಿಕೊಳ್ಳಬೇಕು ಎಂದು ಮನಗುಂಡಿಯ ಗುರುಬಸವಾನಂದ ಸ್ವಾಮೀಜಿ ಹೇಳಿದರು.

Advertisement

ನಗರದ ಕ್ಲಾಸಿಕ್‌ ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಕ್ಲಾಸಿಕ್‌ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಕ್ಲಾಸಿಕ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪಿಯು ಕಾಲೇಜಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಕಿರುದಾರಿ ಹಿಡಿಯದೆ, ಶಿಸ್ತು ಪ್ರಾಮಾಣಿಕತೆಯಿಂದ ಕಠಿಣವಾದ ಒಳ್ಳೆಯ ಆಯ್ಕೆಗಳನ್ನು ಮಾಡಿಕೊಂಡು ಯಶಸ್ಸು ಹೊಂದಬೇಕು ಎಂದರು.

ಡಾ| ಗೋಪಾಲ ಕಮಲಾಪುರ ಮಾತನಾಡಿ, ಪಿಯು ಹಂತ ವಿದ್ಯಾರ್ಥಿ ಜೀವನ ನಿರ್ಧರಿಸುವುದರಿಂದ ಆಧುನಿಕ ತಂತ್ರಜ್ಞಾನ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್‌ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಎಸ್‌. ಉಪ್ಪಾರ ಮಾತನಾಡಿ, ದುಶ್ಚಟಗಳಿಗೆ ಆಕರ್ಷಿತರಾಗದೇ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಜವಾಬ್ದಾರಿ ಅರಿತುಕೊಂಡು ಆತ್ಮವಿಶ್ವಾಸ ಮತ್ತು ಬದ್ಧತೆಯಿಂದ ಗುರಿ ಮುಟ್ಟಬೇಕು ಎಂದು ಸಲಹೆ ನೀಡಿದರು.

Advertisement

ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಪ್ರಮಾಣ ವಚನ ಬೋಧಿಸಲಾಯಿತು. ಪಿಯು ಕಾಲೇಜು ಪ್ರಾಚಾರ್ಯ ಡಾ| ಎಚ್‌.ಎಂ. ಉಡಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಕ್ಲಾಸಿಕ್‌ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ|ಕೆ.ಸಿ. ತಾರಾಚಂದ್‌, ಕ್ಲಾಸಿಕ್‌ ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಸ್ಕೂಲ್‌ ಪ್ರಾಚಾರ್ಯ ಮನೋಹರ ಕೆಂಚರಾಹುತ್‌ ಇದ್ದರು.

ಕೀರ್ತಿ ಕೋಷ್ಠಿ ಸ್ವಾಗತಿಸಿದರು. ಸೃಷ್ಟಿ ಹಾಗೂ ಅನನ್ಯಾ ನಿರೂಪಿಸಿದರು. ಸ್ನೇಹಾ ಗಣಾಚಾರಿ, ಗೋಪಾಲಕೃಷ್ಣ, ಶಿವಾನಿ ಹಿರೇಮಠ, ಸರ್ವಮಂಗಳಾ ಲಕ್ಷೆಟ್ಟಿ ಪರಿಚಯಿಸಿದರು. ರಣವೀರ ಶರ್ಮಾ ವಂದಿಸಿದರು. ಶಿವಾನಿ ಮತ್ತು ತಂಡದವರು ಪ್ರಾರ್ಥಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next