Advertisement

ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಿ

12:58 PM Jan 11, 2017 | Team Udayavani |

ಕಲಬುರಗಿ: ಯುವಜನತೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದು  ಸಂತೋಷ ವಿಷಯ. ಅದರಂತೆ ಅವರು ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸುವತ್ತಲೂ ಗಮನ ಹರಿಸಬೇಕು ಎಂದು ಕಲಬುರಗಿ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯೆ ಡಾ| ಶಾಲಿನಿ ಸಜ್ಜನಶೆಟ್ಟಿ ಹೇಳಿದರು. 

Advertisement

ನಗರದ ಆಳಂದ ವೃತ್ತದಲ್ಲಿರುವ ಕೃಷಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ ಸ್ವತ್ಛ ಜೀವನ, ಆರೋಗ್ಯ ಮತ್ತು ಸ್ವತ್ಛ ಭಾರತ ಅಭಿಯಾನದ ಅಡಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಇವತ್ತಿನ ಅವಶ್ಯಕತೆಗಳಲ್ಲಿ ರಕ್ತದಾನವೂ ಒಂದಾಗಿದೆ. ಇದಕ್ಕೆ ಯುವಜನತೆ ಮುಂದಾಗಬೇಕು. ಒಂದು ಪ್ರಾಣ ಉಳಿಸುವುದಕ್ಕಿಂತ ಇನ್ನೊಂದು ದೊಡ್ಡ ಕೆಲಸವಿಲ್ಲ. ರಕ್ತ ಹೀನತೆಯಿಂದಲ್ಲದೆ, ವಿವಿಧ ಸಂದರ್ಭದಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರಕ್ತ ಬೇಕಾಗುತ್ತದೆ. ಅದಕ್ಕಾಗಿ ಸಂಗ್ರಹಿಸಿ ಇಡಲಾಗುತ್ತದೆ.

ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್‌ ಡಾ| ಜೆ.ಆರ್‌.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ನಿಜವಾದ ಸಮಾಜ ಸೇವೆ ಮಾಡಿದ್ದಾರೆ.

ಅವರಲ್ಲಿನ ಸಮಾಜಿಕ ಕಾಳಜಿಯಿಂದಾಗಿ ಇವತ್ತು ಹಲವು ಜನರ ಜೀವಉಳಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಸುಹಾಸ ಎಲಶೆಟ್ಟಿ , ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ರಾಜು ತೆಗ್ಗಳ್ಳಿ, ಡಾ| ರಾಚಪ್ಪ ವಿ., ಡಾ| ಸಿದ್ದರಾಮ, ಯೋಗ ಗುರು ಸೋಮನಾಥ ರೆಡ್ಡಿ  ಪೂರ್ಮಾ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಪಾಟೀಲ ಮತ್ತು ಉಪಾಧ್ಯಕ್ಷ ಮಲ್ಲಿಕಾರ್ಜುನ ಹಾಜರಿದ್ದರು.

Advertisement

ಶಿಬಿರದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ರೆಡ್‌ ರಿಬ್ಬನ್‌ ಕ್ಲಬ್‌ನ ಮುಖಂಡರಾದ ಅನಿಲಕುಮಾರ ಚಿಕ್ಕಳಕಿ ಏಡ್ಸ್‌ ಬಗ್ಗೆ ಅರಿವು ಮೂಡಿಸಿದರು. ಮನೋಜಕುಮಾರ ಸ್ವಾಗತಿಸಿದರು. ಮಹಿಬೂಬಾ ತಬಸುಮ ಅತಿಥಿ ಪರಿಚಯಿಸಿದರು. ಮಂದಾಕಿನಿ ಮತ್ತು ನಸೀಮಾ ನಿರೂಪಿಸಿದರು. ನವೀನ ಪಾಟೀಲ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next