Advertisement

ಪರಿಸರ ಸಮತೋಲನ ಕಾಪಾಡಿ

06:22 PM Jun 06, 2021 | Team Udayavani

ಕನಕಪುರ: ಪರಿಸರ ಸಮತೋಲನಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮಮೇಲಿದೆ. ಹೀಗಾಗಿ ಪ್ರತಿಯೊಬ್ಬರು ಗಿಡನೆಡುವ ಮೂಲಕ ಪರಿಸರ ಉಳಿಸಿಬೆಳಸಬೇಕು ಎಂದು ಹಾರೋಹಳ್ಳಿಪಿಎಸ್‌ಐ ಮುರಳಿ ಹೇಳಿದರು.

Advertisement

ತಾಲೂಕಿನ ಹಾರೋಹಳ್ಳಿ ಕೈಗಾರೀಕಾಪ್ರದೇಶದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾವತಿಯಿಂದ ನಡೆದ ವಿಶ್ವ ಪರಿಸರದಿನಾಚರಣೆ ಪ್ರಯುಕ್ತ ಗಿಡ ನೆಡುವಕಾರ್ಯಕ್ರಮದಲ್ಲಿ ಮಾತನಾಡಿ,ಕರ್ನಾಟಕದಲ್ಲಿ ನೆರೆಯ ರಾಜ್ಯಗಳಿಗಿಂತಲೂ ಅರಣ್ಯ ಮತ್ತು ವನ್ಯ ಜೀವಿಸಂಪತ್ತು ಹೆಚ್ಚಾಗಿದೆ.

ಆದರೆ, ಪರಿಸರಸಮತೋಲನವಿಲ್ಲ. ವಿಶ್ವಸಂಸ್ಥೆಯ ಪ್ರಕಾರ ಭಾರತದಲ್ಲಿ ಶೇ.30ರಷ್ಟು ಅರಣ್ಯ ಸಂಪತ್ತು ಇರಬೇಕು. ಆದರೆ, ಶೇ.24ರಷ್ಟಿದೆ. ನಗರಪ್ರದೇಶದಲ್ಲಿ ಮರಗಿಡಗಳು ನಾಶವಾಗಿದೆ.ಆಮ್ಲಜನಕದ ಪ್ರಮಾಣ ಕುಸಿದಿದೆ. ಅದರಪರಿಣಾಮವನ್ನು ಈಗಾಗಲೇ ನಾವುಎದುರಿಸುತ್ತಿದ್ದೇವೆ. ಆಮ್ಲಜನಕ ಉತ್ಪಾದಿಸುವ ಮರಗಿಡಗಳನ್ನು ಬೆಳಸಬೇಕು.ಅದು ಅನಿವಾರ್ಯ ಎಂದರು.

ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶ:ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಕಾರ್ಯಕಾರಿಣಿ ಸದಸ್ಯ ರಾಮಸಾಗರ ಕೃಷ್ಣಮಾತನಾಡಿ, ಮನುಷ್ಯನ ಸ್ವಾರ್ಥಕ್ಕೆಪರಿಸರ ನಾಶವಾಗುತ್ತಿದೆ. ಮುಂದಿನದಿನಗಳಲ್ಲಿ ಉಸಿರಾಡುವ ಗಾಳಿಯನ್ನುಖರೀದಿಸುವ ಸಂದರ್ಭ ಬಂದರೂ ಅಚ್ಚರಿಪಡಬೇಕಾಗಿಲ್ಲ. ಸಮಾಜ ಇಂದು ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರು ಗಿಡನೆಡುವ ಮೂಲಕ ಪರಿಸರ ಕಾಪಾಡಲುಬದ್ಧರಾಗಬೇಕು ಎಂದರು.ಹಾರೋಹಳ್ಳಿ ಹೋಬಳಿ ಅಧ್ಯಕ್ಷಪ್ರಕಾಶ್‌, ಕಿರಣ್‌, ಸ್ವಾಮಿ ಸಂತು, ಮುನಿರಾಜು, ಶ್ರೀಕಾಂತ್‌, ಗುರುಪ್ರಸಾದ್‌,ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ರವಿ,ಕಾರ್ತಿಕ್‌ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next