Advertisement

ಕಾಮಗಾರಿ ಗುಣಮಟ್ಟ ಕಾಪಾಡಿ: ಶಾಸಕ

11:52 AM Sep 08, 2019 | Suhan S |

ಹಳೇಬೀಡು: ಗುತ್ತಿಗೆದಾರರು ಪ್ರಾಮಾಣಿಕ ವಾಗಿ ಗುಣಮಟ್ಟದ ಕೆಲಸ ಮಾಡಿದರೆ ಜನರು ನೆನೆಯುತ್ತಾರೆ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಎಸ್‌.ಲಿಂಗೇಶ್‌ ಹೇಳಿದರು.

Advertisement

ಪಟ್ಟಣದ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮೊರಾರ್ಜಿ ಶಾಲೆಯು ಪಟ್ಟಣದ ಹೊರ ಹೊರವಲಯದಲ್ಲಿದ್ದು, ಶಾಲೆ ಪ್ರಾರಂಭವಾಗಿ ನಾಲ್ಕು ವರ್ಷಗಳೂ ಕಳೆದರೂ ಶಾಲೆಗೆ ಸರಿಯಾದ ರಸ್ತೆ ಇರಲಿಲ್ಲ. ಈ ಬಾರಿ ಮಕ್ಕಳ ಹಿತ ದೃಷ್ಟಿಯಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ದ್ವಾರ ಸಮುದ್ರ ಕೆರೆ ಕೋಡಿ ರಸ್ತೆಯಿಂದ ಕಿತ್ತೂರು ರಾಣಿಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಜನಪ್ರತಿನಿಧಿಗಳು, ಗುತ್ತಿಗೆದಾರರು, ಅಧಿಕಾರಿಗಳು ಯಾವುದೇ ಕೆಲಸ ಕಾರ್ಯ ಗಳನ್ನು ಮಾಡಿದರೂ ಪ್ರಾಮಾಣಿಕವಾಗಿ ನಿಷ್ಠೆ ಯಿಂದ ಮಾಡಿದರೆ ಜನರು ಕೊನೆಯವರೆಗೂ ನೆನೆಯುತ್ತಾರೆ. ಕಳಪೆ ಮಟ್ಟದ ರಸ್ತೆ ಕಟ್ಟಡಗಳ ಕಾಮಗಾರಿಗಳು ಯಾವ‌ತ್ತೂ ಶಾಶ್ವತವಲ್ಲ. ಗುಣಮಟ್ಟದ ಕೆಲಸ ಕಾರ್ಯಗಳನ್ನು ಮಾಡಿ ಜನರ ಮನಸ್ಸನ್ನು ಗೆಲ್ಲಬೇಕು. ನಾವು ಎಂದೂ ಶಾಶ್ವತವಲ್ಲ ಆದರೆ ನಾವು ಮಾಡುವ ಉತ್ತಮ ಕೆಲಸ ಕಾರ್ಯಗಳು ಮಾತ್ರ ಯಾವಾಗಲೂ ಜನಮನದಲ್ಲಿ ಶಾಶ್ವತವಾಗಿ ರುತ್ತವೆ. ಆ ನಿಟ್ಟಿನಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಮಂಜುನಾಥ್‌ ಮಾತನಾಡಿ, ಶೀಘ್ರ ಮೊರಾರ್ಜಿ ವಸತಿ ಶಾಲೆಗೆ 60 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುವುದು. ಸರ್ಕರದಿಂದ ಹೆಚ್ಚಿನ ಅನುದಾನ ಬಂದರೆ ಪಟ್ಟಣದ ಹೊರ ಹೊಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸುತ್ತ ಕಾಂಪೌಂಡ್‌ ನಿರ್ಮಾಣ ಮಾಡಲು ಸಿದ್ಧವಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪ್ರೇಮಣ್ಣ, ಮಲ್ಲಿಕಾರ್ಜುನ್‌, ಧನಂಜಯ್‌, ಅರುಣ ನಟರಾಜ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next