Advertisement

ಪಾಕ್‌ನ ಎಲ್ಲೆಲ್ಲೂ ಪೇಪರ್‌ ಬರ! ಕಾಗದ ಕ್ಷೇತ್ರದ ಮೇಲೆ ಆರ್ಥಿಕ ದುಸ್ಥಿತಿ ದುಷ್ಪರಿಣಾಮ

12:01 AM Jun 25, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳೇ ಸಿಗುತ್ತಿಲ್ಲ! ಹಾಗೆಂದ ಮಾತ್ರಕ್ಕೆ, ಅಲ್ಲಿಯೂ ಪಠ್ಯ ಪರಿಷ್ಕರಣೆ ಮಾಡಲು ಹೋಗಿ ಏನಾದರೂ ವಿವಾದವಾಯಿತೇ ಎಂದು ತಿಳಿದು ಕೊಳ್ಳಬೇಕಿಲ್ಲ. ಆ ದೇಶದ ಆರ್ಥಿಕ ದುಸ್ಥಿತಿ ಯಿಂದಾಗಿ ಕಾಗದ ಉದ್ಯಮ ನೆಲ ಕಚ್ಚುತ್ತಿದ್ದರಿಂದ ಹೀಗಾಗಿದೆ!

Advertisement

ಹಣಕಾಸು ಮುಗ್ಗಟ್ಟಿನಿಂದ ಆ ದೇಶದ ಕಾಗದ ತಯಾರಿಕಾ ಉದ್ಯಮ ಅಕ್ಷರಶಃ ನಲುಗಿ ಹೋಗಿದೆ. ಅದರಿಂದಾಗಿ, ದೇಶ ದಲ್ಲಿ ಕಾಗದದ ಕೊರತೆ ಉಂಟಾಗಿದೆ. ಅದರ ಪರಿಣಾಮ, ಸ್ಥಳೀಯವಾಗಿ ಉತ್ಪಾ ದನೆಯಾಗುವ ಕಾಗದದ ಬೆಲೆಯೂ ಜಾಸ್ತಿಯಾಗಿದೆ.

ಇದೇ ಜನವರಿಯಿಂದ ಪ್ರತಿ ಕೆಜಿ ಪೇಪರ್‌ಗೆ 100 ರೂ. ಹೆಚ್ಚಾಗಿದೆ. ಇದೇ ತಿಂಗಳಲ್ಲಿ ಪಠ್ಯ ಪುಸ್ತಕ ಮುದ್ರಣ ಸಂಸ್ಥೆಗಳ ಮಾಲೀಕರ ಸಂಘಟನೆಯು ಕಾಗದದ ಬೆಲೆ ಹೆಚ್ಚಾಗಿ ರುವುದರಿಂದ ಪಠ್ಯ ಪುಸ್ತಕಗಳ ಮುದ್ರಣವನ್ನು ಕೆಲ ತಿಂಗಳುಗಳ ಕಾಲ ತಡೆಹಿಡಿಯುವುದಾಗಿ ಘೋಷಿ ಸಿತ್ತು. ಅದರ ಪರಿಣಾಮವಾಗಿ, ಶಾಲೆ ಗಳಲ್ಲಿ ಪಠ್ಯ ಪುಸ್ತಕ, ನೋಟ್‌ ಪುಸ್ತಕ ಗಳು ಸಿಗ ದಂತಾ ಗಿವೆ. ಅಷ್ಟೇ ಅಲ್ಲ, ದಿನ ಪತ್ರಿಕೆಗಳು, ಮ್ಯಾಗಜಿನ್‌ಗಳು, ಪೋಸ್ಟರ್‌ಗಳು, ಪ್ಯಾಕೇಜಿಂಗ್‌ ಉದ್ಯಮ ಸೇರಿದಂತೆ ಕಾಗದ ಬಳಕೆಯಿರುವ ಎಲ್ಲಾ ಕ್ಷೇತ್ರಗಳೂ ಸೊರಗಿವೆ ಎಂದು ಮೂಲಗಳು ತಿಳಿಸಿವೆ.

ದಿವಾಳಿ ತಡೆಯಲು ಸೂಪರ್‌ ಟ್ಯಾಕ್ಸ್‌!
ಅತಿಯಾದ ಹಣದುಬ್ಬರದಿಂದ ಪಾಕ್‌ ದಿವಾಳಿ ಯಂಚಿಗೆ ತಲುಪಿದೆ! ಇದನ್ನು ಸ್ವತಃ ಪ್ರಧಾನಿ ಶೆಹಬಾಜ್‌ ಷರೀಫ್ ಅವರೇ ಒಪ್ಪಿಕೊಂಡಿದ್ದಾರೆ. ಇದನ್ನು ತಡೆಯಲಿಕ್ಕಾಗಿಯೇ ಅವರು ಉಕ್ಕು, ಸಿಮೆಂಟ್‌, ಆಟೋಮೊಬೈಲ್‌ನಂತಹ ಬೃಹತ್‌ ಉದ್ಯಮಗಳ ಮೇಲೆ ಶೇ.10 ಸೂಪರ್‌ ಟ್ಯಾಕ್ಸ್‌ ವಿಧಿಸಿದ್ದಾರೆ. ಅಷ್ಟು ಮಾತ್ರವಲ್ಲ ಗರಿಷ್ಠ ಆದಾಯ ಹೊಂದಿರುವ ವ್ಯಕ್ತಿಗಳ ಮೇಲೂ ಬಡತನ ನಿರ್ಮೂಲನೆ ತೆರಿಗೆ ವಿಧಿಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ಷರೀಫ್, ನಮ್ಮ ಮೊದಲ ಉದ್ದೇಶ ಜನರಿಗೆ ನಿರಾಳತೆ ನೀಡುವುದು, ಹಣದುಬ್ಬರದ ಹೊರೆ ಇಳಿಸುವುದು. ನಂತರದ ಉದ್ದೇಶ, ದೇಶ ದಿವಾಳಿ ಯಾಗುವುದನ್ನು ತಡೆಯುವುದು ಎಂದಿದ್ದಾರೆ. ಇಮ್ರಾನ್‌ ಖಾನ್‌ ನೇತೃತ್ವದ ಹಿಂದಿನ ಸರಕಾರಮಾಡಿರುವ ಭ್ರಷ್ಟಾಚಾರ ದೇಶಕ್ಕೆ ತೀವ್ರವಾಗಿ ತಟ್ಟಿದೆ ಎಂದೂ ಆರೋಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next