Advertisement

ನರೇಗಾಕ್ಕೆ ಇನ್ನೂ 15 ಸಾವಿರ ಕೋಟಿ? ಯೋಜನೆಗೆ ಹೆಚ್ಚುವರಿ ಮೊತ್ತ ನೀಡಲು ಕೇಂದ್ರ ಚಿಂತನೆ

06:17 PM Aug 09, 2022 | Team Udayavani |

ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್‌)ಗೆ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

Advertisement

ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆಯಿಂದ ಹೆಚ್ಚುವರಿಯಾಗಿ ಶೇ.20 ಮೊತ್ತ ನೀಡಬೇಕು ಎಂದು ಕೋರಿಕೆ ಸಲ್ಲಿಕೆಯಾಗಿದ್ದು, ಅದಕ್ಕೆ ಸಮ್ಮತಿ ನೀಡುವ ಸಾಧ್ಯತೆಗಳು ಅಧಿಕವಾಗಿವೆ.

ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಹಲವು ಸರ್ಕಾರಗಳಿಂದಲೂ ಕೂಡ ಹೆಚ್ಚುವರಿ ಮೊತ್ತ ನೀಡುವ ಬಗ್ಗೆ ಒತ್ತಡಗಳು ಹೆಚ್ಚುತ್ತಿವೆ.

ರಾಜ್ಯಗಳು 5,517.87 ಕೋಟಿ ರೂ. ಮೊತ್ತವನ್ನು ಪಾವತಿ ಮಾಡಲು ರಾಜ್ಯಗಳು ಬಾಕಿ ಉಳಿಸಿಕೊಂಡಿವೆ. ಕರ್ನಾಟಕ 462.78 ಕೋಟಿ ರೂ., ಪಶ್ಚಿಮ ಬಂಗಾಳ 2,636.71 ಕೋಟಿ ರೂ., ಬಿಹಾರ 1,160.77 ಕೋಟಿ ರೂ., ಉತ್ತರ ಪ್ರದೇಶ 661.42 ಕೋಟಿ ರೂ. ಪಾವತಿ ಮಾಡಲು ಇದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.

ಪ್ರಸಕ್ತ ವರ್ಷದ ಮುಂಗಡ ಪತ್ರದಲ್ಲಿ ಎಂಜಿಎನ್‌ಆರ್‌ಇಜಿಎಸ್‌ಗೆ 73 ಸಾವಿರ ಕೋಟಿ ರೂ. ಮೀಸಲಾಗಿ ಇರಿಸಲಾಗಿತ್ತು. ನಂತರ ಈ ಮೊತ್ತವನ್ನು 98 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈ ಪೈಕಿ 37,500 ಕೋಟಿ ರೂ. ಮೊತ್ತವನ್ನು ರಾಜ್ಯಗಳಿಗೆ ನೀಡಲಾಗಿದೆ.

Advertisement

ಇದನ್ನೂ ಓದಿ:ಎಲ್ಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತ್ರಿವರ್ಣ ಧ್ವಜಗಳಿಗೆ ಬೇಡಿಕೆ 50 ಪಟ್ಟು ಹೆಚ್ಚಳ!

ಹೆಚ್ಚಳ ಸಾಧ್ಯತೆ:
ಜುಲೈನಲ್ಲಿ ಕಡಿಮೆಯಾಗಿದ್ದ ಕೆಲಸ ದಿನಗಳು ಹಾಲಿ ಮತ್ತು ಮುಂದಿನ ತಿಂಗಳು ಹೆಚ್ಚಾಗಲಿವೆ. ಮೇನಲ್ಲಿ 30.7 ಮಿಲಿಯ ಮನೆಗಳು ಯೋಜನೆಯ ಅಡಿಯಲ್ಲಿ ಕೆಲಸ ಬಯಸಿದ್ದರೆ, ಜೂನ್‌ನಲ್ಲಿ 31.6 ಮಿಲಿಯ ಮನೆಗಳಿಗೆ ಏರಿಕೆಯಾಗಿತ್ತು. ಜುಲೈನಲ್ಲಿ ಮಳೆ ಹಿನ್ನೆಲೆಯಲ್ಲಿ 20.4 ಮಿಲಿಯನ್‌ ಮನೆಗಳು ಯೋಜನೆ ಅಡಿಯಲ್ಲಿ ಕೆಲಸ ಬಯಸಿದ್ದವು ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

73 ಸಾವಿರ ಕೋಟಿ ರೂ.- ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಮೊತ್ತ
37,500 ಕೋಟಿ ರೂ.- ಜುಲೈ ವರೆಗೆ ವೆಚ್ಚವಾದ ಮೊತ್ತ
5,517 ಕೋಟಿ ರೂ.- ರಾಜ್ಯಗಳು ಪಾವತಿ ಮಾಡಲು ಬಾಕಿ ಇರುವ ಮೊತ್ತ

Advertisement

Udayavani is now on Telegram. Click here to join our channel and stay updated with the latest news.

Next