Advertisement

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

06:07 PM Oct 19, 2021 | Team Udayavani |

ಬೆಂಗಳೂರು : 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಜನ ಸಾಧಕರು ಆಯ್ಕೆಯಾಗಿದ್ದಾರೆ. ಈ ಸಾಧಕರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅ.20 ರಂದು ನಡೆಯಲಿರುವ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರದಾನ ಮಾಡಿ ಗೌರವಿಸಲಿದ್ದಾರೆ ಎಂದು ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಾರಿಗೆ ಸಚಿವರಾದ  ಬಿ. ಶ್ರೀರಾಮುಲು ಅವರು ಪ್ರಕಟಿಸಿದರು.

Advertisement

ಶ್ರೀ ಕೆ. ಸಿ ನಾಗರಾಜು (ಸಮಾಜ ಸೇವೆ ) ಬೆಂಗಳೂರು ವಿಭಾಗ, ಶ್ರೀಮತಿ ಲಕ್ಷ್ಮಿಗಣಪತಿ ಸಿದ್ದಿ. (ಸಮಾಜ ಸೇವೆ) ಬೆಳಗಾವಿ ವಿಭಾಗ, ಪ್ರೊ. ಎಸ್. ಆರ್. ನಿರಂಜನ (ಶಿಕ್ಷಣ ಕ್ಷೇತ್ರ ) ಮೈಸೂರು ವಿಭಾಗ, ಶ್ರೀ. ಭಟ್ರಹಳ್ಳಿ ಗೂಳಪ್ಪ (ಸಮಾಜ ಸೇವೆ) ಕಲಬುರ್ಗಿ ವಿಭಾಗ, ಶ್ರೀ. ಟಿ. ಅಶ್ವತ್ಥರಾಮಯ್ಯ (ಸಮಾಜ ಸೇವೆ)ಬೆಂಗಳೂರು ಕೇಂದ್ರ ಸ್ಥಾನ ಹಾಗೂ ಶ್ರೀ ಜಂಬಯ್ಯ ನಾಯಕ ( ಸಮಾಜ ಸೇವೆ) ಅವರು 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಚಿವರು ಪ್ರಕಟಿಸಿದರು.

2020 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಐವರು ಸಾಧಕರು ಆಯ್ಕೆಯಾಗಿದ್ದಾರೆ. ಡಾ. ಕೆ.ಆರ್. ಪಾಟೀಲ್ ( ಸಮಾಜ ಸೇವೆ )- ಬೆಳಗಾವಿ ವಿಭಾಗ, ಡಾ. ಬಿ.ಎಲ್. ವೇಣು (ಸಾಹಿತ್ಯ )- ಬೆಂಗಳೂರು ವಿಭಾಗ, ಶ್ರೀಮತಿ ಗೌರಿ ಕೊರಗ( ಸಮಾಜಸೇವೆ)- ಮೈಸೂರು ವಿಭಾಗ, ಶ್ರೀ ಮಾರಪ್ಪ ನಾಯಕ ( ಸಂಘಟನೆ) – ಕಲಬುರಗಿ ವಿಭಾಗ ಮತ್ತು ಶ್ರೀ ತಿಪ್ಪೇಸ್ವಾಮಿ ಹೆಚ್(ಸಿರಿಗೆರೆ ತಿಪ್ಪೇಶ್)( ಸಮಾಜ ಸೇವೆ)- ಬೆಂಗಳೂರು ಕೇಂದ್ರಸ್ಥಾನ ಅವರು 2020 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕೋವಿಡ್ 19 ರ ಹಿನ್ನೆಲೆಯಲ್ಲಿ ಕಳೆದ 2020 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಐವರು ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ :ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

ಕಳೆದ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ 5 ಸಾಧಕರು ಹಾಗೂ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ 6 ಸಾಧಕರು ಸೇರಿದಂತೆ ಒಟ್ಟು 11 ಸಾಧಕರಿಗೆ ಅ. 20 ರಂದು ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸಾಧಕರಿಗೆ ಪ್ರಶಸ್ತಿ ಪತ್ರ, 20 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದು ಮೊತ್ತವನ್ನು ನೀಡಿ, ಗೌರವಿಸಲಾಗುವುದು ಎಂದು ಸಚಿವರು ತಿಳಿಸಿದರು.

Advertisement

ಮುಖ್ಯಮಂತ್ರಿಗಳಾದ  ಬಸವರಾಜ ಎಸ್. ಬೊಮ್ಮಾಯಿ ಅವರು ಅ.20 ಬೆಳಿಗ್ಗೆ 10.30ಕ್ಕೆ ಶಾಸಕರ ಭವನದ ಮುಂಭಾಗದ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಿದ್ದಾರೆ. ನಂತರ 11.00 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ, ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next