Advertisement

ಸಮಾಜ ಸೇವೆಯಿಂದ ಜೀವನ ಪಾವನ ಮಾಡಿಕೊಳ್ಳಿ

12:29 PM Oct 09, 2017 | Team Udayavani |

ಹುಬ್ಬಳ್ಳಿ: ಸಮಾಜಕ್ಕೆ ಏನಾದರೂ ಅಲ್ಪ ಕೊಡುಗೆ ನೀಡುವ ಮೂಲಕ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ| ಎಂ.ಎಂ. ಜೋಶಿ ಹೇಳಿದರು. ಮೂರುಸಾವಿರ ಮಠ ಮೈದಾನದ ಆವರಣದಲ್ಲಿರುವ ಸಭಾಗೃಹದಲ್ಲಿ ಭಾರತ ವಿಕಾಸ ಪರಿಷತ್‌ ಹಾಗೂ ಮಜೇಥಿಯಾ ಫೌಂಡೇಶನ್‌ ವತಿಯಿಂದ ನಡೆದ ಉಚಿತ ಕೃತಕ ಕಾಲು-ಕೈ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಮಜೇಥಿಯಾ ಫೌಂಡೇಶನ್‌  ಹಾಗೂ ಭಾರತ ವಿಕಾಸ ಪರಿಷತ್‌ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಮಜೇಥೀಯಾ ಫೌಂಡೇಶನ್‌ನ ಮುಖ್ಯಸ್ಥ ಜಿತೇಂದ್ರ ಮಜೇಥಿಯಾ ಮಾತನಾಡಿದರು. 

ಸಮಾಜ ನಮಗೇನು ನೀಡಿತು ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ನೀಡಿದ್ದೇವೆ ಎನ್ನುವುದು ಮುಖ್ಯ ಎಂದರು. ಭಾರತ ವಿಕಾಸ ಪರಿಷತ್‌ ಅಧ್ಯಕ್ಷ ನರೇಂದ್ರ ನಾಯಕ ಪರಿಷತ್‌ ಬೆಳೆದ ಬಂದ ಹಾದಿ ಕುರಿತು ಮಾಹಿತಿ ನೀಡಿದರು. ಈ ಶಿಬಿರದಲ್ಲಿ ಸುಮಾರು 51 ಜನರ ಕೈ ಮತ್ತು ಕಾಲುಗಳ ಅಳತೆ ಪಡೆಯಲಾಗಿತ್ತು.

ಅದರಲ್ಲಿ 35 ಕಾಲು, 2 ವರ್ಕಿಂಗ್‌ ಹ್ಯಾಂಡ್‌ ಹಾಗೂ 14 ಕೈ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಜುನಾಥ ಭಟ್‌ ಈ ಹಿಂದೆ ಕೃತಕ ಕೈ ಹಾಗೂ ಕಾಲು ಪಡೆದ ಹಲವರು ಸದ್ಯ ಅವರು ಮಾಡುತ್ತಿರುವ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಆನಂದಸಿಂಗ್‌ ಮುಕಾಶಿ, ಸುಭಾಸಸಿಂಗ್‌ ಜಮಾದಾರ, ಕೌಸ್ತುಭ ಸಂಶಿಕರ, ಅಂಜಲಿ ಮೊಕಾಶಿ, ಶಾನಭಾಗ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next