Advertisement

ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನ ಹಿರಿಯ ನಾಯಕ

11:14 PM May 03, 2022 | Team Udayavani |

ಮುಂಬಯಿ: ಮಹೇಂದ್ರ ಸಿಂಗ್‌ ಧೋನಿ ಮರಳಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

Advertisement

ಇದರೊಂದಿಗೆ ಹೊಸ ದಾಖಲೆಯೊಂದನ್ನು ಸ್ಥಾಪಿಸಿದ್ದಾರೆ. ಅವರೀಗ ಐಪಿಎಲ್‌ ಇತಿಹಾಸದ ಅತೀ ಹಿರಿಯ ನಾಯಕ. ಈ ಸಂದರ್ಭದಲ್ಲಿ ಅವರು ರಾಹುಲ್‌ ದ್ರಾವಿಡ್‌ ಅವರ 9 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು.

ರಾಹುಲ್‌ ದ್ರಾವಿಡ್‌ ರಾಜಸ್ಥಾನ್‌ ರಾಯಲ್ಸ್‌ ಪರ ಕೊನೆಯ ಸಲ ಆಡಿದ್ದು 2013ರಲ್ಲಿ. ಆಗ ಅವರು ತಂಡದ ನಾಯಕರಾಗಿದ್ದರು. ಕೊನೆಯ ಪಂದ್ಯ ಆಡುವಾಗ ದ್ರಾವಿಡ್‌ ವಯಸ್ಸು 40 ವರ್ಷ, 268 ದಿನ. ಇದೀಗ ಧೋನಿ 40 ವರ್ಷ, 298ನೇ ದಿನದಲ್ಲಿ ಚೆನ್ನೈ ಕ್ಯಾಪ್ಟನ್ಸಿಯ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next