Advertisement

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಬದುಕಿನ ಜ್ಞಾನವೂ ಅಗತ್ಯ

04:18 PM Mar 07, 2022 | Team Udayavani |

ಕೋಲಾರ: ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳ ಸಂತೆ ಹೆಚ್ಚು ಸಹಕಾರಿಯಾಗಿದ್ದು, ಬದುಕಿನ ಜ್ಞಾನ ಬರುತ್ತದೆಎಂದು ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್‌.ಪ್ರದೀಪ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ, ಮೆಟ್ರಿಕ್‌ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದಅವರು, ಮಕ್ಕಳಿಗೆ ಪಠ್ಯವೊಂದೇ ಸಾಲದು,ಅದರ ಜತೆಗೆ ಬದುಕಿನ ಜ್ಞಾನವೂ ಅಗತ್ಯವಿದೆ. ಮಕ್ಕಳ ಸಂತೆಯಲ್ಲಿ ಮಕ್ಕಳು ತಾವು ತಂದತರಕಾರಿ, ವಸ್ತುಗಳ ಮಾರಾಟ, ಲೆಕ್ಕ ನಿರ್ವಹಣೆ,ಲಾಭ, ನಷ್ಟದ ಲೆಕ್ಕಾಚಾರ ಅರಿತುಕೊಳ್ಳಲುಸಹಕಾರಿಯಾಗಿದೆ. ಇದರಿಂದ ಮಕ್ಕಳುಸಮಾಜದಲ್ಲಿ ಬದುಕುವ ಪಾಠ ಕಲಿಯುತ್ತಾರೆ ಎಂದು ಹೇಳಿದರು.

ಸ್ವಾವಲಂಬನೆ ಸಾಧಿಸಿ: ಮಕ್ಕಳ ಸಂತೆಯೂ ಗಣಿತ ಕಲಿಯುವ ಒಂದು ಭಾಗವಾಗಿದೆ, ಇಲ್ಲಿತಾವು ವ್ಯಾಪಾರಕ್ಕೆ ಹಾಕಿದ ಬಂಡವಾಳ, ಪಡೆದಲಾಭ ನಷ್ಟಗಳ ಅರಿವು ಪಡೆಯುತ್ತಾರೆ. ಇದು ಮುಂದಿನ ದಿನಗಳಲ್ಲಿ ಅವರ ಸ್ವಾವಲಂಬನೆಗೂಸಹಕಾರಿ ಆಗುತ್ತದೆ. ಮಕ್ಕಳು ದೈನಂದಿನಬದುಕಿನಲ್ಲಿ ಅಗತ್ಯವಿರುವ ಜ್ಞಾನವನ್ನು ಕಲಿತಾಗಮಾತ್ರ ಸಮಾಜದಲ್ಲಿ ಸ್ವಾವಲಂಬನೆ ಸಾಧಿಸಿಪ್ರತಿಯೊಂದು ಸಮಸ್ಯೆ ಎದುರಿಸುವ ಶಕ್ತಿ ಪಡೆಯಲು ಸಾಧ್ಯ ಎಂದು ತಿಳಿಸಿದರು.

ವಸ್ತುಗಳ ಬಗ್ಗೆ ಗಮನ ಹರಿಸಿ: ಎಸ್‌ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ತಂದೆ,ತಾಯಿ ಮನೆಗೆ ಅಗತ್ಯ ವಸ್ತು ತರಲು ಅಂಗಡಿಗೆಕಳುಹಿಸಿದಾಗ ಹೇಗೆ ನಿಭಾಯಿಸಬೇಕು ಎಂಬಅನುಭವವೂ ಆಗುತ್ತದೆ. ಯಾವುದೇ ವಸ್ತುಖರೀದಿಸಿದಾಗ ಅದರ ತಯಾರಿಕಾ ದಿನ,ಅದನ್ನು ಎಂದಿನವರೆಗೂ ಬಳಸಲು ಯೋಗ್ಯಎಂಬುದರ ಅರಿವು ಪಡೆಯಬೇಕು ಎಂದು ಹೇಳಿದರು.

ಮಕ್ಕಳ ಸಂತೆಯಲ್ಲಿ ಶಾಲಾ ಮಕ್ಕಳು ಇಂದುಸೊಪ್ಪು, ಕ್ಯಾರೆಟ್‌, ಬಿಟ್ರೂಟ್‌, ಬೀನ್ಸ್‌,ಸೌತೇಕಾಯಿ ಮತ್ತಿತರ ತರಕಾರಿಗಳನ್ನು ಮಾರಿಗಮನ ಸೆಳೆದ ಅವರು, ಕೆಲವು ಮಕ್ಕಳು ಫ‌ೂÅಟ್‌ಸಲಾಡ್‌, ಬೇಲ್‌ಪುರಿ, ಮಸಾಲೆಪುರಿ ತಂದುಮಾರಿದರೆ ಕೆಲವು ಹೆಣ್ಣು ಮಕ್ಕಳು ಫಲಾವ್‌,ಚಿತ್ರಾನ್ನ ಪಡ್ಡು, ಜಾಮೂನು ತಂದು ಮಾರಿ ಗಮನ ಸೆಳೆದರು.

Advertisement

ವ್ಯಾಪಾರ ವಹಿವಾಟಿನಲ್ಲಿ ಗಮನ ಸೆಳೆದ,ಲಾಭ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿನೀಡಲಾಯಿತು. ಪೋಷಕರು, ಶಿಕ್ಷಕರು ಮಕ್ಕಳುತಂದಿದ್ದ ಉತ್ಪನ್ನಗಳನ್ನು ಖರೀದಿಸಿದರು.ಮಕ್ಕಳ ಸಂತೆ ಉಸ್ತುವಾರಿಯನ್ನು ಶಿಕ್ಷಕವೆಂಕಟರೆಡ್ಡಿ ವಹಿಸಿದ್ದು, ಎಸ್‌ಡಿಎಂಸಿ ಸದಸ್ಯರಾಮಚಂದ್ರಪ್ಪ, ಜಮುನಾ ಶಿಕ್ಷಕರಾದಸಚ್ಚಿದಾನಂದಮೂರ್ತಿ, ಸಿದ್ದೇಶ್ವರಿ, ಎಂ.ಆರ್‌.ಗೋಪಾಲಕೃಷ್ಣ, ಭವಾನಿ, ಶ್ವೇತಾ, ಸುಗುಣಾ, ಲೀಲಾ, ಫರೀದಾ, ಶ್ರೀನಿವಾಸಲು,ಡಿ.ಚಂದ್ರಶೇಖರ್‌, ನೇತ್ರಮ್ಮ, ದಾಕ್ಷಾಯಿಣಿ, ಜಮುನಾ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next