Advertisement

ಮಹಾರಾಷ್ಟ್ರದಲ್ಲಿ ಮತ್ತಷ್ಟು ಬಿಗಿ ಕ್ರಮ : ರಾತ್ರಿ 8ರಿಂದ ಮಾಲ್‌ ಮುಚ್ಚಲು ಆದೇಶ

02:07 AM Mar 28, 2021 | Team Udayavani |

ಹೊಸದಿಲ್ಲಿ/ಮುಂಬಯಿ: ಕೊರೊನಾ ಸಂಖ್ಯೆಯ ಏರಿಕೆಯಿಂದ ಕಂಗಾಲಾಗಿರುವ ಮಹಾರಾಷ್ಟ್ರದಲ್ಲಿ, ರಾಜ್ಯ ಸರಕಾರ ಮತ್ತಷ್ಟು ಬಿಗಿ ಕ್ರಮಗಳನ್ನು ಪ್ರಕಟಿಸಿದೆ. ಐದಕ್ಕಿಂತ ಹೆಚ್ಚು ಜನರು ಸೇರುವುದರ ವಿರುದ್ಧ ನಿಷೇಧ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ 1 ಸಾವಿರ ರೂ. ದಂಡ, ಮಾಸ್ಕ್ ಧರಿಸದೇ ಇರು ವವರಿಗೆ 500 ರೂ. ದಂಡ ವಿಧಿಸಲು ಆದೇಶ ನೀಡಲಾಗಿದೆ.

Advertisement

ಬೀಚ್‌, ಪಾರ್ಕ್‌, ಮಾಲ್‌ಗ‌ಳು, ರೆಸ್ಟೋರೆಂಟ್‌ಗಳು ರಾತ್ರಿ 8 ಗಂಟೆಯಿಂದ ಮಾರನೇ ದಿನ ಬೆಳಗ್ಗೆ 7 ಗಂಟೆಯ ವರೆಗೆ ಬಂದ್‌ ಮಾಡಬೇಕೆಂದು ಸೂಚನೆ ನೀಡಲಾ ಗಿದೆ. ಇದರ ಜತೆಗೆ ಎ.15ರ ವರೆಗೆ ಎಲ್ಲಾ ರೀತಿಯ ಕೊರೊನಾ ಪ್ರತಿಬಂಧಕ ನಿಯಮಗಳನ್ನು ವಿಸ್ತರಿಸಿ ಆದೇಶ ನೀಡಲಾಗಿದೆ. ಜತೆಗೆ ಶುಕ್ರವಾರವೇ ಪ್ರಕಟಿಸಿರುವಂತೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ರವಿವಾರದಿಂದ ಜಾರಿಯಾಗಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್‌, ಗುಟ್ಕಾ, ತಂಬಾಕು ಉತ್ಪನ್ನಗಳನ್ನು ತಿಂದು ಉಗುಳಬಾರದು ಎಂದು ಕಟ್ಟುನಿಟ್ಟಿನ ಆದೇಶ ಪ್ರಕಟಿಸಲಾಗಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೂ ಸೂಚಿಸಲಾಗಿದೆ.ಇದೇ ವೇಳೆೆ ಮಹಾರಾಷ್ಟ್ರದಲ್ಲಿ 35,726 ಹೊಸ ಪ್ರಕರಣಗಳು ಮತ್ತು 166 ಮಂದಿ ಅಸುನೀಗಿದ್ದಾರೆ. ಪ್ರಸಕ್ತ ವರ್ಷಕ್ಕೆ ಸಂಬಂಧಿಸಿದಂತೆ ಸೋಂಕು ಪ್ರಕರಣಗಳ ಏರಿಕೆ ಗರಿಷ್ಠ ಪ್ರಮಾಣ ದ್ದಾಗಿದೆ. ಮುಂಬಯಿಯಲ್ಲಿ 6,130 ಹೊಸ ಸೋಂಕು ಪ್ರಕರಣ ಗಳು ದೃಢಪಟ್ಟಿವೆ.

ಮುಂಬಯಿಯ ಕೊಳೆಗೇರಿಗಳಲ್ಲಿ ಸೋಂಕು ವರದಿಯಾಗುವುದಕ್ಕಿಂತ ವಸತಿ ಸಮುತ್ಛಯಗಳಲ್ಲಿಯೇ ಹೆಚ್ಚಾ ಗಿದೆ. ಹೀಗಾಗಿ 5 ಕೇಸುಗಳಿಗಿಂತ ಹೆಚ್ಚಿನ ಸೋಂಕು ಪ್ರಕಟವಾಗುವ ಸಮು ತ್ಛಯಗಳನ್ನು ಸೀಲ್‌ ಡೌನ್‌ ಮಾಡಲು ಮುಂಬಯಿ ಪಾಲಿಕೆ ನಿರ್ಧರಿಸಿದೆ. ಇದೇ ವೇಳೆ, ಎ.1ರಿಂದ ಗುಜರಾತ್‌ಗೆ ಇತರ ರಾಜ್ಯದವರು ಪ್ರವೇಶಿಸ ಬೇಕಿದ್ದರೆ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಪರೀಕ್ಷಾ ವರದಿ ಕಡ್ಡಾಯ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next