ಮುಂಬಯಿ : ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಮಹೀಂದ್ರಾ ಕಂಪನಿಯು ತನ್ನ ಗ್ರಾಹಕರಗೆ ಇದೀಗ ಎಕ್ಸ್‌ಯುವಿ 400 ಇವಿ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.
ಮಹಿಂದ್ರಾ ಕಂಪೆನಿ XUV400 ಹೊಸ ಕಾರನ್ನು 2023ರ ಜನವರಿಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದು ಅಂದೇ ಮಾರಾಟ ಪ್ರಕ್ರಿಯೆ ನಡೆಸಲಿದೆ ಎಂದು ಹೇಳಿದೆ.
ಬೆಲೆ, ಮೈಲೇಜ್ ಮತ್ತು ತಾಂತ್ರಿಕ ಸೌಲಭ್ಯಗಳ ವಿಚಾರದಲ್ಲಿ ಹೇಳುವುದಾದರೆ ಹೊಸ ಮಾದರಿಯ ಎಲ್ಲಾ ವಾಹನಗಳಿಗೆ ಸ್ಪರ್ಧೆ ನೀಡಲಿದ್ದು ಗ್ರಾಹಕರಿಗೆ ನೆರವಾಗುವ ಹಲವಾರು ಸೌಲಭ್ಯಗಳನ್ನು ಹೊಂದಿದೆ.
ಹೊಸ ಕಾರು 39.4 kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 100kW ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 456 ಕಿ.ಮೀ ಮೈಲೇಜ್ ನೀಡಲಿದೆ. ಸನ್‌ರೂಫ್, ಡ್ಯುಯಲ್ ಝೋನ್ ಎಸಿ ಅನ್ನು ಒಳಗೊಂಡಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ ಸೇರಿದಂತೆ ಹಲವು ಸೌಲಭ್ಯಗಳನ್ನು ಇದು ಒಳಗೊಂಡಿದೆ.
ಕಾರಿನ ನಿಖರ ಬೆಲೆ ಕಂಪೆನಿ ಇನ್ನೂ ಪ್ರಕಟಿಸಿಲ್ಲ ಅಂದಾಜಿನ ಪ್ರಕಾರ 16 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ ಎನ್ನಲಾಗಿದೆ.