Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1600 ಕೋಟಿ ವೆಚ್ಚದಲ್ಲಿ ಬೀರೂರು ಶಿವಮೊಗ್ಗ ರೈಲ್ವೆ ಡಬ್ಬಲಿಂಗ್ ಮಾಡಲು ಡಿಪಿಆರ್ ರೆಡಿ ಮಾಡಲಾಗಿದೆ. ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಎಲ್ಲರು ಸೇರಿ ಶ್ರಮಿಸಲಾಗಿದೆ. ಕೆಲ ಅಭಿವೃದ್ಧಿಗೆ ರಾಜ್ಯದ ಪಾಲುದಾರಿಕೆ ಇದೆ. ಇದನ್ನು ಆಯಾ ಶಾಸಕರ ರಾಜ್ಯ ಸರ್ಕಾರದ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಆಗುಂಬೆ 12 ಕಿ ಮೀ ಟನಲ್, ರೈಲ್ವೆ ಡಬ್ಬಲಿಂಗ್ ನೀರಿಕ್ಷೆ ಇದೆ. ಕೇಂದ್ರದಿಂದ ಈ ವರ್ಷ 8 ರಿಂದ 10 ಸಾವಿರ ಕೋಟಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಬರುವ ನಿರೀಕ್ಷೆ ಇದೆ ಎಂದರು.
Related Articles
Advertisement
ತೀರ್ಥಹಳ್ಳಿ ಹೊಸ ಕಟ್ಟಡ ಕಳಪೆ ಕಾಮಗಾರಿ ವಿಚಾರವಾಗಿ ಮಾತನಾಡಿ, ಎಲ್ಲಾ ಕಟ್ಟಡ ಸುರಕ್ಷಿತವಾಗಿದೆ. ತಾ ಪಂ ಕಟ್ಟಡ ಎಲೆಕ್ಟ್ರಿಕಲ್ ವಯರ್ ನಿರ್ಮಾಣದಲ್ಲಿ ಲೀಕೇಜ್ ಆಗಿದೆ. ಗುತ್ತಿಗೆದಾರರು ಇನ್ನೂ ಹಸ್ತಾಂತರ ಮಾಡಿಲ್ಲ, ಸರಿ ಪಡಿಸಲಾಗುತ್ತದೆ. ನಾನು ಕಂಟ್ರಾಕ್ಟರ್ ಅಲ್ಲ. ನಾನು ನಿಂತು ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.
ವಾಲ್ಮೀಕಿ ಅಭಿವೃದ್ಧಿ ಹಗರಣ ವಿಚಾರವಾಗಿ ಮಾತನಾಡಿದ ಆರಗ ಜ್ಞಾನೇಂದ್ರ, ಕಾಂಗ್ರೆಸ್ ನವರು ನೀನು ಕಳ್ಳ ಎಂದರೆ ನೀನೇ ಕಳ್ಳ ಎಂಬ ರೀತಿಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಡೆತ್ ನೋಟ್ ನಲ್ಲಿ ಸಚಿವರ ಹೆಸರು ಉಲ್ಲೇಖವಾಗಿದೆ. ಮೃತ ಚಂದ್ರಶೇಖರ್ ಪತ್ನಿಯಿಂದ ಮೂರು ಬಾರಿ ಹೇಳಿಕೆ ಪಡೆದಿದ್ದಾರೆ. ಎಲ್ಲಾ ಆರೋಪಿಗಳು ಸೇರಿ ಕೃತ್ಯ ನಡೆಸಿದ್ದರೂ ಉಪಯೋಗವಾಗಿಲ್ಲ. ಎಸ್ಐಟಿ ಯಲ್ಲಿ ಆರೋಪಿಗಳ ಹೆಸರಿದೆ. ಆದರೆ ಪ್ರಕರಣ ಮುಚ್ಚುವ ಕೆಲಸವಾಗಿದೆ. ವಾಲ್ಮೀಕಿ ಹಗರಣದ ಹಣದಲ್ಲಿ ತೆಲಂಗಾಣದ ಚುನಾವಣೆ ನಡೆದಿದೆ. ಇದನ್ನು ಇ.ಡಿ ಉಲ್ಲೇಖ ಮಾಡಿದೆ. ವಿಧಾನಸಭೆಯಲ್ಲಿ ಡೆತ್ ನೋಟನ್ನು ಸಿಎಂ ಪೂರ್ಣ ಓದಿಲ್ಲ. ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸಮಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ. ನಾವು ಭ್ರಷ್ಟಾಚಾರ ನಡೆಸಿದ್ದರೆ ತನಿಖೆ ನಡೆಸಲಿ ಎಂದರು.