Advertisement

ವಕೀಲ ವೃತಿ ಘನತೆ ಕಾಪಾಡಿಕೊಳ್ಳಿ

04:00 PM Dec 05, 2022 | Team Udayavani |

ಕೋಲಾರ: ನಿರಂತರ ಅಧ್ಯಯನದ ಮೂಲಕ ಉತ್ತಮ ವಕೀಲರಾಗಲು ಅವಕಾಶವಿದ್ದು, ವಕೀಲ ವೃತ್ತಿಯ ಘನತೆ ಗೌರವವನ್ನು ಕಾಪಾಡಿ ಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್‌ ಹೇಳಿದರು.

Advertisement

ನಗರದ ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೋಟರಿ ಸಂಸ್ಥೆ, ಲಯನ್ಸ್‌ ರಕ್ತ ನಿಧಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಬಹಳ ಎಲ್ಲಾ ವಕೀಲರನ್ನು ಒಟ್ಟುಗೂಡಿಸಿ ವಕೀಲರ ದಿನಾ ಚರಣೆಯನ್ನು ಆಚರಣೆ ಮಾಡಿದ್ದೇವೆ. ಈ ದಿನದಂದು ಕಾರ್ಯಕ್ರಮದ ಜೊತೆಗೆ ಸಮಾಜಕ್ಕೂ ಕೊಡುಗೆ ನೀಡುವ ಉದ್ದೇಶದಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ನೂರಾರು ವಕೀಲರು ರಕ್ತದಾನಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಇತ್ತೀಚಿನ ದಿನಗಳಲ್ಲಿ ಅಪಘಾತಗಳಲ್ಲಿ ಗಾಯಗೊಂಡವರಿಗೆ, ವಿವಿಧ ಕಾಯಿಲೆ, ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ರಕ್ತದ ಅಗತ್ಯವಿದೆ. ಆದರೆ, ಅದನ್ನು ತಯಾರಿಸಲು ಸಾಧ್ಯವಿಲ್ಲ. ಮಾನವೀಯ ನೆಲಗಟ್ಟಿನಲ್ಲೇ ಮನುಷ್ಯರಾದ ನಾವೇ ರಕ್ತ ನೀಡುವ ಮೂಲಕ ಮತ್ತೂಂದು ಜೀವದ ರಕ್ಷಣೆಗೆ ಕೈಜೋಡಿಸಬೇಕು ಎಂದರು.

ವಕೀಲರ ಸಮಸ್ಯೆಗಳಿಗೆ ಉತ್ತರಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ನಾಗರಾಜ್‌ ಅವರು, ಬಹಳ ದಿನಗಳಿಂದ ಎಲೆ ಕ್ಟ್ರಾನಿಕ್‌ ಎವಿಡೆನ್ಸ್‌ ಕುರಿತು ಬಹಳಷ್ಟು ಅರಿವಿನ ಕೊರತೆಯಿದ್ದು, ವಕೀಲರ ಮನವಿಯ ಮೇರೆಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಇತರೆ ವಿವಿಧ ಸೆಕ್ಷನ್‌ಗಳ ಮಾಹಿತಿ ಒದಗಿಸಿದರು.

ಪ್ರಕರಣಗಳ ವಿಲೇವಾರಿಗೆ ಸಹಕರಿಸಿ: ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ವಿಲೇವಾರಿಯಲ್ಲಿ ವಕೀಲರು ಸಹಕಾರ ನೀಡಬೇಕು. ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಪ್ರತಿಯೊಬ್ಬರಲ್ಲೂ ಬದ್ಧತೆ ಮುಖ್ಯ. ವಿಚಾರಣೆ ಶೀಘ್ರ ಮುಗಿಸಿದರೆ ಬೇಗ ನ್ಯಾಯದಾನ ಒದಗಿಸಲು ಸಾಧ್ಯ ಎಂದರು. ಉತ್ತಮ ಸಮಾಜ ಸೇವೆ ಮಾಡಿ: ಒಟ್ಟಾರೆ ಎಲ್ಲಾ ವಕೀಲರು ಸಮಾಜದ ಚಿಂತನೆ ಮಾಡಿ, ಜನಸಾಮಾನ್ಯರಿಗೆ ನಿಜವಾದ ನ್ಯಾಯ ಒದಗಿಸುವ ಮೂಲಕ ವಕೀಲರು ಸಮುದಾಯದಲ್ಲಿ ಒಂದು ಉತ್ತಮ ಸಮಾಜ ಸೇವೆ ಮಾಡಬೇಕು. ಕೇವಲ ಹಣ ಸಂಪಾದನೆ ಮಾತ್ರವಲ್ಲ, ಸಮಾಜಕ್ಕೂ ನೆರವಾಗಬಹುದು ಎಂಬುದನ್ನು ಮೊದಲು ಅರಿಯಬೇಕು. ಈ ನಿಟ್ಟಿನಲ್ಲಿ ವಕೀಲರು ಅತ್ಯಂತ ಉತ್ತಮ ಕೆಲಸ ಮಾಡಿದ್ದಾರೆ. ಇಂದು ಕೊರತೆ ಇರುವ ರಕ್ತವನ್ನು ಶಿಬಿರದ ಮೂಲಕ ಒದಗಿಸುವ ಮೂಲಕ ಸಮಾಜಕ್ಕೆನೆರವಾಗುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

Advertisement

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಹಿರಿಯ ವಕೀಲರಾದ ಎಂ.ವಿ.ಸುಬ್ಟಾರೆಡ್ಡಿ, ಬಿಸಪ್ಪಗೌಡ, ಕೋದಂಡಪ್ಪ ಹಾಜರಿದ್ದರು.

ಅಪಘಾತಗಳಲ್ಲಿ ಗಾಯವಾದ, ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ರಕ್ತದ ಅಗತ್ಯವಿದೆ. ಆದರೆ, ಅದನ್ನು ತಯಾರಿಸಲು ಸಾಧ್ಯವಿಲ್ಲ. ಮಾನವೀಯ ನೆಲಗಟ್ಟಿನಲ್ಲೇ ಮನುಷ್ಯರಾದ ನಾವೇ ರಕ್ತ ನೀಡುವ ಮೂಲಕ ಮತ್ತೂಂದು ಜೀವದ ರಕ್ಷಣೆಗೆ ಕೈಜೋಡಿಸಬೇಕು. -ಜಿ.ಶ್ರೀಧರ್‌, ಅಧ್ಯಕ್ಷ ಜಿಲ್ಲಾ ವಕೀಲರ ಸಂಘ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next