Advertisement

ಮಜಿಬೈಲ್‌ : ಹಸಿರು ಸಹಕಾರ ಯೋಜನೆ

08:31 PM Jun 27, 2019 | Sriram |

ಕುಂಬಳೆ: ರಾಜ್ಯ ಸರಕಾರದ ಹರಿತ ಕೇರಳ ಯೋಜನೆಯಂಗವಾಗಿ ಸಹಕಾರಿ ಸಂಘದ ಮೂಲಕ ನಿರ್ವಹಿಸುವ ಹಸಿರು ಸಹಕಾರ ಯೋಜನೆಯನ್ನು ಮಜಿಬೈಲ್‌ ಸೇವಾ ಸಹಕಾರಿ ಸಂಘದ ವತಿಯಿಂದ ಕೈಗೊಳ್ಳಲಾಯಿತು.

Advertisement

ಮಂಜೇಶ್ವರ ತಾಲೂಕು ಸಹಕಾರಿ ಸಂಘಗಳ ಸಹಾಯಕ ರಿಜಿಸ್ಟ್ರಾರ್‌ ಕೆ.ರಾಜಗೋಪಾಲನ್‌ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಾಲಿ ವರ್ಷದಲ್ಲಿ ಸುಮಾರು ಒಂದು ಲಕ್ಷ ಗೇರು ಸಸಿಗಳನ್ನು ಕೃಷಿಕರಿಗೆ ಸಹಕಾರಿ ಸಂಘಗಳ ಮೂಲಕ ವಿತರಿಸಲಾಗುವುದು. ಕಳೆದ ವರ್ಷ ನೀಡಿದ ಹಲಸಿನ ಸಸಿಗಳನ್ನು ಮತ್ತು ಈ ವರ್ಷದ ಗೇರು ಸಸಿಗಳನ್ನು ನಾವು ಸಂರಕ್ಷಿಸಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸೇವಾಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಗೋವಿಂದ ಹೆಗ್ಡೆ ವಹಿಸಿದರು.ರಾಜ್ಯಪ್ರಶಸ್ತಿ ವಿಜೇತ ಕೃಷಿಕ ಬೊಳುವಾಯಿ ತಿಮ್ಮಪ್ಪ ಭಂಡಾರಿ ಹರಿತ ಯೋಜನೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ವಿವರಿಸಿದರು.
ಸಮಾರಂಭದಲ್ಲಿ ಬ್ಯಾಂಕ್‌ ವತಿಯಿಂದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಸುಮಾರು 500ರಷ್ಟು ಸಸಿಗಳನ್ನು ವಿತರಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಮಮ್ಮುಂಞಿ ಹಾಜಿ, ಮಾಜಿ ಅಧ್ಯಕ್ಷ ಎಂ,ಸಂಜೀವ ಶೆಟ್ಟಿ, ನಿರ್ದೇಶಕರಾದ ರಮೇಶ್‌ ಸುವರ್ಣ,ಆನಂದ ಶೆಟ್ಟಿ, ಮಹಮ್ಮದ್‌ ಮುಸ್ತಫಾ,
ಕಮಲ,ಹೇಮಲತಾ ಆಳ್ವ, ವನಿತಾ ನಾಯಕ್‌,ಎಂ.ಸತೀಶ್‌ ಪಂಜಿಂಗಾರ್‌, ಬ್ಯಾಂಕ್‌ ನಿವೃತ್ತ ಕಾರ್ಯದರ್ಶಿ, ಪಿ.ಶಾಂತಾರಾಮ ಶೆಟ್ಟಿ, ಸುಂದರ ಕುಳೂರು ಉಪಸ್ಥಿತರಿದ್ದರು. ರಾಮಕೃಷ್ಣ ಕಡಂಬಾರ್‌ ಸ್ವಾಗತಿಸಿದರು. ಉದಯಕುಮಾರ್‌ ಶೆಟ್ಟಿ ಕರಿಬೈಲು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next