Advertisement

ಮುಂಬೈನಲ್ಲಿ 120 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ; ಮಾಜಿ ಪೈಲಟ್ ಸೇರಿ ಇಬ್ಬರ ಬಂಧನ

01:00 PM Oct 07, 2022 | Team Udayavani |

ಮುಂಬೈ: ಮುಂಬೈನ ಗೋದಾಮಿನಲ್ಲಿ ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಡ್ರಗ್ಸ್ ಅನ್ನು ಮಾದಕ ವಸ್ತು ನಿಯಂತ್ರಣ ಘಟಕ ಪತ್ತೆ ಹಚ್ಚಿದ್ದು, ಅಂದಾಜು 120 ಕೋಟಿ ಮೌಲ್ಯದ 60 ಕೆಜಿ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಕೋಟಿತೀರ್ಥ ಪುಷ್ಕರಿಣಿಯ ಮೀನುಗಳ ಸಾವು, ಗ್ರಾಮಸ್ಥರ ಆಕ್ರೋಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾದ ಮಾಜಿ ಪೈಲಟ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಎನ್ ಸಿಬಿ ಹೇಳಿದೆ. ಈ ಮೊದಲು ಗುಜರಾತ್ ನ ಜಾಮ್ ನಗರದಲ್ಲಿಯೂ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿದ್ದ ಮಾದಕ ವಸ್ತು ನಿಯಂತ್ರಣ ಘಟಕ ದೊಡ್ಡ ಪ್ರಮಾಣದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ.

ಮುಂಬೈನಲ್ಲಿ ವಶಪಡಿಸಿಕೊಂಡ ಮೆಫೆಡ್ರೋನ್ ಡ್ರಗ್ಸ್ ಪ್ರಕರಣದಲ್ಲಿ ಏರ್ ಇಂಡಿಯಾದ ಮಾಜಿ ಪೈಲಟ್ ಸೋಹೈಲ್ ಗಫಾರ್ ನನ್ನು ಬಂಧಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಆರೋಗ್ಯದ ಕಾರಣ ನೀಡಿ ಸೋಹೈಲ್ ಗಫಾರ್ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ.

ಈ ಡ್ರಗ್ಸ್ ಜಾಲ ಈಗಾಗಲೇ ಸುಮಾರು 225 ಕೆಜಿ ಡ್ರಗ್ಸ್ ಅನ್ನು ಮಾರಾಟ ಮಾಡಿದ್ದು, ಇದರಲ್ಲಿ 60 ಕೆಜಿ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾದಕ ವಸ್ತು ನಿಯಂತ್ರಣ ಏಜೆನ್ಸಿ ಪ್ರಕಟಣೆಯಲ್ಲಿ ಹೇಳಿದೆ.

Advertisement

ಗುಜರಾತ್ ನ ಜಾಮ್ ನಗರದ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಮೇರೆಗೆ ಮುಂಬೈನಲ್ಲಿ ಡ್ರಗ್ಸ್ ಜಾಲ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ ನಲ್ಲಿ ಗುಜರಾತ್ ನ ವಡೋದರಾದಲ್ಲಿ ಸುಮಾರು 200ಕೆಜಿ ಮೆಫೆಡ್ರೋನ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next