Advertisement

ಮಾರುಕಟ್ಟೆಗೆ ಬರಲಿವೆ ಮಹೀಂದ್ರಾ ಎಲೆಕ್ಟ್ರಿಕ್‌ SUV: 39 ನಿಮಿಷದಲ್ಲಿ 80% ಬ್ಯಾಟರಿ ಚಾರ್ಜ್‌

08:14 PM Aug 18, 2023 | Team Udayavani |

ಮಹೀಂದ್ರಾ ಕಂಪನಿಯು ನಾಲ್ಕು ಎಲೆಕ್ಟ್ರಿಕ್‌ ಎಸ್‌ಯುವಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಮಹೀಂದ್ರಾ ಎಕ್ಸ್‌ಯುವಿ.ಇ8, ಎಕ್ಸ್‌ಯುವಿ.ಇ9, ಬಿಇ.05 ಹಾಗೂ ಬಿಇ.07 ಕಾರುಗಳು ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಇದರ ಬ್ಯಾಟರಿ 39 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್‌ ಆಗಲಿದೆ. ಜತೆಗೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ. ಮಹೀಂದ್ರಾ ಎಕ್ಸ್‌ಯುವಿ ಇ8 ಕಾರು ಗ್ರಾಹಕರಿಗೆ 2024ರ ಡಿಸೆಂಬರ್‌ನಲ್ಲಿ ಲಭ್ಯವಾಗಿದೆ. ಅದೇ ರೀತಿ ಎಕ್ಸ್‌ಯುವಿ ಇ9 ಕಾರು 2025ರ ಏಪ್ರಿಲ್‌, ಬಿಇ 05 ಕಾರು 2025ರ ಅಕ್ಟೋಬರ್‌ ಹಾಗೂ ಬಿಇ 07 ಕಾರು 2026ರ ಏಪ್ರಿಲ್‌ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next