Advertisement

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

08:51 PM Jan 22, 2022 | Team Udayavani |

ನವದೆಹಲಿ: ಮಹಾತ್ಮ ಗಾಂಧಿಯವರಿಗೆ ಪ್ರಿಯವಾದ ಗೀತೆಯಾಗಿದ್ದ “ಅಬೈಡ್‌ ವಿತ್‌ ಮಿ’ ಗೀತೆಯನ್ನು ಜ.29ರ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮದಲ್ಲಿ ನುಡಿಸುವುದಿಲ್ಲ ಎಂದು ಭಾರತೀಯ ಸೇನೆಯು ಶನಿವಾರದಂದು ತಿಳಿಸಿದೆ.

Advertisement

ಪ್ರತಿ ವರ್ಷ ಜ.29ರಂದು ಭಾರತೀಯ ಸೇನೆಯ ಬ್ಯಾಂಡ್‌ಗಳು ಗಣರಾಜ್ಯೋತ್ಸವ ದಿನದ ಮುಕ್ತಾಯ ಸೂಚಕವಾಗಿ ರಾಜಪಥದಲ್ಲಿ ಗೀತೆಗಳನ್ನು ನುಡಿಸುತ್ತಾ ಸಾಗುತ್ತವೆ.

1847ರಲ್ಲಿ ಸ್ಕಾಟಿಷ್‌ ಕವಿ ಹೆನ್ರಿ ಫ್ರಾನ್ಸಿಸ್‌ ಲೈಟ್‌ ಬರೆದಿದ್ದ “ಅಬೈಡ್‌ ವಿತ್‌ ಮಿ’ ಗೀತೆಯನ್ನು 1950ರಿಂದಲೂ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮದ ಭಾಗವಾಗಿಸಿಕೊಳ್ಳಲಾಗಿತ್ತು.

ಈ ಗೀತೆ ಮಹಾತ್ಮ ಗಾಂಧಿಯವರಿಗೆ ಅತ್ಯಂತ ಪ್ರೀತಿಯ ಗೀತೆ ಕೂಡ ಆಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಗೀತೆಗಳ ಬದಲಾಗಿ ಭಾರತೀಯ ಹಾಡುಗಳಿಗೆ ಪ್ರಾಮುಖ್ಯತೆ ಕೊಟ್ಟು, ನುಡಿಸಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ ಆ ಹಾಡನ್ನು ಕೈ ಬಿಟ್ಟಿರುವುದಾಗಿ ಸೇನೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next