Advertisement

ಗಂಗಾವತಿ: ಶ್ರದ್ಧೆ ಭಕ್ತಿಯಿಂದ ಜರುಗಿದ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ

11:47 AM Aug 14, 2022 | Team Udayavani |

ಗಂಗಾವತಿ: ಶ್ರೀ ರಾಘವೇಂದ್ರ ಸ್ವಾಮಿಗಳ 351ನೇಯ ಉತ್ತರಾರಾಧನೆ ನಿಮಿತ್ತ ರವಿವಾರ (ಆ.14) ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಿಗ್ಗೆ ನೈರ್ಮಲ್ಯ ವಿಸರ್ಜನೆ ಜಲಾಭಿಷೇಕ ವಿವಿಧ ಪುಷ್ಪಗಳಿಂದ ಬೃಂದಾವನದ ಅಲಂಕಾರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

Advertisement

ಆರಾಧನೆ ನಿಮಿತ್ತ ಕೊನೆಯ ದಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ ರಾಯರ ಮಠದಿಂದ ಸುಂಕದಕಟ್ಟೆ ಹನುಮಪ್ಪನ ಗುಡಿಯವರೆಗೆ ಜರುಗಿತು.

ರಾಘವೇಂದ್ರ ಸ್ವಾಮಿಗಳ ಮಹಾ ರಥೋತ್ಸವದಲ್ಲಿ ಶಾಸಕ ಪರಣ್ಣ ಮುನವಳ್ಳಿ, ನಗರಸಭೆ ಸದಸ್ಯರಾದ ವಾಸು ದೇವ ನವಲಿ, ಶರಭೋಜಿ ರಾವ್, ಬಿಜೆಪಿ ಮುಖಂಡ ರಾಚಪ್ಪಸಿದ್ದಾಪುರ   ಸೇರಿ ಬ್ರಾಹ್ಮಣ ಹಾಗೂ ಆರ್ಯವೈಶ್ಯ ಸಮಾಜ ಸೇರಿ ವಿವಿಧ ಸಮಾಜಗಳ ಎಲ್ಲ ಮುಖಂಡರು ಹಾಗೂ ವಿವಿಧ ಭಜನಾ ಮಂಡಳಿಗಳ ಸದಸ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next