Advertisement

ಕರಡಿ ದಾಳಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಕಾಡಿನಲ್ಲಿ ಗುಂಡಿಕ್ಕಿ ಕೊಂದ ಐವರ ಸೆರೆ

10:15 AM Mar 17, 2020 | keerthan |

ಬೆಳಗಾವಿ: ಖಾನಾಪುರದ ಅರಣ್ಯ ಪ್ರದೇಶದಲ್ಲಿ ವಾರದ ಹಿಂದೆ ವ್ಯಕ್ತಿಯೋರ್ವ ಕರಡಿ ದಾಳಿಯಿಂದ ಮೃತಪಟ್ಟಿದ್ದಾನೆ ಎಂದು‌ಕೊಂಡಿದ್ದ ಪ್ರಕರಣಕ್ಕೆ‌ ತಿರುವು ಸಿಕ್ಕಿದ್ದು, ಈ ವ್ಯಕ್ತಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಖಾನಾಪುರ ತಾಲೂಕಿನ ಅಮಟೆ ಗ್ರಾಮದ ದೇವಿದಾಸ ರಾಜಾರಾಮ ಗಾವಕರ, ಸಂತೋಷ ಸೋಮಾ ಗಾವಕರ, ವಿಠ್ಠಲ ಗಣಪತಿ ನಾಯಕ, ರಾಮಾ ಗಣಪತಿ ನಾಯಕ ಹಾಗೂ ಜಾಂಬೋಟಿಯ ಪ್ರಶಾಂತ ಗಣಪತಿ ಸುತಾರ ಎಂಬವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮೂರು ಬಂದೂಕು, ಕಾಡತೂಸು ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಮಾ. 11ರಂದು ಅಮಟೆ ಗ್ರಾಮದ ಹೊರವಲಯದಲ್ಲಿರುವ ಅರಣ್ಯ‌ ಪ್ರದೇಶದಲ್ಲಿ ದನ ಕರುಗಳನ್ನು ಮೇಯಿಸಲು ಹೋಗಿದ್ದ ತಾನಾಜಿ ಟೋಪಾ ನಾಯಕ ಎಂಬಾತನ ಮೇಲೆ ಕರಡಿ ದಾಳಿ ನಡೆಸಲಾಗಿದೆ ಎಂದು ಈತನ‌ ಪತ್ನಿ ತೇಜಸ್ವಿನಿ ತಾನಾಜಿ ನಾಯಕ ಖಾನಾಪುರ ಠಾಣೆಯಲ್ಲಿ ದೂರು ನೀಡಿದ್ದಳು. ನಂತರ ಸಂಶಯಗೊಂಡು ಮಾ. 14ಕ್ಕೆ ಬಂದು ತನ್ನ ಪತಿಯ ಸಾವಿನಲ್ಲಿ ಶಂಕೆ‌ ಇದ್ದು, ಹೀಗಾಗಿ ಪತಿಯನ್ನು ಹತ್ಯೆ ಮಾಡಲಾಗಿದೆ ಎಂದು ದೂರು ನೀಡಿದ್ದಳು.

ಬೈಲಹೊಂಗಲ ಡಿಎಸ್ ಪಿ ಜೆ‌.ಎಂ. ಕರುಣಾಕರಶೆಟ್ಟಿ ನೇತೃತ್ವದಲ್ಲಿ ಖಾನಾಪುರ ಸಿಪಿಐ ಸುರೇಶ ಶಿಂಗಿ, ಪಿಎಸ್ ಐ ಬಸನಗೌಡ ಪಾಟೀಲ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next