Advertisement

Shimoga; ಕೇಂದ್ರ ಬಜೆಟ್ ನಲ್ಲಿ ಶಿವಮೊಗ್ಗಕ್ಕೆ ಪ್ರಮುಖ ಘೋಷಣೆ ನಿರೀಕ್ಷೆ: ಬಿ.ವೈ.ರಾಘವೇಂದ್ರ

11:18 AM Jul 20, 2024 | keerthan |

ಶಿವಮೊಗ್ಗ: ಎನ್ ಡಿಎ ಸರ್ಕಾರ ಜುಲೈ 23 ಕ್ಕೆ ಬಜೆಟ್ ಮಂಡಿಸುತ್ತಿದೆ. ಐತಿಹಾಸಿಕ ಬಜೆಟ್ ಇದಾಗಲಿದೆ. ರಾಷ್ಟ್ರದ ಸರ್ವಾಂಗಣ ಬಜೆಟ್ ಆಗಲಿದೆ. ರಾಷ್ಟ್ರಪತಿ ಭಾಷಣದ ವಂದನಾ ಭಾಷಣದಲ್ಲಿ ಶಿವಮೊಗ್ಗದ ರೈಲ್ವೆ, ಹೈವೆ ಮತ್ತು ಪ್ರವಾಸೋದ್ಯಕ್ಕೆ ಒತ್ತು ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1600 ಕೋಟಿ ವೆಚ್ಚದಲ್ಲಿ ಬೀರೂರು ಶಿವಮೊಗ್ಗ ರೈಲ್ವೆ ಡಬ್ಬಲಿಂಗ್ ಮಾಡಲು ಡಿಪಿಆರ್ ರೆಡಿ ಮಾಡಲಾಗಿದೆ. ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಎಲ್ಲರು ಸೇರಿ ಶ್ರಮಿಸಲಾಗಿದೆ. ಕೆಲ ಅಭಿವೃದ್ಧಿಗೆ ರಾಜ್ಯದ ಪಾಲುದಾರಿಕೆ ಇದೆ. ಇದನ್ನು ಆಯಾ ಶಾಸಕರ ರಾಜ್ಯ ಸರ್ಕಾರದ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಆಗುಂಬೆ 12 ಕಿ ಮೀ ಟನಲ್, ರೈಲ್ವೆ ಡಬ್ಬಲಿಂಗ್ ನೀರಿಕ್ಷೆ ಇದೆ. ಕೇಂದ್ರದಿಂದ ಈ ವರ್ಷ 8 ರಿಂದ 10 ಸಾವಿರ ಕೋಟಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಬರುವ ನಿರೀಕ್ಷೆ ಇದೆ ಎಂದರು.

ಹಾವೇರಿ, ದಾವಣಗೆರೆ ಮತ್ತು ಅಪ್ಪರ್ ತುಂಗ ಭಾಗದ ಜನರಿಗೆ ಜೀವನನದಿಯಾದ ತುಂಗೆಗೆ ಬಾಗಿನ ಅರ್ಪಿಸಿದ್ದೇವೆ. ಕಳೆದ ಬಾರಿ ರೈತರ ಕಣ್ಣಿನಲ್ಲಿ ಬರಗಾಲ ಆವರಿಸಿ ಕಣ್ಣೀರು ಬಂದಿತ್ತು. 70-80 ಸಾವಿರ ಹೆಕ್ಟೇರ್ ಗೆ ನೀರುಣಿಸುವ ತುಂಗೆ ಭರ್ತಿಯಾಗಿದೆ. ತುಂಗಾ ಜಲಾಶಯ ಭರ್ತಿಯಾದ ಪರಿಣಾಮ ಬಾಗಿನ ಅರ್ಪಿಸಿದ್ದೇವೆ. ಬರಗಾಲದಲ್ಲಿ ಜೂನ್ ವರೆಗೂ ನೀರುಣಿಸುವ ಕಾರ್ಯ ತುಂಗ ಜಲಾಶಯದಿಂದ ಆಗಿತ್ತು. ಈಗ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ರೈತರು ಎಚ್ಚರಿಕೆಯಿಂದ ನೀರನ್ನು ಬಳಸಿಕೊಳ್ಳಲಿ ಎಂದು ಸಂಸದರು ಹೇಳಿದರು.

