ಹೂವಿನಹಡಗಲಿ: ಈ ಬಾರಿ ಐತಿಹಾಸಿಕ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು ‘ಅಂಬಲಿ ಹಳಸಿತು ಕಂಬಳಿ ಬೀಸಿತು’ ಎನ್ನುವ ದೈವವಾಣಿ ಜರುಗಿತು.
ಕಾರ್ಣಿಕ ಹೇಳುವ ಗೊರವಯ್ಯ ರಾಮಣ್ಣ 17 ಅಡಿ ಎತ್ತರದ ಕಬ್ಬಿಣದ ಬಿಲ್ಲನ್ನು ಏರಿ ಕಾರ್ಣಿಕ ನುಡಿ ನುಡಿದನು.
ಕಾರ್ಣಿಕ ಲೆಕ್ಕಚಾರ: ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕದ ನುಡಿ ಭಕ್ತರು ವಿವಿಧ ರೀತಿಯಲ್ಲಿ ಲೆಕ್ಕಚಾರ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಭವಿಷ್ಯದಲ್ಲಿ ಶುಭದಾಯಕವಾದ ಕಾಲವಾಗಿದೆ ಎನ್ನಲಾಗಿದೆ.
ರಾಜಕೀಯವಾಗಿ ಲೆಕ್ಕಚಾರ ಹಾಕಲಾಗಿ ಪ್ರಸ್ತುತ ಆಡಳಿತ ಜನಪರ ಆಡಳಿತದಿಂದ ದೂರವಿದ್ದು, ಭವಿಷ್ಯದಲ್ಲಿ ಸಮಾಜಮುಖಿಯಾಗಿರುವ ಆಡಳಿತವನ್ನು ಈ ನಾಡು ಕಾಣುತ್ತದೆ ಎನ್ನುವುದಾಗಿದೆ.
Related Articles
ರೈತಾಪಿ ವರ್ಗದವರನ್ನು ಕೃಷಿ ಹಿನ್ನೆಲೆಯಲ್ಲಿ ಲೆಕ್ಕಚಾರ ಹಾಕಿ ಈ ಭಾರಿ ಮಳೆ ಸಾಕಷ್ಟು ಆಗುವ ಜೊತೆಯಲ್ಲಿ ಹೆಚ್ಚು ಹೆಚ್ವಾಗಿ ರೈತರು ಬೆಳೆಯನ್ನು ಬೆಳೆಯುತ್ತರೆ ಎನ್ನುವುದಾಗಿದೆ.
ಕಾರ್ಣಿಕಕ್ಕೆ ಸಾಕ್ಷಿ: ಸಾಯಾಂಕಾಲ ಕಾರ್ಣಿಕ ನುಡಿಯುವ ಡೆಂಕನ ಮರಡಿಗೆ ವಂಶಪಾರಂಪರ್ಯ ಧರ್ಮಾಧಿಕಾರಿ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಮೆರವಣಿಗೆ ಮೂಲಕವಾಗಿ ಉತ್ಸವ ಮೂರ್ತಿಯನ್ನು ಕರೆತರಲಾಗಿತ್ತು.
ಗೊರವಯ್ಯ ರಾಮಣ್ಣ ನುಡಿದ ಕಾರ್ಣಿಕಕ್ಕೆ ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಸಂಸದ ವೈ ದೇವೇಂದ್ರಪ್ಪ, ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್, ಮಾಜಿ ಸಚಿವ ಬಸವರಾಜ್ ಶಿವಣ್ಣನವರ್, ಮಾಜಿ ಶಾಸಕ ಬಿ.ಚಂದ್ರನಾಯ್ಕ್, ಜಿಲ್ಲಾಧಿಕಾರಿ ಡಿ.ವೆಂಕಟೇಶ್, ಎಸ್ ಪಿ. ಶ್ರೀ ಹರಿಬಾಬು, ಡಿಐಜಿ ಲೋಕೇಶ್ ಕುಮಾರ ತಹಶೀಲ್ದಾರ್ ಕೆ. ಶರಣಮ್ಮ ಸಾಕ್ಷಿಯಾದರು.