Advertisement

ಕೌನ್‌ ಬನೇಗ ಕರೋಡ್‌ಪತಿ 14ರಲ್ಲಿ ಕೋಟಿ ರೂ.ಗೆದ್ದ ಮೊದಲ ಮಹಿಳೆ

05:40 PM Sep 18, 2022 | Team Udayavani |

ಸದ್ಯ ಕೌನ್‌ ಬನೇಗ ಕರೋಡ್‌ಪತಿ ಕಾರ್ಯಕ್ರಮ ಸೀಸನ್‌ 14 ನಡೆಯುತ್ತಿದೆ. ಇದರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದ ಮಹಿಳೆ ಕವಿತಾ ಕೋಟಿ ರೂ. ಗೆದ್ದಿದ್ದಾರೆ.

Advertisement

ಅಷ್ಟಕ್ಕೇ ನಿಲ್ಲದ ಕಾರ್ಯಕ್ರಮದಲ್ಲಿ ಕವಿತಾ ಅವರಿಗೆ 7.5 ಕೋಟಿ ರೂ. ಗೆಲ್ಲುವುದುಕ್ಕೂ ಪ್ರಶ್ನೆ ಕೇಳಲಾಗಿದೆ. ಈ ಕಾರ್ಯಕ್ರಮದ ಪ್ರೋಮೋವನ್ನು ಸೋನಿ ಟಿವಿ ಹಂಚಿಕೊಂಡಿದೆ.

ವಿಶೇಷವೆಂದರೆ ಕೌನ್‌ ಬನೇಗ ಕರೋಡ್‌ಪತಿ ಸೀಸನ್‌ 14ರಲ್ಲಿ ಕೋಟಿ ಗೆದ್ದ ಮೊದಲ ಮಹಿಳೆಯಾಗಿರುವ ಕವಿತಾ ಓದಿರುವುದು ಬರೀ ದ್ವಿತೀಯ ಪಿ.ಯು.ವರೆಗೆ ಮಾತ್ರ. ಈ ಕಾರ್ಯಕ್ರಮ ಸೋಮವಾರ ಮತ್ತು ಮಂಗಳವಾರ ಸೋನಿ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next