Advertisement
ಫಾ| ಮಹೇಶ್ ಆತ್ಮಹತ್ಯೆಗೆ ಶರಣಾಗಿ 20 ದಿನಗಳು ಕಳೆದರೂ ಅವರ ಸಾವಿನ ಹಿಂದಿನ ರಹಸ್ಯ ಬಹಿರಂಗಗೊಂಡಿಲ್ಲ. ಜತೆಗೆ ಅವರ ಸಾವಿನ ಹಿಂದೆ ಯಾರದೋ ಕೈವಾಡ ಇರುವ ಬಗ್ಗೆ ಸಂಶಯ ಮೂಡಿದ್ದು ಚರ್ಚ್‌ನ ವತಿಯಿಂದ ಯಾವುದೇ ಪ್ರಕರಣ ದಾಖಲಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ತುರ್ತು ಸಂದರ್ಭಗಳಲ್ಲಿ ಮಾತ್ರ ಚರ್ಚ್‌ನ ಗಂಟೆ ಬಾರಿಸುವುದಾಗಿದ್ದು ನೆರೆದಿದ್ದ ಸುಮಾರು 1 ಸಾವಿರಕ್ಕೂ ಮಿಕ್ಕಿದ ಜನರು ಆಕ್ರೋಶಿತರಾಗಿ ಚರ್ಚ್‌ನ ಗಂಟೆ ಬಾರಿಸಿ ಫಾ| ಮಹೇಶ್ ಡಿ‡ಸೋಜಾ ಸಾವಿನ ಬಗ್ಗೆ ತನಿಖೆ ನಡೆಸಿ ನ್ಯಾಯ ಕೋರಿ ಪ್ರತಿಭಟನೆ ನಡೆಸಿದರು. ಚರ್ಚ್‌ಗೆ ಪೂಜೆ ಸಲ್ಲಿಸಲು ಬಂದಿದ್ದ ಭಕ್ತಾಧಿಗಳು ಚರ್ಚ್‌ನ ಧರ್ಮಗುರು ರೆ|ಫಾ|ಡೆನ್ನಿಸ್ ಡೇಸಾ ಅವರಲ್ಲಿ ಮಾತನಾಡಲು ಯತ್ನಿಸಿದ್ದು ಆ ವೇಳೆ ಧರ್ಮಗುರುಗಳು ಒಳಗಡೆ ಹೋಗಿದ್ದರಿಂದ ಪ್ರತಿಭಟನಾಕಾರರು ಮತ್ತಷ್ಟು ಆಕ್ರೋಶಗೊಂಡು ಧರ್ಮಗುರುಗಳು ಹೊರಬರುವಂತೆ ಒತ್ತಾಯಿಸಿದರು. ಪೊಲೀಸ್ ಅಧಿಕಾರಿಗಳ ಭೇಟಿ
ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಭೇಟಿ ನೀಡಿದ್ದು ಪ್ರತಿಭಟನಾಕಾರರೊಡನೆ ಮಾತುಕತೆ ನಡೆಸಿದರು. ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಚರ್ಚ್‌ನ ಧರ್ಮಗುರುಗಳೊಂದಿಗೆ ಮಾತನಾಡಿದ ಬಳಿಕ ಧರ್ಮಗುರುಗಳು ಬಂದು ಸಮುದಾಯದ ಜನರೊಂದಿಗೆ ಮಾತನಾಡಿ ರವಿವಾರ ಬೆಳಿಗ್ಗೆ 10 ಗಂಟೆಗೆ ಬಿಷಪ್ ಅವರು ಆಗಮಿಸಿ ಪಾಲನ ಮಂಡಳಿಯ ಸಭೆ ಕರೆದು ಮಾತುಕತೆ ನಡೆಸುವರು ಎಂದು ತಿಳಿಸಿದರು.
Related Articles
Advertisement