Advertisement
ಮತ್ತೊಂದೆಡೆ ನಟ ದರ್ಶನ್ ಮನೆಗೆ ಕರೆದೊಯ್ದು 3 ಬೈಕ್ ವಶಪಡಿಸಿಕೊಳ್ಳಲಾಗಿದೆ.ಧನರಾಜ್ ಹಾಗೂ ನಂದೀಶ್ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿ ಆತನ ಸಾವಿಗೆ ಕಾರಣವಾಗಿದ್ದರು.
Related Articles
ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾಗೌಡ ಠಾಣೆಯಲ್ಲೇ ಅಸ್ವಸ್ಥಗೊಂಡಿದ್ದಳು. ತಲೆಸುತ್ತುತ್ತಿರುವುದಾಗಿ ಆಕೆ ಹೇಳಿದ್ದಳು. ಹೀಗಾಗಿ ವೈದ್ಯರನ್ನು ಕರೆಸಿ ಠಾಣೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೆರದೊಯ್ದು ಗ್ಲೂಕೋಸ್ ನೀಡಿ, ಬಳಿಕ ಠಾಣೆಗೆ ಕರೆತರಲಾಗಿದೆ. ಅಲ್ಲದೆ, ಪ್ರತಿನಿತ್ಯ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಇತರ ಆರೋಪಿಗಳಿಗೂ ವೈದ್ಯಕೀಯ ತಪಾಸಣೆ ನಡೆಸಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಜೂ. 20ರಂದು ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಎಲ್ಲ ಆರೋಪಿಗಳನ್ನು ಬಹುತೇಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆಯಿದೆ.
Advertisement
ಸ್ಥಳ ಮಹಜರುಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಕಾರು ಚಾಲಕ ಲಕ್ಷ್ಮಣ್ (ಎ 12) ಮತ್ತು ಆಪ್ತ ಸಹಾಯಕ ನಾಗರಾಜ್ ಅಲಿಯಾಸ್ ನಾಗ (ಎ 11) ಅವರನ್ನು ಮಂಗಳವಾರ ಮೈಸೂರಿನ ಖಾಸಗಿ ಹೊಟೇಲ್‌ಗೆ ಕರೆ ತಂದ ಬೆಂಗಳೂರು ಪೊಲೀಸರು ಸ್ಥಳ ಮಹಜರು ನಡೆಸಿದರು. ಹೊಟೇಲ್‌ನ ಲ್ಲಿ ನಟ ದರ್ಶನ್ ತಂಗಿದ್ದ ಹಿನ್ನೆಲೆ ಮಧ್ಯಾಹ್ನ 12 ಗಂಟೆಗೆ ಹೊಟೇಲ್‌ಗೆ ಭೇಟಿ ನೀಡಿದ ಪೊಲೀಸರು, ಸತತ ಎರಡು ಗಂಟೆಗಳ ಕಾಲ ಇಬ್ಬರು ಆರೋಪಿಗಳೊಂದಿಗೆ ತೆರಳಿ ಸ್ಥಳ ಮಹಜರು ನಡೆಸಿ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಿದರು. ಹೊಟೇಲ್‌ನ ಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕೆಮರಾ ಪರಿಶೀಲಿಸಿದರು. 2 ತಿಂಗಳ ಹಿಂದೆ ದರ್ಶನ್‌ನ ಫಾರಂ
ಹೌಸ್ ಮ್ಯಾನೇಜರ್ ಆತ್ಮಹತ್ಯೆ
ಆನೇಕಲ್: ನಟ ದರ್ಶನ್ ಮತ್ತು ಅವನ ತಂಡದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆನೇಕಲ್‌ನ ಬಗ್ಗನದೊಡ್ಡಿ ಬಳಿಯ ದರ್ಶನ್‌ಗೆ ಸೇರಿದ್ದೆನ್ನಲಾಗುತ್ತಿರುವ ಫಾರಂ ಹೌಸ್‌ನಲ್ಲಿ ಮ್ಯಾನೇಜರ್ 2 ತಿಂಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತ ಶ್ರೀಧರ್ ಡೆತ್‌ನೋಟ್‌ನಲ್ಲಿ ಬರೆದಿಟ್ಟು, ಜುಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಬರೆದು ವಿಷ ಸೇವಿಸಿ ಮೃತಪಟ್ಟಿದ್ದ ಪ್ರಕರಣ ಈಗ ದರ್ಶನ್ ಹೆಸರಿಗೆ ಸುತ್ತಿಕೊಂಡಿದೆ. ಅಸಹಜ ಸಾವು ಎಂದು ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಸಿಕೊಂಡಿದೆ.