ಮಣಿಪಾಲ: ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯಕ್ಕೆ ಲಿಂಗ ಸಮಾನತೆ, ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಹಾಗೂ ಅವಕಾಶ ವಿಷಯವಾಗಿ ದಿ ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ರ್‍ಯಾಂಕಿಂಗ್‌ನಲ್ಲಿ ವಿಶ್ವಮಟ್ಟ ದಲ್ಲಿ 4ನೇ ಸ್ಥಾನ ಲಭಿಸಿದೆ. ಹಾಗೆಯೇ ವಿಶ್ವ ಗುಣಮಟ್ಟದ ಶಿಕ್ಷಣ ವಿಭಾಗದಲ್ಲಿ ವಿಭಾಗದಲ್ಲಿ ಮಾಹೆಗೆ 25ನೇ ಸ್ಥಾನ ಸಿಕ್ಕಿದೆ.
ಇಂಪ್ಯಾಕ್ಟ್ ರ್‍ಯಾಂಕಿಂಗ್ 5ನೇ ಆವೃತ್ತಿಗೆ 112 ದೇಶ ಹಾಗೂ ಪ್ರದೇಶದ 1,591 ವಿ.ವಿ.ಗಳು ಭಾಗವಹಿಸಿದ್ದವು. ಹಾಗೆಯೇ ಗುಣಮಟ್ಟದ ಶಿಕ್ಷಣ ವಿಭಾಗದಲ್ಲಿ 1,304 ವಿ.ವಿ.ಗಳು 109 ದೇಶ, ಪ್ರದೇಶದಿಂದ ಭಾಗವಹಿಸಿವೆ. ಮಾಹೆಯು ತನ್ನ ಶೈಕ್ಷಣಿಕ ಗುಣಮಟ್ಟ ಹಾಗೂ ಲಿಂಗ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಹಲವು ಕಾರ್ಯಕ್ರಮದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ.
ಮಣಿಪಾಲ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ ಅಧ್ಯಕ್ಷರೂ ಹಾಗೂ ಮಾಹೆ ಟ್ರಸ್ಟ್ ಅಧ್ಯಕ್ಷ ರಾದ ಡಾ| ರಂಜನ್ ಆರ್. ಪೈ ಅವರು, ಸಂಘಟಿತ ಪ್ರಯತ್ನ ಫಲ ವಾಗಿ ಈ ಸಾಧನೆ ಸಾಧ್ಯವಾಗಿದೆ. ಗುಣಮಟ್ಟದ ವಿಷಯದಲ್ಲಿ ಮಾಹೆ ಸದಾ ಮುಂದಿರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹಾಗೂ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಅವರು, ಮಾಹೆ ಸದಾ ಗುಣಮಟ್ಟದ ಮೇಲೆ ಕೇಂದ್ರೀ ಕೃತವಾಗಿ ಕಾರ್ಯ ನಿರ್ವಹಿಸುತ್ತದೆ. ಶಿಕ್ಷಣ ಮತ್ತು ಲಿಂಗ ಸಮಾನತೆಯ ಬಗ್ಗೆ ನಮ್ಮ ಸಂಸ್ಥೆಯ ಸಂಸ್ಥಾಪಕರಾದ ಡಾ| ಟಿಎಂಎ ಪೈ ಅವರ ದೃಷ್ಟಿಗೆ ಅನುಗುಣವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದೇವೆ. ವಿಶ್ವಮಟ್ಟದಲ್ಲಿ ಮಾಹೆ ಈ ಸಾಧನೆ ಮಾಡಿರುವುದಕ್ಕೆ ಎಲ್ಲರ ಪ್ರಯತ್ನವೂ ಇದೆ. ಈ ಗುಣಮಟ್ಟವನ್ನು ನಿರಂತರ ಕಾಯ್ದು ಕೊಂಡು, ಇನ್ನಷ್ಟು ಮೇಲ್ದರ್ಜೆಗೆ ಏರಲು ಪ್ರಯತ್ನ ಸಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.