Advertisement

ದರ್ಶನ್‌ ಬರ್ತ್‌ಡೇ ಹಿನ್ನೆಲೆ: ಮೆಜೆಸ್ಟಿಕ್‌ ರೀ ರಿಲೀಸ್‌

04:59 PM Feb 09, 2022 | Team Udayavani |

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಾಯಕರಾಗಿ ನಟಿಸಿದ್ದ ಸೂಪರ್‌ ಹಿಟ್‌ ಚಲನಚಿತ್ರ “ಮೆಜೆಸ್ಟಿಕ್‌’. 2002 ರ ಫೆಬ್ರವರಿ 8 ರಂದುಈ ಚಿತ್ರ ಬಿಡುಗಡೆಯಾಗಿತ್ತು.ಭರ್ಜರಿ ಯಶಸ್ಸು ಕಂಡಿತ್ತು.ಪಿ.ಎನ್‌ ಸತ್ಯ ಈ ಚಿತ್ರ ನಿರ್ದೇಶನ ಮಾಡಿದ್ದರು.

Advertisement

ಈ ಚಿತ್ರ ಬಿಡುಗಡೆಯಾಗಿ ಇಪ್ಪತ್ತುವರ್ಷ ಕಳೆದಿದೆ. ಫೆ.16ದರ್ಶನ್‌ ಅವರಹುಟ್ಟುಹಬ್ಬವಿದೆ. ಈಸಂದರ್ಭದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಮೆಜೆಸ್ಟಿಕ್‌ ಚಿತ್ರ ಮರು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.

ಇನ್ನು, “ಮೆಜೆಸ್ಟಿಕ್‌’ ಬಿಡುಗಡೆಯಾಗಿ 20 ವರ್ಷ ಆದ ಹಿನ್ನೆಲೆಯಲ್ಲಿ ದರ್ಶನ್‌ ಕೂಡಾ ಟ್ವೀಟ್‌ ಮಾಡಿದ್ದಾರೆ. “ನಿಮ್ಮೆಲ್ಲರ ಮನದಂಗಳಕ್ಕೆ ದಾಸನಾಗಿಇಟ್ಟ ಮೊದಲ ಹೆಜ್ಜೆ “ಮೆಜೆಸ್ಟಿಕ್‌’ ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳು ಕಳೆದಿವೆ. ಇಂತಹ ಒಳ್ಳೆಬುನಾದಿಯನ್ನು ನೀಡಿದ, ಚಿತ್ರಕ್ಕೆ ಶ್ರಮಿಸಿದ ನಿರ್ದೇಶಕ,ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ಪ್ರೀತಿಗೆ ನಾ ಸದಾ ಚಿರಋಣಿ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next