Advertisement

ಧೋನಿಗೆ ಕ್ಯಾಪ್ಟನ್‌ಶಿಪ್‌ ಬಿಡುವಂತೆ ಬಿಸಿಸಿಐ ಕೇಳಿಕೊಂಡಿತ್ತೇ ?

10:47 AM Jan 09, 2017 | udayavani editorial |

ಹೊಸದಿಲ್ಲಿ : ನಿಗದಿತ ಓವರ್‌ಗಳ ಭಾರತೀಯ ಕ್ರಿಕೆಟ್‌ ತಂಡದ ನಾಯಕತ್ವವನ್ನು ಮಹೇಂದ್ರ ಸಿಂಗ್‌ ಧೋನಿ ಅವರು ತಾವಾಗಿಯೇ ಬಿಟ್ಟುಕೊಟ್ಟದ್ದೇ ಅಥವಾ ಬಿಸಿಸಿಐ ಅವರಿಗೆ ಹಾಗೆ ಮಾಡಲು ಕೇಳಿಕೊಂಡಿತ್ತೇ  ?

Advertisement

ಹಿಂದುಸ್ಥಾನ್‌ ಟೈಮ್ಸ್‌ ವರದಿಯ ಪ್ರಕಾರ ಮಹೇಂದ್ರ ಸಿಂಗ್‌ ಧೋನಿ ಅವರು ನಿಗದಿತ ಓವರ್‌ಗಳ ಕ್ರಿಕೆಟ್‌ ತಂಡದ ನಾಯಕತ್ವವನ್ನು ತಾವಾಗಿಯೇ ಬಿಟ್ಟುಕೊಟ್ಟದ್ದಲ್ಲ; ಬದಲು ಅವರಿಗೆ ನಾಯಕತ್ವವನ್ನು ತ್ಯಜಿಸುವಂತೆ ಬಿಸಿಸಿಐ ಸೂಚಿಸಿತ್ತು ಎಂದು ತಿಳಿದು ಬಂದಿದೆ. 

ಜಾರ್ಖಂಡ್‌ ಮತ್ತು ಗುಜರಾತ್‌ ನಡುವೆ ಕಳೆದ ವಾರ ನಡೆದಿದ್ದ ರಣಜಿ ಟ್ರೋಫಿ ಸೆಮಿ ಫೈನಲ್‌ ಪಂದ್ಯದ ವೇಳೆ ಭಾರತೀಯ ಕ್ರಿಕೆಟ್‌ ಆಯ್ಕೆ ಸಮಿತಿಯ ಅಧ್ಯಕ್ಷ ಎಂ ಎಸ್‌ ಕೆ ಪ್ರಸಾದ್‌ ಅವರು ಧೋನಿಯನ್ನು ಖುದ್ದಾಗಿ ಮಾತನಾಡಿ ಗುಪ್ತ ಮಾತುಕತೆ ನಡೆಸಿರುವುದನ್ನು ಈಗ ಈ ಹಿನ್ನೆಲೆಯಲ್ಲಿ ಶಂಕಿಸಲಾಗುತ್ತಿದೆ. 

ಪ್ರಸಾದ್‌ ಮತ್ತು ಧೋನಿ ಅವರ ನಡುವಿನ ವೈಯಕ್ತಿಕ ಮಾತುಕತೆಯ ಫ‌ಲಶ್ರುತಿಯೇ ಧೋನಿ ಅವರ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ನಾಯಕತ್ವ ತ್ಯಾಗಕ್ಕೆ ಬರೆದ ಮುನ್ನುಡಿಯಾಗಿತ್ತು ಎಂದು ಈಗ ಹೆಚ್ಚಿನವರು ಭಾವಿಸುತ್ತಾರೆ. 

ಕಳೆದ ವರ್ಷ ಬಿಸಿಸಿಐ ಹೊಸ ಆಯ್ಕೆ ಸಮಿತಿ ರಚಿಸಲ್ಪಟ್ಟ ಬಳಿಕ, ಸೆಪ್ಟಂಬರ್‌ ಅನಂತರದಲ್ಲಿ, ಧೋನಿ ನಾಯಕತ್ವ ತ್ಯಾಗದ ಪ್ರಕ್ರಿಯೆ ಒಳಂಗಿದೊಳಗೇ ಆರಂಭವಾಗಿತ್ತು ಎಂದೀಗ ತಿಳಿಯಲಾಗಿದೆ. 

Advertisement

2019ರಲ್ಲಿ ವಿಶ್ವ ಕಪ್‌ ಕ್ರಿಕೆಟ್‌ ಕೂಡ ಡೆಯಲಿರುವುದರಿಂದ ಅದಕ್ಕೆ ಮುನ್ನವೇ ಕ್ರಿಕೆಟ್‌ನ ಎಲ್ಲ ಮೂರು ಆವೃತ್ತಿಗಳ ನಾಯಕತ್ವವನ್ನು ವಿರಾಟ್‌ ಕೊಹ್ಲಿಗೆ ಒಪ್ಪಿಸುವ ಅಗತ್ಯ ಇರುವುದನ್ನು ಕಳೆದ ಸೆಪ್ಟಂಬರ್‌ನಿಂದ ಧೋನಿಗೆ ಮನವರಿಕೆ ಮಾಡಲಾಗುತ್ತಾ ಬರಲಾಗಿದೆ ಎಂದು ತಿಳಿದು ಬಂದಿದೆ. ಪ್ರಸಾದ್‌ ಅವರು ಇದೇ ವಿಷಯವನ್ನು ಕಳೆದ ವಾರ ಧೋನಿ ಅವರೊಂದಿಗೆ ಮತ್ತೆ ಚರ್ಚಿಸಿರಬೇಕು ಎಂದು ಈಗ ತಿಳಿಯಲಾಗಿದೆ. 

ಇದೇ ಜನವರಿ 15ರಿಂದ ಭಾರತ-ಇಂಗ್ಲಂಡ್‌ ಏಕದಿನ ಹಾಗೂ ಟಿ-20 ಕ್ರಿಕೆಟ್‌ ಸರಣಿ ಆರಂಭವಾಗಲಿದ್ದು ಅದಕ್ಕೆ ಮುನ್ನವೇ ಧೋನಿ ತನ್ನ ನಾಯಕತ್ವಕ್ಕೆ ತಿಲಾಂಜಲಿ ನೀಡಿರುವುದು ಸ್ವಯಂ ಇಚ್ಛೆಯಿಂದ ಅಲ್ಲ; ಬದಲು ಬಿಸಿಸಿಐ ತನ್ನ ಮೇಲೆ ಹೇರಿದ ಒತ್ತಡದಿಂದ ಎಂಬುದನ್ನೀಗ ವ್ಯಾಪಕವಾಗಿ ಶಂಕಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next