Advertisement

ಕೋಲ್ಕತಾ ರಾಜಭವನ ಸಮೀಪದ ಕಟ್ಟಡದಲ್ಲಿ ಭಾರೀ ಬೆಂಕಿ; ಇಬ್ಬರಿಗೆ ಗಾಯ

11:21 PM May 10, 2023 | Team Udayavani |

ಕೋಲ್ಕತಾ: ನಗರದ ಮಧ್ಯ ಭಾಗದಲ್ಲಿರುವ ರಾಜಭವನದ ಸಮೀಪವಿರುವ ಬಹುಮಹಡಿ ಕಟ್ಟಡದ ಮೇಲಿನ ಮಹಡಿಯಲ್ಲಿ ಬುಧವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.

Advertisement

ಐದು ಅಂತಸ್ತಿನ ‘ಸರಾಫ್ ಹೌಸ್’ ಎಂಬ ವಾಣಿಜ್ಯ ಕಟ್ಟಡದ ಟೆರೇಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬಂದಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಕೋಲ್ಕತಾ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿಯನ್ನು ನಂದಿಸಲು ಅಧಿಕಾರಿಗಳು 15 ಅಗ್ನಿಶಾಮಕ ಟೆಂಡರ್‌ಗಳು ಮತ್ತು ಒಂದು 55 ಮೀ ಹೈಡ್ರಾಲಿಕ್ ಲ್ಯಾಡರ್ ಅನ್ನು ಸೇವೆಗೆ ಬಳಸಿಕೊಂಡರು. ಸುಮಾರು ಒಂಬತ್ತು ಗಂಟೆಗಳ ನಂತರ ಬೆಂಕಿಯನ್ನು ನಂದಿಸಲು ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next