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನನ್ನ ಕ್ಷೇತ್ರದ ತುಂಗ ತಾಯಿಗೆ ಬಾಗಿನ ಅರ್ಪಿಸಿದ್ದೇವೆ.  ಜೀವನದಿ ಹೀಗೆ ಹರಿಯಲಿ, ನಾಡು ಸಮೃದ್ಧಿಯಾಗಲಿ. ತುಂಗಾ ಜಲಾಶಯದಲ್ಲಿ ಹೂಳು ತುಂಬಿದೆ. ಮೂರು ಇಲಾಖೆ ಸೇರಿ ಹೂಳೆತ್ತಬೇಕು. ಸರ್ಕಾರ ಯೋಚಿಸಿ ಹೂಳೆತ್ತಬೇಕು ಎಂದರು.

ತೀರ್ಥಹಳ್ಳಿ ತಡೆಗೋಡೆ ಕುಸಿತ ವಿಚಾರವಾಗಿ ಮಾತನಾಡಿ, ತಡೆಗೋಡೆ ಕಟ್ಟಿದ್ದು ಮಣ್ಣು ರಸ್ತೆಗೆ ಬರಬಾರದೆಂದು. ಆದರೆ ಗುಡ್ಡ ಕುಸಿದರೆ ಯಾವುದನ್ನೂ ತಡೆಯಲು ಸಾಧ್ಯವಿಲ್ಲ ಎಂದರು.

Advertisement

ತೀರ್ಥಹಳ್ಳಿ ಹೊಸ ಕಟ್ಟಡ ಕಳಪೆ ಕಾಮಗಾರಿ ವಿಚಾರವಾಗಿ ಮಾತನಾಡಿ, ಎಲ್ಲಾ ಕಟ್ಟಡ ಸುರಕ್ಷಿತವಾಗಿದೆ. ತಾ ಪಂ ಕಟ್ಟಡ ಎಲೆಕ್ಟ್ರಿಕಲ್ ವಯರ್ ನಿರ್ಮಾಣದಲ್ಲಿ ಲೀಕೇಜ್ ಆಗಿದೆ. ಗುತ್ತಿಗೆದಾರರು ಇನ್ನೂ ಹಸ್ತಾಂತರ ಮಾಡಿಲ್ಲ, ಸರಿ ಪಡಿಸಲಾಗುತ್ತದೆ. ನಾನು ಕಂಟ್ರಾಕ್ಟರ್ ಅಲ್ಲ. ನಾನು ನಿಂತು ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.

ವಾಲ್ಮೀಕಿ ಅಭಿವೃದ್ಧಿ ಹಗರಣ ವಿಚಾರವಾಗಿ ಮಾತನಾಡಿದ ಆರಗ ಜ್ಞಾನೇಂದ್ರ, ಕಾಂಗ್ರೆಸ್ ನವರು ನೀನು ಕಳ್ಳ ಎಂದರೆ ನೀನೇ ಕಳ್ಳ ಎಂಬ ರೀತಿಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಡೆತ್ ನೋಟ್ ನಲ್ಲಿ ಸಚಿವರ ಹೆಸರು ಉಲ್ಲೇಖವಾಗಿದೆ. ಮೃತ ಚಂದ್ರಶೇಖರ್ ಪತ್ನಿಯಿಂದ ಮೂರು ಬಾರಿ ಹೇಳಿಕೆ ಪಡೆದಿದ್ದಾರೆ. ಎಲ್ಲಾ ಆರೋಪಿಗಳು ಸೇರಿ ಕೃತ್ಯ ನಡೆಸಿದ್ದರೂ ಉಪಯೋಗವಾಗಿಲ್ಲ. ಎಸ್ಐಟಿ ಯಲ್ಲಿ ಆರೋಪಿಗಳ ಹೆಸರಿದೆ. ಆದರೆ ಪ್ರಕರಣ ಮುಚ್ಚುವ ಕೆಲಸವಾಗಿದೆ. ವಾಲ್ಮೀಕಿ ಹಗರಣದ ಹಣದಲ್ಲಿ ತೆಲಂಗಾಣದ ಚುನಾವಣೆ ನಡೆದಿದೆ. ಇದನ್ನು ಇ.ಡಿ ಉಲ್ಲೇಖ ಮಾಡಿದೆ. ವಿಧಾನಸಭೆಯಲ್ಲಿ ಡೆತ್ ನೋಟನ್ನು ಸಿಎಂ ಪೂರ್ಣ ಓದಿಲ್ಲ. ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸಮಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ. ನಾವು ಭ್ರಷ್ಟಾಚಾರ ನಡೆಸಿದ್ದರೆ ತನಿಖೆ ನಡೆಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next